Advertisement

ಮತ ಹಾಕಲಿದ್ದಾರೆ ಶತಾಯುಷಿಗಳು

06:05 AM Nov 22, 2017 | Team Udayavani |

ಅಹ್ಮದಾಬಾದ್‌: ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿ ಅಹ್ಮದಾಬಾದ್‌ ನಗರ ಮತ್ತು ಜಿಲ್ಲೆಯ ಮತದಾರರ ಪೈಕಿ ಕುತೂಹಲಕಾರಿ ಅಂಶವೊಂದಿದೆ. 90 ಮತ್ತು 100ರ ನಡುವಿನ ವಯೋಮಾನದ 7,181 ಮಂದಿ ಮತದಾರರಿದ್ದಾರೆ.

Advertisement

ಗುಜರಾತ್‌ ಮಾಹಿತಿ ಕೇಂದ್ರದ ಅಂಕೆ-ಸಂಖ್ಯೆಗಳ ಪ್ರಕಾರ ಅಹ್ಮದಾಬಾದ್‌ನಲ್ಲಿಯೇ 660 ಮಂದಿ ಶತಾಯುಷಿಗಳು ಡಿ. 14 ರಂದು ಹಕ್ಕು ಚಲಾಯಿಸಲಿದ್ದಾರೆ. ಇನ್ನು 90-100 ವರ್ಷ ವಯಸ್ಸಿನವರು ಜಿಲ್ಲೆಯಲ್ಲಿ 7,181 ಮಂದಿ ಇದ್ದಾರೆ. “1977ರಲ್ಲಿ ಪತಿ ನಿಧನ ಹೊಂದಿದರು. ಅದರ ಮಾರನೇ ದಿನ ಮತದಾನ ವಿತ್ತು. ಕುಟುಂಬದಲ್ಲಿ ದುಃಖದ ವಾತಾವರಣ ಇದ್ದರೂ ಹಕ್ಕು ಚಲಾವಣೆಗಾಗಿ ತೆರಳಿದ್ದೆ’ ಎಂದು ಶತಾಯುಷಿ ಮಹಿಳೆ ಉಮಿಯಾ ಬೆನ್‌ ಹೇಳುತ್ತಾರೆ. ಅಹ್ಮದಾಬಾದ್‌ ಜಿಲ್ಲೆಯಲ್ಲಿ 21 ಕ್ಷೇತ್ರಗಳಿದ್ದು,  ಈ ಪೈಕಿ ಶತಾಯುಷಿಗಳು ಅತಿ ಹೆಚ್ಚು ಇರುವ ಕ್ಷೇತ್ರ ವಿರಾಮ್‌ಗಮ್‌ (35). ಸಾನಂದ್‌ನಲ್ಲಿ 29, ಘಾಟೊÉàಡಿಯಾ 23, ನಾರನ್‌ಪುರ 42 ಮತ್ತು ವೆಜಾಲ್ಪುರ್‌ನಲ್ಲಿ 27 ಮಂದಿ ಇದ್ದಾರೆ. 

ಐವರ ಬದಲು: ಈ ನಡುವೆ ಕಾಂಗ್ರೆಸ್‌ 2 ಪಟ್ಟಿ ಸೇರಿಸಿ 90 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಐದು ಸ್ಥಾನಗಳಿಗೆ ಬದಲಾವಣೆ ತಂದಿದೆ. ಇದೊಂದು ವ್ಯೂಹಾತ್ಮಕ ಬದಲಾವಣೆ ಎಂದು ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ ಸಿನ್ಹ ಸೋಲಂಕಿ ಹೇಳಿದ್ದಾರೆ. 

ಹೋರಾಟ: ಈ ನಡುವೆ ಭಾವಾನಗರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ನ ಜಾತಿ ಮತ್ತು ವಂಶ ಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಟ ಎಂದಿದ್ದಾರೆ. ಗುಜರಾತ್‌ ಅನ್ನು ಪ್ರವಾಸಿ ಸ್ಥಳ  ಎಂದು ಭಾವಿಸಿ ರಾಹುಲ್‌ ಗಾಂಧಿ ಪದೇ ಪದೆ ಭೇಟಿ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ ಶಾ.

Advertisement

Udayavani is now on Telegram. Click here to join our channel and stay updated with the latest news.

Next