Advertisement

ಒಂದನೇ ತರಗತಿ ಸೇರ್ಪಡೆಗೆ ಸಾವಿರ ರೂ. ಆಫರ್‌!

11:51 PM May 20, 2019 | Team Udayavani |

ಬೆಳ್ಮಣ್‌: ಆಂಗ್ಲ ಮಾಧ್ಯಮ ಶಾಲೆಗಳ ವೈಭವೀಕರಣದಿಂದ ಬಹುತೇಕ ನೇಪಥ್ಯಕ್ಕೆ ಸರಿಯುತ್ತುರುವ ಸರಕಾರಿ ಕನ್ನಡ ಶಾಲೆಯನ್ನುಳಿಸಲು ಮುಂಡ್ಕೂರು ಗ್ರಾ.ಪಂ. ನಿವೃತ್ತ ಗ್ರಾಮ ಕರಣಿಕ ಅವಿಲ್‌ ಡಿ’ಸೋಜಾ ಹೊಸ ಆಂದೋಲನ ಪ್ರಾರಂಭಿಸಿದ್ದಾರೆ.

Advertisement

ಇಲ್ಲಿನ 120 ವರ್ಷಗಳ ಇತಿಹಾಸವುಳ್ಳ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಸೇರ್ಪಡೆಗೊಳ್ಳಲಿರುವ ವಿದ್ಯಾರ್ಥಿಗಳಿಗೆ ತಲಾ 1,000 ರೂ. ನೀಡುವ ಘೋಷಣೆ ಮಾಡಿದ್ದಾರೆ.

ಈಗಾಗಲೇ ಹಳೆ ವಿದ್ಯಾರ್ಥಿಗಳನ್ನೊಳ ಗೊಂಡ ನಮ್ಮ ಫ್ರೆಂಡ್ಸ್‌ ಮುಂಡ್ಕೂರು ಎನ್ನುವ ಬಳಗ ಇದೇ ಮಾದರಿಯ ಘೋಷಣೆಯನ್ನು ಮಾಡಿದ್ದು ಈ ಮೂಲಕ ಈ ಶಾಲೆಯ ಒಂದನೇ ತರಗತಿಗೆ ಸೇರ್ಪಡೆಗೊಳ್ಳಲಿರುವ ಮಗು 2,000 ರೂ. ಪಡೆಯಲಿದೆ.

ಸಾಮಾಜಿಕ ಕಳಕಳಿ
ಮುಂಡ್ಕೂರು ಗ್ರಾ.ಪಂ. ಸಹಿತ ವಿವಿಧೆಡೆ ಗ್ರಾಮ ಕರಣಿಕರಾಗಿ, ಮುಂಡ್ಕೂರು ಗ್ರಾ.ಪಂ. ಕಾರ್ಯದರ್ಶಿ ಯಾಗಿ ನಿವೃತ್ತರಾದ ಬಳಿಕ ಈಗಾಗಲೇ ತನ್ನ ಸಾಮಾಜಿಕ ಕಳಕಳಿಯ ಮೂಲಕ ಸಮಾಜದ ನೂರಾರು ಆಶಕ್ತರಿಗೆ ನೆರ ವಾಗಿದ್ದರು. ಇದೀಗ ಕನ್ನಡ ಶಾಲೆಯನ್ನು ಳಿಸಲು ಪಣತೊಟ್ಟ ಅವಿಲರ ಈ ಘನ ಕಾರ್ಯ ಶೈಕ್ಷಣಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಹಿಂದೆಯೂ ನೆರವು ನೀಡಿದ್ದರು
ಅವಿಲ್‌ ಡಿ’ಸೋಜಾ ಅವರು ಈ ಹಿಂದೆಯೂ ನಮ್ಮ ಶಾಲೆಗೆ ಕೊಡುಗೆ ನೀಡಿದ್ದರು. ಇಂತಹ ಶಿಕ್ಷಣ ಪ್ರೇಮಿಗಳು ಸಹಕಾರ ನೀಡಿದರೆ ಸರಕಾರಿ ಕನ್ನಡ ಶಾಲೆಗಳು ಉಳಿಯಲು ಸಾಧ್ಯ.
-ಪೂರ್ಣಿಮಾ ಭಟ್‌, ಮುಖ್ಯ ಶಿಕ್ಷಕಿ , ಮುಂಡ್ಕೂರು ಶಾಲೆ

Advertisement

ಬೆಂಬಲ ಅಗತ್ಯ
120 ವರ್ಷಗಳ ಇತಿಹಾಸ ಉಳ್ಳ ನಮ್ಮೂರ ಕನ್ನಡ ಶಾಲೆ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಇನ್ನೂ ಸುಭದ್ರವಾಗಿದೆ. ಮುಂದೆಯೂ ಶಿಕ್ಷಣ ಪ್ರೇಮಿಗಳ ಬೆಂಬಲ ಅಗತ್ಯ.
-ದಿನೇಶ್‌ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next