Advertisement
ದೇಶಾದ್ಯಂತ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದ್ದು, ಕಾರಾಗೃಹಗಳಲ್ಲಿಯೂ ಜನಸಂದಣಿ ಹೆಚ್ಚಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ನಿಯಂತ್ರಣ ಪ್ರಮುಖವಾಗಿದ್ದು, ಸುಮಾರು 12 ಸಾವಿರ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಅಫ್ಘಾನಿಸ್ತಾನ ಸರಕಾರ ಸೋಮವಾರ ತಿಳಿಸಿದೆ.
ಸರಕಾರ ಮತ್ತು ತಾಲಿಬಾನ್ ನಡುವಿನ ಯುದ್ಧದ ಸಮಯದಲ್ಲಿ ಬಂಧಿಸಲಾಗಿದ್ದ 5 ಸಾವಿರ ತಾಲಿಬಾನ್ ಸದಸ್ಯರನ್ನು ಬಿಡುಗಡೆ ಹೊಂದುವ ಕೈದಿಗಳ ಗುಂಪಿಂದ ಹೊರಗಿಡಲಾಗಿದೆ. ಈ ವಿಷಯವಾಗಿ ಸರಕಾರ ಮತ್ತು ದಂಗೆಕೋರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದು, ಒಂದು ವೇಳೆ ಅವರನ್ನು ಬಿಡುಗಡೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡರೂ ಅಷ್ಟು ಮಂದಿಯನ್ನು ಒಮ್ಮೆಲೆ ಬಿಡುಗಡೆ ಮಾಡದು. 100 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಕೈದಿಗಳ ಬಿಡುಗಡೆಯು ಒಮ್ಮೆ ಪೂರ್ಣಗೊಂಡರೆ, ದೇಶದ 36 ಸಾವಿರ ಕೈದಿಗಳ ಪೈಕಿ ಶೇ.60 ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧನದಿಂದ ಮುಕ್ತಿಗೊಳಿಸಿದಂತಾಗಲಿದೆ. ಆದರೂ ದೇಶದ ಕಾರಾಗೃಹಗಳಲ್ಲಿ 18 ಸಾವಿರಕ್ಕೂ ಕೈದಿಗಳಿದ್ದು, ಇದು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿದೆ ಎನ್ನಲಾಗುತ್ತಿದೆ ಮಾಧ್ಯಮದ ವರದಿಗಳು. ಅಫ್ಘಾನಿಸ್ತಾನದಲ್ಲೂ ಈಗಾಗಲೇ 1,700 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 57 ಮಂದಿ ಸಾವಿಗೀಡಾಗಿದ್ದಾರೆ.