Advertisement
ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ, ತಾಲೂಕು ತಹಶೀಲಾªರ್, ದಂಡಾ ಧಿಕಾರಿ ಪುಟ್ಟರಾಜು ಜತೆಗೂಡಿ ರಾಷ್ಟ್ರಧ್ವಜಾ ರೋಹಣ ನೆರವೇರಿಸಿ, ಪೊಲೀಸ್, ಹೋಂ ಗಾರ್ಡ್ಸ್, ಸ್ಕೌಟ್ಸ್ ದಳಗಳಿಂದ ಗೌರವ ರಕ್ಷೆ ಸ್ವೀಕರಿಸಿ, ಕನ್ನಡ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಸಜ್ಜುಗೊಳಿಸಲಾಗಿರುವ ಕೋವಿಡ್ ಸೆಂಟರ್‌ನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ದಯಾವತಿ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್, ಮುಖ್ಯಾಧಿಕಾರಿ ಇಂದೂ ಎಂ., ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್, ಸ. ಅರಣ್ಯಸಂರಕ್ಷಣಾಧಿಕಾರಿ ಸತೀಶ್ ಎನ್., ವಲಯ ಅರಣ್ಯಾಧಿಕಾರಿಗಳಾದ ಪ್ರಕಾಶ್, ಉಮೇಶ, ಅಗ್ನಿ ಶಾಮಕ ಠಾಣಾಧಿಕಾರಿ ಸ್ಟೀಫನ್ ಡಿ’ಸಿಲ್ವ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಶಶಿಕಲಾ, ತಾ| ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್., ತಾ| ಯುವಜನಸೇವಾ ಅಧಿಕಾರಿ ಶಿವಾನಂದ ಕಾಯ್ಕಿಣಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಕಲಹ ಪೀಡಿತ ಕಾಬೂಲ್ ನಿಂದ ದೆಹಲಿಗೆ ಬಂದಿಳಿದ 129 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ
Related Articles
Advertisement
ಪರಿಹಾರ ಚೆಕ್ ವಿತರಣೆಸಾಂಕೇತಿಕವಾಗಿ 94ಸಿ ಅನ್ವಯ 6, 94 ಸಿಸಿ ಅನ್ವಯ 7 ಕುಟುಂಬಗಳಿಗೆ ಮನೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಿದ ಅವರು, ಮೂಡುಬಿದಿರೆ ತಾಲೂಕಿನ ಸಾವಿರ ಕುಟುಂಬಗಳಿಗೆ ಮನೆ ನಿವೇಶನ ಒದಗಿಸಿಕೊಡುವ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋ ತ್ಸವವನ್ನು ಸ್ಮರಣೀಯ ವಾಗಿಸಬೇಕೆನ್ನುವ ತನ್ಮ ಕನಸು ನನಸಾಗಿದೆ ಎಂದರು. ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ತಾಲೂಕಿನ ವಿವಿಧ ಗ್ರಾಮಗಳ 23 ಮಂದಿಗೆ ರೂ. 5,04,200 ಮೊತ್ತದ ಪರಿಹಾರ ಚೆಕ್‌ಗಳನ್ನು ಅವರು ವಿತರಿಸಿದರು.