Advertisement
ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೇಂದ್ರ ಸರಕಾರ ಆಯೋಜಿಸಲಿರುವ ಆಂದೋಲನವಿದು. ರಾಜ್ಯದ ಆಯ್ದ ಒಂದು ಸಾವಿರ ಗ್ರಾ.ಪಂ.ಗಳಲ್ಲಿ ನಡೆಯಲಿದೆ.
ಸ್ವಚ್ಛ ಭಾರತ್ ಮಿಷನ್‌ನಡಿಯಲ್ಲಿ ಜೂ. 1ರಿಂದ 30ರ ವರೆಗೆ ಜಿಲ್ಲೆ, ತಾಲೂಕು, ಗ್ರಾ.ಪಂ.ಗಳಲ್ಲಿ ತಿಂಗಳ ಕಾಲ “ಸ್ವಚ್ಛಮೇವ ಜಯತೆ’ ಆಂದೋಲನದಡಿ ಅರಿವು ಕಾರ್ಯ ಕ್ರಮ ನಡೆಯಲಿದೆ. ಮುಖ್ಯ ವಾಗಿ ಜಿ.ಪಂ., ತಾ.ಪಂ., ಗ್ರಾ.ಪಂ.ಗಳ ಶಾಲಾ ಅಂಗನವಾಡಿ ಕಟ್ಟಡ, ಪಂ. ಕಚೇರಿ, ಸಾರ್ವಜನಿಕ ಸ್ಥಳಗಳು, ಸಮುದಾಯ ಶೌಚಾಲಯ, ಜನ ನಿಬಿಡ ಪ್ರದೇಶಗಳ ಕಟ್ಟಡ, ಬಹಿರ್ದೆಸೆ ಸ್ಥಳಗಳಲ್ಲಿ, ಬಸ್ ನಿಲ್ದಾಣಗಳ ಸಮೀಪ ಮಲ ಸೂಕ್ತ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಗೋಡೆ ಬರಹ ಬರೆಸಲಾಗುತ್ತದೆ. ಆಂದೋಲನದ ಮಾಹಿತಿಯಿರುವ ಪೋಸ್ಟರ್‌ಗಳನ್ನು ಗ್ರಾ.ಪಂ.ಗಳಿಗೆ ಹಂಚಲಾಗುತ್ತದೆ. ಆಂದೋಲನದ ಪ್ರಮುಖ ಉದ್ದೇಶಗಳನ್ನು ಕೆಎಸ್ಸಾ ರ್ಟಿಸಿ ಬಸ್ ನಿಲ್ದಾಣಗಳಲ್ಲಿ, ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ದೃಶ್ಯ, ಶ್ರವ್ಯ ಮಾಧ್ಯಮದ ಮೂಲಕ ಜಾಹೀರು ಮಾಡಲಾಗುತ್ತದೆ. ಮಕ್ಕಳಿಂದ ಜಾಥಾ, ಸ್ವಚ್ಛತಾ ಪ್ರತಿಜ್ಞಾ ವಿಧಿ, ಸ್ವಚ್ಛತೆಗಾಗಿ ಶ್ರಮದಾನ, ಪ್ರಬಂಧ ಸ್ಪರ್ಧೆ, ಶೌಚಾಲಯ ಬಳಕೆ ಅಭಿಯಾನ, ವಿಶೇಷ ಕೈತೊಳೆಯುವ ಅಭಿಯಾನ, ವಿಶೇಷ ಗ್ರಾಮ ಸಭೆಗಳ ಆಯೋಜನೆಯೂ ಇದರ ಭಾಗವಾಗಿದೆ.
Related Articles
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಛ ಮೇವ ಜಯತೆ ಆಂದೋಲನವನ್ನು ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತದೆ. ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.
– ಡಾ| ಸೆಲ್ವಮಣಿ ಆರ್.,
ದ.ಕ. ಜಿ.ಪಂ. ಸಿಇಒ
Advertisement
ಗ್ರಾಮಕ್ಕೆ ಬರಲಿದೆ ಸ್ವಚ್ಛತಾ ರಥಆಂದೋಲನದ ಮಹತ್ವವನ್ನು ಗ್ರಾಮೀಣ ಜನರಿಗೆ ತಿಳಿಸುವ ಉದ್ದೇಶದಿಂದ ಜೂ. 5ರಿಂದ ತಿಂಗಳ ಕಾಲ 2-3 ಸ್ವಚ್ಛತಾ ರಥಗಳು ಪ್ರತೀ ಜಿಲ್ಲೆಯಲ್ಲಿ ಸಂಚರಿಸಲಿವೆ. -ನವೀನ್ ಭಟ್ ಇಳಂತಿಲ