Advertisement

ರಾಮದೇವ್‌ ವಿರುದ್ಧ ಸಾವಿರ ಕೇಸುಗಳು!

12:58 AM Nov 19, 2019 | Sriram |

ಯೋಗದಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದರೂ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ನನಗೆ ಬೈಪಾಸ್‌ ಸರ್ಜರಿಯಾಗಿದೆ, ಜರ್ಮನಿ ಯಲ್ಲಿ ಕಾಲಿನ ಮಂಡಿ ಸರ್ಜರಿಯಾಗಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ನಾನು ಇದೆಲ್ಲವನ್ನೂ ಎದುರಿಸುತ್ತಿದ್ದೇನೆ ಎಂದು ರಾಮದೇವ್‌ ವಿಷಾದ ವ್ಯಕ್ತಪಡಿಸಿದರು.

Advertisement

ಉಡುಪಿ: ಯೋಗ ಗುರು ಬಾಬಾ ರಾಮದೇವ್‌ ವಿರುದ್ಧ ಕೆಳ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಚ ನ್ಯಾಯಾಲಯದ ವರೆಗೆ ಸುಮಾರು ಒಂದು ಸಾವಿರ ಕೇಸುಗಳಿವೆ. ಇದರಲ್ಲಿ ಕಪಿಲ್‌ ಸಿಬಲ್‌ರಂತಹ ಹಿರಿಯ ನ್ಯಾಯವಾದಿಗಳೂ ರಾಮದೇವ್‌ ವಿರುದ್ಧ ವಾದಿಸುತ್ತಿದ್ದಾರೆ…

ರಾಜಾಂಗಣ ಪಾರ್ಕಿಂಗ್‌ ಪ್ರದೇಶದಲ್ಲಿ ಸೋಮವಾರ ನಡೆದ ಮೂರನೆಯ ದಿನದ ಯೋಗ ಶಿಬಿರದಲ್ಲಿ ಮಾತನಾಡಿದ ಅವರು ಈ ವಿಷಯ ಹೊರಗೆಡಹಿದರು. ತಾನು ಯಾವುದೇ ಅಪರಾಧ ಪ್ರಕರಣಗಳನ್ನು ನಡೆಸದಿದ್ದರೂ ಈ ಪರಿಸ್ಥಿತಿ ಇದೆ ಎಂದರು.

ನನ್ನನ್ನು ಕೆಲವರು ಬ್ರಾಹ್ಮಣ ವಿರೋಧಿಗಳೆನ್ನುತ್ತಾರೆ. ಕೆಲವರು ಹಿಂದುಳಿದ ವರ್ಗಗಳ ವಿರೋಧಿ ಎನ್ನುತ್ತಾರೆ. ಇ.ವಿ.ರಾಮಸ್ವಾಮಿ ಅವರ ಬೆಂಬಲಿಗರು ಬೌದ್ಧಿಕ ಉಗ್ರಗಾಮಿಗಳು ಎಂದು ಇತ್ತೀಚಿಗೆ ಟಿ.ವಿ. ಸಂದರ್ಶನವೊಂದರಲ್ಲಿ ಹೇಳಿದ್ದು ರವಿವಾರ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿತ್ತು. ನಾನು ದಲಿತರಿಗೂ ಸನ್ಯಾಸದೀಕ್ಷೆ ನೀಡಿದ್ದೇನೆ. ನಾನೆಂದೂ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ನೋಡಿಲ್ಲ. “ಪೆರಿಯಾರ್‌ ಅನುಯಾಯಿಗಳು ನೇತ್ಯಾತ್ಮಕ ವಿಷಯಗಳನ್ನೇ ಸಮಾಜದಲ್ಲಿ ಬಿತ್ತುತ್ತಾರೆ. ಆಗ ಅವರು ನಡೆಸಿದಂತೆ ಈಗೇನಾದರೂ ನಡೆಸಿದರೆ ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುತ್ತಿರಲಿಲ್ಲ’ ಎಂದು ರಾಮದೇವ್‌ ಹೇಳಿದರು.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳು ದೇಹದ ಒಂದೊಂದು ಅಂಗವನ್ನು ಪ್ರತಿಪಾದಿಸುತ್ತಿವೆ. ತಲೆ ಭಾಗ ಬ್ರಾಹ್ಮಣನಾಗಿದ್ದು ಇದು ಕಾಲೆಂಬ ಶೂದ್ರ ವರ್ಣಕ್ಕೆ ತಲೆಬಾಗುತ್ತವೆ ಎಂದರೂ ಇದರಲ್ಲಿ ಹುಳುಕು ಹುಡುಕುತ್ತಾರೆ. ಭಗವಾನ್‌ ಕೃಷ್ಣ ಒಬಿಸಿ ವರ್ಗದ ಗುರು. ರಾಮ ಮತ್ತು ಕೃಷ್ಣ ಅವರು ಸೂರ್ಯ ಮತ್ತು ಚಂದ್ರವಂಶದಲ್ಲಿ ಬಂದವರು. ನಾವು ಜಾತಿವಾದವನ್ನು ನೋಡದೆ ಭಾರತೀಯ ಎನ್ನುವುದನ್ನು ಮಾತ್ರ ನೋಡುತ್ತೇವೆ ಎಂದರು.

Advertisement

ನಾನು ಸನ್ಯಾಸಿಯಾಗಿರಬಹುದು. ನಮ್ಮ ಉತ್ಪನ್ನಗಳನ್ನು ವ್ಯಾಪಾರ ಮಾಡುವ ಉದ್ದೇಶದಿಂದ ಮಾಡುತ್ತಿಲ್ಲ. ಜನರಿಗೆ ಆರೋಗ್ಯಕರವಾದ ವಸ್ತು ಗಳನ್ನು ಕೊಡಬೇಕೆನ್ನುವುದು ಉದ್ದೇಶ. ನನ್ನಲ್ಲಿ 500 ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಇದಕ್ಕಾಗಿ 500 ಕೋ.ರೂ. ಯೋಜನೆ ನಡೆಯುತ್ತಿದೆ ಎಂದರು.

ಮಧುಮೇಹ ಸಮಸ್ಯೆಗೆ ಮಂಡೂಕಾಸನ, ಉತ್ತಾನಪಾದಾಸನ ಅತ್ಯುತ್ತಮ ಪರಿಹಾರ. ಬೆನ್ನುಹುರಿ ಸಮಸ್ಯೆಗೆ ನಿಂತುಕೊಂಡು ಮಾಡುವ ಯೋಗಾಸನ ಗಳು ಪರಿಣಾಮಕಾರಿ ಎಂದರು. ಪರ್ಯಾಯ ಶ್ರೀಪಲಿಮಾರು ಶ್ರೀಪಾದರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next