Advertisement

ಸಾವಿರ ಹಾಸಿಗೆ ಆಸ್ಪತ್ರೆ ಶೀಘ್ರ ನಿರ್ಮಾಣ

11:56 AM Jun 09, 2019 | Suhan S |

ಕೊಪ್ಪಳ: ನಗರದಲ್ಲಿ ಶೀಘ್ರದಲ್ಲೇ ಸಾವಿರ ಹಾಸಿಗೆಯುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.

Advertisement

ತಾಲೂಕಿನ ಕಾತರಕಿ, ಗುಡ್ಲಾನೂರು, ಬೇಳೂರು, ಡೊಂಬರಳ್ಳಿ, ಬೂದಿಹಾಳ, ಬಿಸರಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೊಪ್ಪಳಕ್ಕೆ 116 ಕೋಟಿ ವೆಚ್ಚದಲ್ಲಿ ಸಾವಿರ ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಇನ್ನೊಂದು ಜಿಲ್ಲಾಸ್ಪತ್ರೆ ನಗರದಲ್ಲಿ ಶೀಘ್ರ ನಿರ್ಮಾಣವಾಗಲಿದೆ. ಡೊಂಬರಹಳ್ಳಿ- ಹಳೇ ಗೊಂಡಬಾಳ ನಡುವೆ ಹಿರೇಹಳ್ಳದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಮಾಡಲಾಗುತ್ತಿದ್ದು, ಇನ್ನೇನು ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಸೇತುವೆ ನಿರ್ಮಾಣದಿಂದ ಈ ಭಾಗದ ರೈತರಿಗೆ ವರದಾನವಾಗಲಿದೆ. ಮೈತ್ರಿ ಸರ್ಕಾರದಲ್ಲಿ ರೈತಪರ ಅನೇಕ ಯೋಜನೆಗಳು ಅನುಷ್ಠಾನಗೊಂಡಿದ್ದು, ಕೊಪ್ಪಳ ಕ್ಷೇತ್ರಕ್ಕೆ ನೀರಾವರಿಗೆ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದರು.

ಕೊಪ್ಪಳ ಕ್ಷೇತ್ರವು ಬರುವ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸಲಿದೆ. ತುಂಗಾಭದ್ರಾ ನದಿಯ ಹಿನ್ನೀರಿನ ಸದ್ಬಳಕೆ ಮಾಡಿಕೊಂಡು ಕೊಪ್ಪಳ ಏತ ನೀರಾವರಿಗೆ ಹೆಚ್ಚಿನ ಭೂಮಿಯು ಒಳಪಡುವಂತೆ ಮಾಡಿ, ಸತತವಾಗಿ ಭೀಕ‌ರ ಬರಗಾಲಕ್ಕೆ ತುತ್ತಾಗಿರುವ ಕೊಪ್ಪಳ ಕ್ಷೇತ್ರವನ್ನು ಒಂದು ಮಾದರಿಯ ನೀರಾವರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಎಸ್‌.ಬಿ. ನಾಗರಳ್ಳಿ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ಯಂಕನಗೌಡ್ರು ಹಿರೇಗೌಡ್ರು, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ್‌, ಮುಖಂಡರಾದ ಕೃಷ್ಣ ಇಟ್ಟಂಗಿ, ಕೇಶವರೆಡ್ಡಿ, ಶಂಕರಗೌಡ್ರು ಹಿರೇಗೌಡ್ರು, ಜಿಲ್ಲಾ ಎಸ್‌. ಘಟಕದ ಅಧ್ಯಕ್ಷ ಗಾಳೇಪ್ಪ ಪೂಜಾರ, ಕೃಷ್ಣ ಗಲಬಿ, ಬಸವರೆಡ್ಡಿ ಕರೆಡ್ಡಿ, ರಾಮನಗೌಡ್ರು, ಅಳವಂಡಿ ಪಿಎಸ್‌ಐ ರಾಮಣ್ಣ, ವಕ್ತಾರ ಕುರಗೋಡ ರವಿ ಯಾದವ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next