Advertisement

ನೂತನ ಕೃಷಿ ನೀತಿ: ಪಾಟ್ನಾದಲ್ಲಿ ಸಾವಿರಾರು ಮಂದಿ ಪ್ರತಿಭಟನೆ, ಲಾಠಿಚಾರ್ಜ್, ಘರ್ಷಣೆ

03:57 PM Dec 29, 2020 | Nagendra Trasi |

ಪಾಟ್ನಾ:ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ನೂತನ ಕೃಷಿ ನೀತಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪಾಟ್ನಾದಲ್ಲಿ ರೈತ ಸಂಘಟನೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಮಂಗಳವಾರ (ಡಿಸೆಂಬರ್ 29) ರಾಜಭವನ ಚಲೋ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ.

Advertisement

ರಾಜಭವನದತ್ತ ರೈತರ ನಡಿಗೆ ಎಂಬ ಪ್ರತಿಭಟನಾ ಜಾಥಾವನ್ನು ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹಾಗೂ ಇತರ ಎಡಪಕ್ಷದ ಸಂಘಟನೆಗಳು ಆಯೋಜಿಸಿದ್ದವು.

ಮಂಗಳವಾರ ಮಧ್ಯಾಹ್ನ ಗಾಂಧಿ ಮೈದಾನದಲ್ಲಿ ಎಡಪಕ್ಷದ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದು, ಅಲ್ಲಿಂದ ಜಾಥಾ ಹೊರಟಿದ್ದರು. ಆದರೆ ಡಾಕ್ ಬಂಗ್ಲೊ ಚೌಕದ ಸಮೀಪ ಪೊಲೀಸರು ಜಾಥಾವನ್ನು ತಡೆದಿದ್ದರು. ರಾಜಭವನದತ್ತ ತೆರಳದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟಿರುವುದಾಗಿ ವರದಿ ತಿಳಿಸಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್ ಅನ್ನು ಮುರಿಯಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು  ಘರ್ಷಣೆಗೆ ಕಾರಣವಾಗಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ:ಭಾರೀ ಹಿಮಗಾಳಿ: ದೆಹಲಿ ನಿವಾಸಿಗಳಿಗೆ ಆರೆಂಜ್ ಅಲರ್ಟ್, ಪಂಜಾಬ್ ಗೆ ರೆಡ್ ಅಲರ್ಟ್ ಘೋಷಣೆ

ಕಳೆದ ಒಂದು ತಿಂಗಳಿನಿಂದ ದೆಹಲಿ ಗಡಿಪ್ರದೇಶದಲ್ಲಿ ಪಂಜಾಬ್, ಹರ್ಯಾಣ ರೈತರು ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಜತೆಗೆ ನಡೆದ ಐದು ಸುತ್ತಿನ ಮಾತುಕತೆ ವಿಫಲಗೊಂಡಿತ್ತು. ಏತನ್ಮಧ್ಯೆ ರೈತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಡಿಸೆಂಬರ್ 30ರಂದು ಮತ್ತೆ ರೈತ ಮುಖಂಡರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next