Advertisement

ಸ್ಟಾರ್ಟಪ್‌ಗೆ ಸಾವಿರ ಕೋ. ರೂ.

12:42 AM Jan 17, 2021 | Team Udayavani |

ಹೊಸದಿಲ್ಲಿ: ದೇಶದ ಸ್ಟಾರ್ಟಪ್‌ಗ್ಳಿಗೆ ಉತ್ತೇಜನ ನೀಡಲು ಮತ್ತು ಉದಯೋನ್ಮುಖ ಉದ್ಯಮಿಗಳ ಹೊಸ ಪರಿಕಲ್ಪನೆಗಳ ಸಾಕಾರಕ್ಕೆ ಅನುವು ಮಾಡಿಕೊಡಲು ಒಂದು ಸಾವಿರ ಕೋಟಿ ರೂ.ಗಳ “ಸ್ಟಾರ್ಟಪ್‌ ಇಂಡಿಯಾ ಮೂಲ ಧನ’ವನ್ನು ಪ್ರಧಾನಿ ಮೋದಿ ಶನಿವಾರ ಘೋಷಿಸಿದ್ದಾರೆ.

Advertisement

“ಪ್ರಾರಂಭ: ಸ್ಟಾರ್ಟಪ್‌ ಇಂಡಿಯಾ ಅಂತಾರಾಷ್ಟ್ರೀಯ ಶೃಂಗ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ನವೋದ್ಯಮಗಳ ಪ್ರಗತಿಯಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಮತ್ತು ಜನರ ಜೀವನಮಟ್ಟ ಸುಧಾರಣೆಯಾಗುತ್ತದೆ.

ಹೀಗಾಗಿ ಇಂಥ ನವೋದ್ಯಮಗಳಿಗೆ ಆರಂಭಿಕ ಬಂಡವಾಳ ಒದಗಿಸುವ ಉದ್ದೇಶದಿಂದ 1,000 ಕೋಟಿ ರೂಪಾಯಿಗಳ ಮೂಲ ನಿಧಿಯನ್ನು ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 2014ರಲ್ಲಿ ದೇಶದಲ್ಲಿ ಕೇವಲ ನಾಲ್ಕು ಸ್ಟಾರ್ಟಪ್‌ಗ್ಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 30 ದಾಟಿದೆ ಎಂದೂ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next