ಸಿಲ್ಚಾರ್ : ಅಸ್ಸಾಂನ ಸಿಲ್ಚಾರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಇಡಲಾಡ ಕೋವಿಡ್ ಲಸಿಕೆ ‘ಕೊವಿಶೀಲ್ಡ್’ ಹೆಪ್ಪುಗಟ್ಟಿದ ಘಟನೆ ನಡೆದಿದೆ. ಪ್ರೀಮಿಯರ್ ಮೆಡಿಕಲ್ ಫೆಸಿಲಿಟಿ ಹೊಂದಿರುವ ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಸಿಲ್ಚಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ.
100 ಸೀಸೆಯಲ್ಲಿ ಸಂಚಿತವಾಗಿ ಇರಿಸಲಾಗಿದ್ದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಯ 1000 ಡೋಸ್ ಹೆಪ್ಪುಗಟ್ಟಿದೆ.
ಇದನ್ನೂ ಓದಿ : ದೇಶದಲ್ಲಿ ಮತ್ತೆ ಕೋವಿಡ್ ಸೋಂಕು ಏರಿಕೆ
ಸಿಲ್ಚಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯು ಝಿರೋ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕೊವಿಶೀಲ್ಡ್ ಲಸಿಕೆಯನ್ನು ಸಂಗ್ರಹಿಸಿಟ್ಟ ಕಾರಣ ಲಸಿಕೆ ಹೆಪ್ಪುಗಟ್ಟಿದೆ ಎಂದು ವರದಿಯಾಗಿದೆ.
ಅಲ್ಲಿನ ಆರೋಗ್ಯ ಇಲಾಖೆ ಈಗಾಗಲೇ ಘಟನೆಯ ಕುರಿತು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿ, ಲಸಿಕೆಯ ಗುಣಮಟ್ಟದ ಬಗ್ಗೆ ಖಚಿತಪಡಿಸಿಕೊಳ್ಳಲು ಲ್ಯಾಬ್ ಗೆ ಕಳುಹಿಸಿಕೊಟ್ಟಿದೆ.
2 ರಿಂದ 8 ಡಿಗ್ರಿ ಸೆಲ್ಸಿಯಸ್ ಪ್ರತಿಕೂಲ ತಾಪಮಾನದಲ್ಲಿ ಇಡಬೇಕಾಗಿದ್ದ ಲಸಿಕೆಯನ್ನು ಝೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿಡಲಾಗಿದ್ದರಿಂದ ಲಸಿಕೆ ಹೆಪ್ಪುಗಟ್ಟಿರುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಇಂದು ಮತ್ತಷ್ಟು ಸ್ಟಾರ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್