Advertisement

ತೌಖ್ತೇ ಚಂಡಮಾರುತ : ಗೋವಾ ಕಡಲ ತೀರದಲ್ಲಿ ಅವಾಂತರ

04:40 PM May 16, 2021 | Team Udayavani |

ಪಣಜಿ: ಕಳೆದ ಕೆಲ ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಖ್ತೇ ಚಂಡಮಾರುತದ ಪರಿಣಾಮವಾಗಿ ಗೋವಾ ರಾಜ್ಯಾದ್ಯಂತ ಭಾರಿ ಗಾಳಿ ಸಹಿತ ಮಳೆಯಾಗಿದೆ.

Advertisement

ಇದನ್ನೂ ಓದಿ :  ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

ಭಾನುವಾರ(ಮೇ.16) ಬೆಳಿಗ್ಗೆ ಗೋವಾದ ಕಡಲ ತೀರದಲ್ಲಿ ಚಂಡಮಾರುತದ ಭೀಕರತೆ ಆತಂಕ ಸೃಷ್ಠಿಸುವಂತಾಗಿದೆ. ತೀರ ಭಾಗದಲ್ಲಿ ಚಂಡ ಮಾರುತದ ಕಾರಣದಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ತೀರ ವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳಲಾರಂಭಿಸಿದ್ದು, ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಸಮುದ್ರದ ಅಲೆಗಳ ರಭಸಕ್ಕೆ ಕೆಲವೆಡೆ ಕಡಲಕೊರೆತವುಂಟಾಗುತ್ತಿದೆ.  ರಾಜ್ಯದ ಹಲವೆಡೆ ಬೃಹತ್ ಗಾತ್ರದ ಮರಗಳು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಲವು ಮನೆಗಳ ಮೇಲೆ ಮರಗಳು ಬಿದ್ದು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

Advertisement

ಈ ಕುರಿತಂತೆ ಮಾಹಿತಿ ನೀಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಎನ್‍ ಡಿ ಆರ್‍ ಎಫ್ ತಂಡ ಶನಿವಾರವೇ(ಮೇ.15) ರಾಜ್ಯಕ್ಕೆ ಆಗಮಿಸಿದ್ದು, ಶಸ್ತ್ರ ಸಜ್ಜಿತವಾಗಿದೆ. ಯಾವುದೇ ತುರ್ತು ಸಂದರ್ಭವನ್ನು ಎದುರಿಸಲು ಸಜ್ಜಾಗಿದೆ. ಮುಂದಿನ ಮೂರು ದಿನಗಳ ವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಮತ್ತು ನದಿ ತೀರಗಳಲ್ಲಿ ವಾಸಿಸುವ ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಜನರಿಂದ ಹೆಚ್ಚಿನ ದರ ವಸೂಲು ಮಾಡುವ ಆಸ್ಪತ್ರೆಗಳ ವಿರುದ್ಧ ಕ್ರಮ: ರಮೇಶ ಜಾರಕಿಹೊಳಿ

Advertisement

Udayavani is now on Telegram. Click here to join our channel and stay updated with the latest news.

Next