Advertisement

ಗಾರ್ಮೆಂಟ್ಸ್‌ ಫ್ಯಾಕ್ಟರಿ ಸ್ಥಾಪನೆಗೆ ಚಿಂತನೆ

12:04 PM Jun 25, 2019 | Team Udayavani |

ರಾಮನಗರ: ನಿರುದ್ಯೋಗಿ ಮಹಿಳೆಯರಿಗೆ ಉದ್ಯೋ ಗ ಸೃಜಿಸುವ ಸಲುವಾಗಿ ನಗರ ವ್ಯಾಪ್ತಿಯಲ್ಲೇ ಗಾರ್ಮೆಂಟ್ಸ್‌  ಫ್ಯಾಕ್ಟರಿ ಆರಂಭಕ್ಕೆ ತಾವು ಚಿಂತನೆ ನಡೆಸಿರುವುದಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

Advertisement

ನಗರದ ಬೀಡಿ ಕಾಲೋನಿಯಲ್ಲಿ ಕೋಟಿ ರೂ. ವೆಚ್ಚದ ಮೂಲ ಸೌಕರ್ಯಗಳನ್ನು ವೃದ್ಧಿಸುವ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಗಳಾಗುವುದರ ಜೊತೆಗೆ ಕುಟುಂಬ ಪೋಷಣೆಗೂ ಸಹಕಾರ ನೀಡಬೇಕಾಗಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್‌, ಫ್ಯಾಕ್ಟರಿ ಸ್ಥಾಪನೆಗೆ ತಾವು ಉದ್ದೇಶಿಸಿರುವುದಾಗಿ ಹೇಳಿದರು. ಈಗಾಗಲೇ ತಾವು ಕಂಪನಿಯೊಂದರ ಜೊತೆ ಮಾತುಕತೆ ನಡೆಸಿದ್ದು, ನಗರ ವ್ಯಾಪ್ತಿಯಲ್ಲಿ ಸ್ಥಳದ ಹುಡುಕಾಟ ನಡೆದಿದೆ ಎಂದರು.

10 ಕೋಟಿ ರೂ.. ಅನುದಾನ ತಂದಿದ್ದೇನೆ: ಅಲ್ಪಸಂ ಖ್ಯಾತ ಸಮುದಾಯದವರೇ ಹೆಚ್ಚು ವಾಸಿಸುವ ವಾರ್ಡುಗಳಲ್ಲಿ ಮೂಲ ಸೌಕರ್ಯ ಒದಗಿಸಲು ತಾವು ಶಾಸಕರಾದ ನಂತರ 10 ಕೋಟಿ ರೂ. ಅನುದಾನ ತಂದಿರುವುದಾಗಿ ತಿಳಿಸಿ, ಅಲ್ಪಸಂಖ್ಯಾತರ ಇಲಾಖೆಯ ಮೂಲಕವೇ ಅನುದಾನ ಬಿಡುಗಡೆಯಾಗಿದೆ. ಲೋಕ ಸಭಾ ಚುನಾವಣೆ ಇದ್ದಿದ್ದರಿಂದ ಕಾಮಗಾರಿಗಳಿಗೆ ಚಾಲನೆ ಸಿಕ್ಕಿರಲಿಲ್ಲ. ಇದೀಗ ಅಗತ್ಯ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. 10 ಕೋಟಿ ರೂ. ಅನುದಾನದ ಪೈಕಿ 1 ಕೋಟಿ ರೂ. ಬೀಡಿ ಕಾರ್ಮಿಕರ ಕಾಲೋನಿಯ ಬಳಕೆಗೆ ಕೊಡಲಾಗಿದೆ ಎಂದು ತಿಳಿಸಿದರು.

3 ಸಾವಿರ ನಿವೇಶನ ವಿತರಣೆ ಗುರಿ: ಕ್ಷೇತ್ರ ವ್ಯಾಪ್ತಿ ಯಲ್ಲಿ ನಿವೇಶನ ರಹಿತ ಕುಟುಂಬಗಳಿಗೆ 3 ಸಾವಿರ ನಿವೇಶನಗಳನ್ನು ವಿತರಿಸುವ ಗುರಿ ಹೊಂದಿರುವುದಾಗಿ, 5 ಸಾವಿರ ಮನೆ ರಹಿತ ಕುಟುಂಬಗಳಿಗೆ ಮನೆ ಕಟ್ಟಿಸಿ ಕೊಡಲು ಸಹ ತಾವು ಉದ್ದೇಶಿರಿಸುವುದಾಗಿ ತಿಳಿಸಿದರು.

Advertisement

ಶಾದಿ ಮಹಲ್ ಕಾಮಗಾರಿ ಪೂರ್ಣಗೊಳಿಸಲು ಸಹಕಾರ: ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ನಿರ್ಮಾಣ ಪೂರ್ಣ ಹಂತದಲ್ಲಿರುವ ಶಾದಿ ಮಹಲ್ ಕಟ್ಟಡ ಪೂರ್ಣಗೊಳಿಸಲು ನೆರವು ಬೇಕು ಎಂದು ಆ ಭಾಗದ ಜನತೆ ಬೇಡಿಕೆ ಇಟ್ಟಾಗ ಪ್ರತಿಕ್ರಿಯಿಸಿದ ಶಾಸಕರು ಅಗತ್ಯ ಸಹಕಾರವನ್ನು ಕೊಡುವುದಾಗಿ ಭರವಸೆ ನೀಡಿದರು.

ಹಕ್ಕು ಪತ್ರ ಕೊಡಿಸಲು ಮನವಿ: 2005ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಧರಂಸಿಂಗ್‌ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬೀಡಿ ಕಾಲೋನಿ ನಿರ್ಮಾ ಣಕ್ಕೆ ಅನುಮತಿ ಸಿಕ್ಕಿದೆ. ಕಾಲೋನಿಯಲ್ಲಿ ಸದ್ಯ 489 ಮನೆ ನಿರ್ಮಾಣವಾಗಿದೆ. ರಾಜೀವ್‌ ಗಾಂಧಿ ಹೌಸಿಂಗ್‌ ಕಾರ್ಪೊರೇಷನ್‌ ಆಶ್ರಯದಲ್ಲಿ ಮನೆಗಳು ನಿರ್ಮಾಣವಾಗಿವೆ. ಇಷ್ಟು ವರ್ಷಗಳಾದರೂ ಸದರಿ ಮನೆಗಳು ಕಾರ್ಪೊರೇಷನ್‌ನ ಎಂ.ಡಿ. ಅವರ ಹೆಸರಿ ನಲ್ಲೇ ಇದೆ. ಮನೆಗಳಲ್ಲಿ ವಾಸಿಸುವ ಕುಟುಂಗಳಿಗೆ ಮನೆ ಒಡೆತನದ ಹಕ್ಕು ಪತ್ರಗಳು ಸಿಕ್ಕೇ ಇಲ್ಲ ಎಂದ ಅವರು ಬೇಸರ ವ್ಯಕ್ತಪಡಿಸಿದರು. ನಗರಸಭೆಯ ಮೂಲಕ ಹಕ್ಕು ಪತ್ರಗಳನ್ನು ಬಡ ಕುಟುಂಬಗಳಿಗೆ ಕೊಡಿಸಿ ಎಂದು ಶಾಸಕರಿಗೆ ಮನವಿ ಮಾಡಿದರು.

ಬೀಡಿ ಕಾರ್ಮಿಕರಿಂದ ಬೇಡಿಕೆ: ಬೀಡಿ ಕಾಲೋನಿ ಯಲ್ಲಿ 489 ಬೀಡಿ ಕಾರ್ಮಿಕರಿಗೆ ಮನೆ ಸಿಕ್ಕಿದೆ. ಆದರೆ ಇನ್ನು 1693 ಕುಟುಂಬಗಳಿಗೆ ಸೂರಿಲ್ಲದೆ ನರಳುತ್ತಿ ದ್ದಾರೆ. ಈ ಕುಟುಂಬಗಳಿಗೆ ನಿವೇಶನಗಳನ್ನು ವಿತರಿ ಸಲು ಕನಿಷ್ಠ 25 ಎಕರೆ ಭೂಮಿ ಬೇಕಾಗಿದೆ. ಭೂಮಿ ಕೊಡಿಸಿ, ಮನೆ ನಿರ್ಮಿಸಿಕೊಳ್ಳಲು ಸಹಕಾರಕ್ಕೆ ಜಿಯಾ ವುಲ್ಲ ಬೀಡಿ ಕಾರ್ಮಿಕರ ಪರ ಬೇಡಿಕೆ ಇಟ್ಟರು. ಬೀಡಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ಕೊಟ್ಟ ಶಾಸಕರು ಸ್ಥಳೀಯರಿಂದ ಅಭಿನಂದನೆ ಸ್ವೀಕರಿಸಿದರು.

ಜೆಡಿಎಸ್‌ ಪ್ರಮುಖರಾದ ರಾಜಶೇಖರ್‌, ಬಿ.ಉಮೇಶ್‌, ಗೇಬ್ರಿಯಲ್, ಫ‌ರ್ವಿಜ್‌ ಪಾಷಾ ಜಯಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next