Advertisement

6 ವರ್ಷ ನಂತರದ ಮಕ್ಕಳಿಗೆ ಆನ್‌ಲೈನ್‌ ಪಾಠಕ್ಕೆ ಚಿಂತನೆ

06:53 AM Jun 01, 2020 | Suhan S |

ಚಿತ್ರದುರ್ಗ: ಆನ್‌ಲೈನ್‌ ತರಗತಿ ಬಗ್ಗೆ ಚರ್ಚೆ ನಡೆದಿದ್ದು, ಯಾವ ಹಂತದ ಮಕ್ಕಳಿಗೆ ಆನ್‌ಲೈನ್‌ ಸೂಕ್ತ ಎನ್ನುವ ಬಗ್ಗೆ ಅಧ್ಯಯನ ವರದಿ ನೀಡುವಂತೆ ನಿಮ್ಹಾನ್ಸ್‌ಗೆ ಮನವಿ ಮಾಡಿದ್ದೆವು. ಆರು ವರ್ಷದವರೆಗೆ ಆನ್‌ಲೈನ್‌ ಪಾಠ ಸೂಕ್ತವಲ್ಲ ಎಂಬ ವಿವರಣೆ ನೀಡಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ವರ್ಷವನ್ನು ಯಾವಾಗ ಆರಂಭಿಸಬೇಕು, ತರಗತಿ ಹೇಗೆ ನಡೆಸಬೇಕು, ದಿನ ಬಿಟ್ಟು ದಿನ ತರಗತಿಯಾ ಅಥವಾ ಶಿಫ್ಟ್‌ ಒಳ್ಳೆಯದಾ, ಬೋಧನಾ ರೀತಿ ಹೇಗಿರ  ಬೇಕು ಎಂಬಿತ್ಯಾದಿ ಹಲವು ವಿಷಯಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಹಲವು ಸಂಘ-ಸಂಸ್ಥೆಗಳು ಪರೀಕ್ಷೆ ಬರೆಯುತ್ತಿರುವ ಎಲ್ಲಾ ಮಕ್ಕಳಿಗೂ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡುತ್ತಿವೆ. ಪರೀûಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಅಸೌಖ್ಯವಾದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಲು ಎಲ್ಲಾ ಕೇಂದ್ರಗಳಲ್ಲಿ ಎರಡು ಹೆಚ್ಚುವರಿ ಕೊಠಡಿ ಸಿದ್ಧವಾಗಿಟ್ಟುಕೊಳ್ಳುತ್ತಿದ್ದೇವೆ ಎಂದರು.

ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಅವರಿರುವ ಊರುಗಳಲ್ಲಿರುವ ಕೇಂದ್ರಗಳಲ್ಲೇ ಇಂಗ್ಲೀಷ್‌ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಕಾಸರಗೋಡಿನಲ್ಲಿ ಸುಮಾರು 1200 ಮಕ್ಕಳು ಪಿಯುಸಿ ಪರೀಕ್ಷೆ ಬರೆಯುವವರಿದ್ದು, ಅಲ್ಲಿಯೇ ಪ್ರತ್ಯೇಕ ಕೇಂದ್ರ ತೆರೆದು ಪರೀಕ್ಷೆ ಬರೆಸಲು ತೀರ್ಮಾನಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next