Advertisement

ಮುಚ್ಚಿದ್ದ ಮೇಗದ್ದೆ ಶಾಲೆ ತೆರೆದರೂ ಖಾಯಂ ಶಿಕ್ಷಕರಿಲ್ಲ!

12:51 AM Sep 27, 2019 | Sriram |

ಹೆಬ್ರಿ: ಮಕ್ಕಳಿಲ್ಲವೆಂದು ಕಳೆದ ಮೂರು ವರ್ಷಗಳಿಂದ ಮುಚ್ಚಿದ್ದ ಸುಮಾರು 40 ವರ್ಷಗಳ ಇತಿಹಾಸವಿರುವ ಹೆಬ್ರಿ ತಾಲೂಕಿನ ನಾಡಾ³ಲು ಗ್ರಾಮದ ಮೇಗದ್ದೆ ಸ.ಕಿ.ಪ್ರಾ. ಶಾಲೆ ಗ್ರಾಮಸ್ಥರ ಸತತ ಪ್ರಯತ್ನದಿಂದ ಕೊನೆಗೂ ಮತ್ತೆ ತೆರೆದು 4 ತಿಂಗಳು ಕಳೆದರೂ ಖಾಯಂ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.

Advertisement

ಜೂನ್‌ನಲ್ಲಿಯೇ ಶಾಲೆ ಪ್ರಾರಂಭಗೊಂಡಿದ್ದು, ಆರಂಭದಲ್ಲಿ ಡೆಪ್ಟೆàಶನ್‌ ಆಧಾರದಲ್ಲಿ ಮಣಿಪಾಲ ದಿಂದ ಬಂದ ಶಿಕ್ಷಕರು ಕೇವಲ ಒಂದು ತಿಂಗಳು ಮಾತ್ರ ಸೇವೆ ಸಲ್ಲಿಸಿ ವರ್ಗಾವಣೆ ಪಡೆದು ಕೊಂಡರು. ಬಳಿಕ ಸಮಸ್ಯೆಯ ಬಗ್ಗೆ ಇಲಾಖೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಬೇಳಂಜೆಯಿಂದ ಶಿಕ್ಷಕರೋರ್ವರನ್ನು ವಾರದಲ್ಲಿ ಎರಡುದಿನದಂತೆ ಶಾಲೆಗೆ ಹೋಗಲು ಸೂಚಿಸಿದ್ದು ಇದೀಗ ಕಳೆದ ಎರಡು ತಿಂಗಳಿಂದ ಅವರು ಕೂಡ ಬರುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅತಂತ್ರದಲ್ಲಿ ವಿದ್ಯಾರ್ಥಿಗಳು
ಮುಚ್ಚಿದ ಶಾಲೆಯೊಂದು ತೆರೆಯಿತು ಎಂಬ ಸಂತೋಷದಿಂದ ದೂರದ ಊರಿಗೆ ಹೋಗುತ್ತಿರುವ ವಿದ್ಯಾರ್ಥಿಗಳನ್ನು ಹೆತ್ತವರು ಈ ಶಾಲೆಗೆ ಸೇರಿಸಿದ್ದು ಇದೀಗ ಇಲಾಖೆಯ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಅಥವಾ ಇಲಾಖೆಯ ಕೆಲಸ ಕಾರ್ಯ ಮಾಡಲು ಗೌರವ ಶಿಕ್ಷಕಿಗೆ ಅನುಮತಿ ಇಲ್ಲದಿರುವುದು ಮತ್ತಷ್ಟು ಸಮಸ್ಯೆಯಾಗಿದೆ. ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಸಮಸ್ಯೆಯಾಗಬಾರ ದೆಂಬನಿಟ್ಟಿನಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಇನ್ನೂ ಯಾವುದೇ ವೇತನ ಪಾವತಿಸಿಲ್ಲ ಎನ್ನಲಾಗುತ್ತಿದ್ದು ಅವರೂ ಕೂಡ ಶಾಲೆ ಬಿಟ್ಟು ಹೋದರೆ ಮಕ್ಕಳ ಭವಿಷ್ಯ ಏನು ಎಂಬುದು ಸದ್ಯ ಹೆತ್ತವರ ಚಿಂತೆ.

ತೀರ ಗ್ರಾಮೀಣ ಹಾಗೂ ವಲಯ ವನ್ಯಜೀವಿ ವಿಭಾಗದಲ್ಲಿ ಬರುವ ಶಾಲೆಯಲ್ಲಿ ಮೂಲಸೌಲಭ್ಯಗಳ ಕೊರತೆ ಸಹಿತ ಹತ್ತು ಹಲವು ಸಮಸ್ಯೆಗಳಿದ್ದರೂ ಈ ಎಲ್ಲಾ ಸಮಸ್ಯೆಗಳನ್ನು ನೀಗಿಸಿ ಊರಿನವರ ಸತತ ಪ್ರಯತ್ನದ ಮೂಲಕ ಕೊನೆಗೂ ಶಾಲೆಯನ್ನು ತೆರೆಯಲಾಗಿದೆ. ಆದರೆ ಸರಕಾರ ಮಾತ್ರ ಇನ್ನೂ ಕೂಡ ಖಾಯಂ ಶಿಕ್ಷಕರನ್ನು ನೇಮಕ ಮಾಡದೇ ವಿದ್ಯಾರ್ಥಿ ಗಳು ಅತಂತ್ರದಲ್ಲಿ ಬದುಕುವ ಸ್ಥಿತಿ ತಂದೊಡ್ಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರಿಗೆ ಮನವಿ
ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಮಾಜ ಸೇವವಕ ರಮೇಶ್‌ ಶೆಟ್ಟಿ ಅವರು ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಅಥವಾ ಈ ಭಾಗಕ್ಕೆ ಶಿಕ್ಷಕರು ಬರಲು ಸಮಸ್ಯೆಯಾದರೆ ಬೇರೆ ಕಡೆ ಸೇವೆ ಸಲ್ಲಿಸುತ್ತಿದ್ದು, ಈ ಭಾಗಕ್ಕೆ ಬರಲು ಒಪ್ಪಿರುವ ಊರಿನವರನ್ನೇ ನೇಮಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಗ್ರಾಮಸ್ಥರ ನಿರಂತರ ಪ್ರಯತ್ನ
ಮುಚ್ಚಿಹೋದ ಶಾಲೆಯನ್ನು ಗ್ರಾಮಸ್ಥರ ನಿರಂತರ ಪ್ರಯತ್ನದಿಂದ ಇಲಾಖೆ ಪುನರಾರಂಭಿಸಿದೆ. ಆದರೆ ಖಾಯಂ ಶಿಕ್ಷಕರ ನೇಮಕ ಮಾಡದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಿ ಮಕ್ಕಳ ಭವಿಷ್ಯವನ್ನು ಕಾಪಾಡಬೇಕು.
-ರಮೇಶ್‌ ಮೇಗದ್ದೆ,ಸಾಮಾಜಿಕ ಕಾರ್ಯಕರ್ತರು

ಭಯಪಡುವ ಆವಶ್ಯಕತೆ ಇಲ್ಲ
ಗ್ರಾಮೀಣ ಪ್ರದೇಶವಾದ್ದರಿಂದ ಸಮಸ್ಯೆಯಾಗಿದೆ. ಈ ಭಾಗಕ್ಕೆ ಖಾಯಂ ಆಗಿ ಈ ಪರಿಸರದ ಶಿಕ್ಷಕರನ್ನು ನೇಮಕ ಮಾಡಲು ಪ್ರಯತ್ನ ಪಡಲಾಗಿದೆ. ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಶೀಘ್ರ ಶಿಕ್ಷಕರನ್ನು ನೇಮಿಸಿ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಯಪಡುವ ಆವಶ್ಯಕತೆ ಇಲ್ಲ.
-ಶಶಿಧರ್‌,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next