Advertisement

ಲಂಚ ಪಡೆದವರಿಗೆ ಶಿಕ್ಷೆ ವಿರಳ

03:52 PM Apr 22, 2019 | Team Udayavani |

ಸಿಂಧನೂರು: ಲಂಚ ಇಂದು ಸಾರ್ವತ್ರಿಕವಾಗಿದೆ. ಲಂಚ ಪಡೆದವರಿಗೆ ಶಿಕ್ಷೆ ಆಗುವುದೇ ಅಪರೂಪವಾಗಿದೆ. ಏಕೆಂದರೆ ಲಂಚ ಕೊಟ್ಟವ ದೂರಿದರೆ ಮಾತ್ರ ಪ್ರಕರಣ ದಾಖಲಾಗುತ್ತದೆ. ಸ್ವಹಿತಾಸಕ್ತಿಗಾಗಿ ಲಂಚ ಕೊಟ್ಟವ ದೂರು ನೀಡುವುದು ವಿರಳ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಕಳವಳ ವ್ಯಕ್ತಪಡಿಸಿದರು.

Advertisement

ಬಸವ ಕೇಂದ್ರ, ಮಹಿಳಾ ಬಸವ ಕೇಂದ್ರ, ಯುವ ಬಸವ ಕೇಂದ್ರ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತ್ಯುತ್ಸವ ಅಂಗವಾಗಿ ಸ್ಥಳೀಯ ಆರ್‌ಜಿಎಂ ಶಾಲಾ ಮೈದಾನದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು. ಲಂಚದ ಎರಡನೇ ರೂಪವೇ ಕಳ್ಳತನವಾಗಿದೆ. ಇಂದು ದೇಶಾದ್ಯಂತ ಶಾರೀರಿಕ ಭೌತಿಕ, ಬೌದ್ಧಿಕ ಕಳ್ಳತನಗಳು ನಡೆಯುತ್ತಿವೆ.

ಶಾರೀರಿಕವಾಗಿ ಅಂದರೆ ನಯನಗಳು, ಕಿವಿಗಳು, ನಾಲಿಗೆ, ಕೈಗಳು ಕದಿಯುತ್ತವೆ, ಕೇಳುತ್ತವೆ. ಇದು ಇಂದ್ರೀಯಗಳಿಂದ ನಡೆಯುವ ಕಳ್ಳತನ. ಭೌತಿಕವಾಗಿ ಅಂದರೆ ವಸ್ತು, ವಾಹನ, ಆಭರಣ, ಹಣ ಕದಿಯುವುದು. ಬೌದ್ಧಿಕವಾಗಿ ಅಂದರೆ ಕೃತಿ ಚೌರ್ಯ, ಸೈಬರ್‌ ಕ್ರೈಮ್‌ಗಳು, ಬುದ್ದಿವಂತಿಕೆಯಿಂದ ಎಟಿಎಂಗಳನ್ನೇ ಹ್ಯಾಕ್‌ ಮಾಡಿ ಹಣ ದೋಚುವುದು ಹೀಗೆ ಹಲವು ವಿಧಗಳಲ್ಲಿ ಕಳ್ಳತನಗಳು ನಡೆಯುತವೆ ಎಂದು ವಿಶ್ಲೇಷಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ| ಬಸವಪ್ರಭು ಬೆಟ್ಟದೂರು ಮಾತನಾಡಿ, ಕಸ ಗುಡಿಸುವ ಸತ್ಯಕ್ಕ ಪರ ಧನ, ಪರ ಸಂಪತ್ತು ಪಡೆದರೆ ಅದು ನರಕಕ್ಕೆ ಸಮಾನ ಎಂದು ಹೇಳಿದ್ದಾರೆ ಎಂದ ಅವರು, ಹಲವು ಶರಣರ ವಚನಗಳನ್ನು ವಿವರಿಸಿ ಮಾತನಾಡಿದರು.

ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಬೀದರ ಲಿಂಗಾಯತ ಮಹಾಮಠದ ಪ್ರಭು ದೇವರು, ಡಾ| ಕೆ.ಶಿವರಾಜ, ಪತ್ರಕರ್ತ ಪ್ರಹ್ಲಾದ ಗುಡಿ, ಬಸವ ಕೇಂದ್ರದ ಮಾಜಿ ಅಧ್ಯಕ್ಷ ಶ್ಯಾಮಣ್ಣ ಎಸ್‌ಎಎಸ್‌, ವೀರಭದ್ರಪ್ಪ ಮುದ್ಲಗುಂಡಿ ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next