ಪಾಟ್ನಾ:ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಘೋಷಣೆ ಕೂಗುವುದನ್ನು ಯಾರು ವಿರೋಧಿಸುತ್ತಿದ್ದಾರೆಯೋ ಅವರೇ ಈಗ ನಿಮ್ಮ ಬಳಿ ಬಂದು ಮತ ಚಲಾಯಿಸಿ ಎಂದು ಕೇಳುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಹಾರ ಎನ್ ಡಿಎ ಮೈತ್ರಿಕೂಟವನ್ನು ಮರು ಆಯ್ಕೆ ಮಾಡಲು ಮುಂದಾಗಿರುವುದಾಗಿ ಪ್ರಧಾನಿ ಮೋದಿ ಅವರು ಮಂಗಳವಾರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು. ಬಿಹಾರ ವಿಧಾನಸಭೆ 243 ಸದಸ್ಯ ಬಲ ಹೊಂದಿದ್ದು, 2ನೇ ಹಂತದ ಚುನಾವಣೆಯಲ್ಲಿ 94 ಕ್ಷೇತ್ರಗಳಿಗೆ (ನವೆಂಬರ್ 03) ಮತದಾನ ನಡೆಯುತ್ತಿದೆ. ಬಿಹಾರದ ಮೂರನೇ ಹಾಗೂ ಕೊನೆಯ ಹಂತದ ಚುನಾವಣೆ ನವೆಂಬರ್ 7ರಂದು ನಡೆಯಲಿದೆ.
ಬಿಹಾರ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ನಮಗೆ ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಬಿಹಾರ ಮತ್ತೊಮ್ಮೆ ಎನ್ ಡಿಎ ಸರ್ಕಾರವನ್ನು ಪುನರಾಯ್ಕೆ ಮಾಡಲು ಮುಂದಾಗಿದೆ ಎಂಬುದಾಗಿ. ರಾಜ್ಯವನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲು ಮತದಾರರು ನಿರ್ಧರಿಸಿರುವುದಾಗಿ ಹೇಳಿದರು.
ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಸಂಜನಾ- ರಾಗಿಣಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಆರ್ ಜೆಡಿ ನೇತೃತ್ವದ ಮಹಾಮೈತ್ರಿ ಕೂಟದ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ ಅವರು, ಬಿಹಾರದಲ್ಲಿ ಯಾರು (ಆರ್ ಜೆಡಿ) ಜಂಗಲ್ ರಾಜ್ ಆಡಳಿತ ನಡೆಸಿದ್ದಾರೋ ಅವರ ಮೈತ್ರಿ ಪಕ್ಷಗಳಿಗೆ ಏನು ಬೇಕಾಗಿದೆ ಗೊತ್ತಾ? ಅವರಿಗೆ ನೀವು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಬಾರದು. ಇಂತಹ ಪವಿತ್ರ ಭೂಮಿಯಲ್ಲಿ ದೇವಿಯನ್ನು ಆರಾಧಿಸುವ ಈ ನೆಲದಲ್ಲಿ ಜನರು ದೇಶಕ್ಕಾಗಿ ಘೋಷಣೆ ಕೂಗದಿರಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಮಹಾಘಟಬಂಧನ್ ಕೂಟದ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಹೇಳುತ್ತವೆ. ಇದರಲ್ಲಿ ಒಂದು ಪಕ್ಷ ಭಾರತ್ ಮಾತಾ ಕೀ ಜೈ ಎಂದು ಘೋಷಿಸಬೇಡಿ ಎನ್ನುತ್ತದೆ. ಮತ್ತೊಂದು ಪಕ್ಷಕ್ಕೆ ಜೈ ಶ್ರೀರಾಮ್ ಘೋಷಣೆ ಕೂಗಬಾರದು. ಈಗ ಮೈತ್ರಿಯೊಂದಿಗೆ ಬಿಹಾರ ಜನರಲ್ಲಿ ಮತಯಾಚನೆಗೆ ಆಗಮಿಸಿರುವುದಾಗಿ ವ್ಯಂಗ್ಯವಾಡಿದರು.