Advertisement

ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟವರಿಗೆ ಉಳಿಗಾಲವಿಲ್ಲ

06:22 AM Jun 27, 2020 | Team Udayavani |

ಗೌರಿಬಿದನೂರು: ಸ್ವಾರ್ಥಕ್ಕಾಗಿ ತಾಲೂಕಿನ ಕೆಲ ಮುಖಂಡರು ಕಾಂಗ್ರೆಸ್‌ ಬಿಟ್ಟು ಹೊರ ನಡೆದಿದ್ದಾರೆ. ಇವರು ಪಕ್ಷದ ಚಿಹ್ನೆ ಅಡಿಯಲ್ಲಿ ಗೆದ್ದು ಅಧಿಕಾರ ಅನುಭವಿಸಿದವರು. ಸ್ವಾಭಿಮಾನವಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ  ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ, ಆಗ ಇವರ ನಿಜ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ಎನ್‌.ಎಸ್‌.ಭಾರ್ಗವರೆಡ್ಡಿ ಹೇಳಿದರು.

Advertisement

ತಾಲೂಕಿನ ಹೊಸೂರಿನ ಬಲಿಜ ಸಮುದಾಯ ಭವನದಲ್ಲಿ ನಡೆದ  ಕಾಂಗ್ರೆಸ್‌ ಯುವ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರ ಸಹಾಯದಿಂದ ಎಲ್ಲ ಅಧಿಕಾರ, ಸವಲತ್ತು ಪಡೆದು ಈಗ ಅವರನ್ನು ಸ್ವಜನ ಪಕ್ಷಪಾತಿ ಎಂದು ಆರೋಪ ಮಾಡುವುದರಲ್ಲಿ ಹುರುಳಿಲ್ಲ.  ಶಾಸಕರು ಎಲ್ಲ ವರ್ಗದ ಮುಖಂಡರ ಅರ್ಹತೆಗೆ ಅನುಗುಣವಾಗಿ ಅಧಿಕಾರ ನೀಡಿದ್ದಾರೆ.

ಹಣಕ್ಕಾಗಿ ಉದ್ಯಮಿ ಹಿಂದೆ ಹೋಗಿ ಪಕ್ಷ ಮತ್ತು ಶಾಸಕರ ವಿರುದ್ಧ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ ಎಂದರು.ತಾಪಂ ಅಧ್ಯಕ್ಷ ಆರ್‌. ಲೋಕೇಶ್‌  ಮಾತನಾಡಿ, ಈ ಭಾಗದ ಜಿಪಂ ಸದಸ್ಯ ಎಚ್‌ .ವಿ.ಮಂಜುನಾಥ್‌ ಅವರು ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಜಿಪಂ ಅಧ್ಯಕ್ಷರಾಗಿ ಕ್ಷುಲ್ಲಕ ಕಾರಣಕ್ಕೆ ಪಕ್ಷ ತೊರೆದಿದ್ದಾರೆ ಎಂದು ದೂರಿದರು. ಹಿರಿಯ ಕಾಂಗ್ರೆಸ್‌ ಮುಖಂಡ ಬೊಮ್ಮಣ್ಣ ಮಾತನಾಡಿ,  ಹೊಸೂರಿನ ಇತಿಹಾಸ ನೋಡಿದರೆ ದಶಕಗಳ ಹಿಂದೆ ಎಚ್‌.ವಿ.ಮಂಜುನಾಥ್‌ ಸೋತು ರಾಜಕೀಯ ನೇಪಥ್ಯಕ್ಕೆ ಸರಿದಿದ್ದರು.

ಶಾಸಕ ಶಿವಶಂಕರರೆಡ್ಡಿ ಅವರ ಸಹಕಾರದಿಂದ ಜಿಪಂ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಅಧಿಕಾರ  ಅನುಭವಿಸಿ ಕೆಳಗಿಳಿದ ಬಳಿಕ ಅವರ ವಿರುದ್ಧ ಮಾತನಾಡುವುದು ಸರಿಯೇ ? ಎಂದು ಪ್ರಶ್ನಿಸಿದರು. ಸಭೆಯಲ್ಲಿ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮಂಜುನಾಥ್‌, ತಾಪಂ ಸದಸ್ಯ ನಾಗೇಶ್‌, ಮುಖಂಡ ಅಶ್ವತ್ಥಪ್ಪ, ಕೃಷ್ಣ, ಶ್ರೀಕಾಂತ್‌,  ಖಾದರ್‌  ಸುಬಾನ್‌ ಖಾನ್‌, ವೆಂಕಟರಮಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next