Advertisement

Salman Khan ವಿರುದ್ದದ ಸೇಡು? ..; ಎಲ್ಲಾ ಕೋನಗಳಲ್ಲಿ ತನಿಖೆ ಎಂದ ಮುಂಬಯಿ ಪೊಲೀಸರು

08:31 PM Oct 13, 2024 | Team Udayavani |

ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್‌(Baba Siddique) ಅವರ ಹತ್ಯೆ ಪ್ರಕರಣವನ್ನು ಎಲ್ಲ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಸಲ್ಮಾನ್ ಖಾನ್(Salman Khan) ಅವರ ಮೇಲಿನ ಸೇಡಿನಲ್ಲಿ ಕೃತ್ಯ ಎಸಗಲಾಗಿದೆಯೋ ಎನ್ನುವುದನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ

Advertisement

ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ದತ್ತಾ ನಲವಾಡೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಬಾಬಾ ಸಿದ್ದಿಕ್‌ ಅವರ ಮೇಲೆ ಗುಂಡು ಹಾರಿಸುವ ವೇಳೆ ಪೊಲೀಸ್ ಪೇದೆಯೊಬ್ಬರು ಕಾವಲು ಕಾಯುತ್ತಿದ್ದರು. ಇಬ್ಬರು ಆರೋಪಿಗಳಿಂದ ಎರಡು ಪಿಸ್ತೂಲ್ ಮತ್ತು 28 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಎನ್‌ಸಿಪಿ (ಅಜಿತ್ ಪವಾರ್) ಬಣದ 66 ವರ್ಷದ ಪ್ರಭಾವಿ ನಾಯಕನ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೊಬ್ಬರು ವಹಿಸಿಕೊಂಡಿದ್ದಾರೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮುಂಬೈನ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಪುತ್ರ, ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಶನಿವಾರ ರಾತ್ರಿ ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದರು.

Advertisement

“ಪೊಲೀಸರು 15 ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ ಮತ್ತು ಶೂಟರ್‌ಗಳಿಗೆ ಲಾಜಿಸ್ಟಿಕ್ ಬೆಂಬಲವನ್ನು ನೀಡಿದವರು ಯಾರು ಎಂಬುದನ್ನು ಗುರುತಿಸಲು ತನಿಖೆ ನಡೆಯುತ್ತಿದೆ. ಆರೋಪಿಯಿಂದ ಎರಡು ಪಿಸ್ತೂಲ್‌ಗಳು ಮತ್ತು 28 ಲೈವ್ ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ದತ್ತಾ ನಲವಾಡೆ ತಿಳಿಸಿದ್ದಾರೆ.

”ಸಿದ್ದಿಕ್‌ ಅವರಿಗೆ ಭದ್ರತೆ ಒದಗಿಸಲಾಗಿತ್ತು, ಮೂವರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಆ ಕಾನ್‌ಸ್ಟೆಬಲ್‌ಗಳು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ವೇಳೆ (ಶನಿವಾರ ರಾತ್ರಿ) ಒಬ್ಬ ಪೊಲೀಸ್ ಸಿಬಂದಿ ಮಾತ್ರ ಸಿದ್ದಿಕ್ ಅವರ ಜತೆಗಿದ್ದರು” ಎಂದು ನಲವಾಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತನಿಖೆಯ ಕುರಿತು ಮಾತನಾಡಿದ ಡಿಸಿಪಿ,”ಪೊಲೀಸರು ಇದುವರೆಗೆ ಇಬ್ಬರನ್ನು ಬಂಧಿಸಿದ್ದಾರೆ. ಹೆಚ್ಚಿನ ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಶೂಟರ್‌ಗಳಿಗೆ ಯಾರು ಲಾಜಿಸ್ಟಿಕ್ ಬೆಂಬಲವನ್ನು ನೀಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸ್ಥಳೀಯ ಪೊಲೀಸರ ಸಹಾಯವನ್ನು ಸಹ ತೆಗೆದುಕೊಳ್ಳುತ್ತಿದ್ದೇವೆ.ಮುಂಬೈಗೆ ಬಂದ ನಂತರ ದಾಳಿಕೋರರು ತಂಗಿದ್ದ ಸ್ಥಳ ಮತ್ತು ಅವರಿಗೆ ಸಹಾಯ ಮಾಡಿದವರು ಯಾರು ಎಂದು ಗುರುತಿಸಲು ಅಪರಾಧ ವಿಭಾಗ ಪ್ರಯತ್ನಿಸುತ್ತಿದೆ” ಎಂದರು.

“ಗುಂಡು ಹಾರಿಸಿದ ಘಟನೆಯ ನಂತರ, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಧಬಾಡೆ ಮತ್ತು ಕಾನ್‌ಸ್ಟೆಬಲ್ ಸೇರಿ ಇಬ್ಬರು ಶೂಟರ್‌ಗಳನ್ನು ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ವಿರುದ್ದದ ಸೇಡಿನಿಂದ ಕೃತ್ಯ ಎಸಗಿದೆಯೋ ಅಥವಾ ಇನ್ನಾವುದೇ ವಿಚಾರ ಇದೆಯೋ ಎನ್ನುವ ಕುರಿತಾಗಿ ಎಲ್ಲಾ ಕೋನಗಳಲ್ಲಿ ಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಎಂದು ನಲವಾಡೆ

ಸಲ್ಮಾನ್ ಖಾನ್ ಮೇಲೇಕೆ ಕೋಪ?

ಅದ್ದೂರಿ ಪಾರ್ಟಿಗಳಿಗೆ ಹೆಸರುವಾಸಿಯಾಗಿದ್ದ ಸಿದ್ದಿಕ್ ಅವರು ಸಲ್ಮಾನ್ ಖಾನ್ ಅವರಿಗೆ ಆತ್ಮೀಯರಾಗಿದ್ದರು. ಸಲ್ಮಾನ್ ಮತ್ತು ಶಾರುಖ್ ಖಾನ್ ನಡುವಿನ ಐದು ವರ್ಷಗಳ ಶೀತಲ ಸಮರವನ್ನು 2013 ರಲ್ಲಿ ‘ಇಫ್ತಾರ್’ ಪಾರ್ಟಿಯಲ್ಲಿ ಪರಿಹರಿಸಿ ಸುದ್ದಿಯಾಗಿದ್ದರು.

ಆತ್ಮೀಯತೆಗೆ ಸಾಕ್ಷಿ ಎಂಬಂತೆ ಹತ್ಯೆಯ ಸುದ್ದಿ ಕೇಳಿದ ಕೂಡಲೇ ಬಿಗ್ ಬಾಸ್ ಚಿತ್ರೀಕರಣ ಸ್ಥಗಿತಗೊಳಿಸಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ್ದರು. ನಂತರ ಸಲ್ಮಾನ್ ಖಾನ್ ಅವರು ಸಿದ್ದಿಕಿ ಅವರ ನಿವಾಸಕ್ಕೂ ಆಗಮಿಸಿದ್ದರು.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಸಲ್ಮಾನ್ ಖಾನ್ ಅವರ ಮೇಲೆ ಹಳೆಯ ಸೇಡು ಹೊಂದಿದ್ದು, ನಿರಂತರವಾಗಿ ಅವರನ್ನು ಹತ್ಯೆಗೈಯಲು ಪ್ರಯತ್ನಿಸುತ್ತಿದೆ ಎನ್ನುವುದು ಬಹಿರಂಗವಾದ ವಿಚಾರ. ಸಲ್ಮಾನ್ ಖಾನ್ ಅವರ ಮನೆಯ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಹೊರಗೆ ಏಪ್ರಿಲ್ 14 ರಂದು ಗುಂಡಿನ ದಾಳಿಯೂ ನಡೆದಿತ್ತು.

ಸೆಪ್ಟೆಂಬರ್ 1998 ರಲ್ಲಿ ಜೋಧ್‌ಪುರ ಬಳಿಯ ಮಥಾನಿಯಾದ ಬವಾದ್‌ನಲ್ಲಿ ”ಹಮ್ ಸಾಥ್ ಸಾಥ್ ಹೇ” ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ ಆರೋಪ ಹೊಂದಿದ್ದು, ಇದೆ ಕಾರಣಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಹತ್ಯೆಗೈಯುವುದಾಗಿ ಬಿಷ್ಣೋಯ್ ಗ್ಯಾಂಗ್‌ ಶಪಥವನ್ನೇ ಗೈದಿದೆ.. ಸಲ್ಮಾನ್ ಖಾನ್ ಅವರ ಆಪಾದಿತ ಕೃತ್ಯವು ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುವ ಬಿಷ್ಣೋಯ್ ಸಮುದಾಯವನ್ನು ಕೆರಳಿಸಿರುವುದೇ ಇದಕ್ಕೆ ಮುಖ್ಯ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next