Advertisement
”ಅಹಂಕಾರಿಗಳನ್ನು(ಬಿಜೆಪಿ) 241ರಲ್ಲಿ, ರಾಮನಲ್ಲಿ ನಂಬಿಕೆ ಇಲ್ಲದವರು, ಅಪನಂಬಿಕೆ ಇದ್ದವರನ್ನು 234 ರಲ್ಲಿ ನಿಲ್ಲಿಸಲಾಯಿತು ಇದು ಭಗವಂತನ ನ್ಯಾಯ” ಎಂದು ಇಂದ್ರೇಶ್ ಕುಮಾರ್ ಹೇಳಿಕೆ ನೀಡಿ ಬಿಜೆಪಿ ವಿರುದ್ಧ ಬಹಿರಂಗ ಆಕ್ರೋಶ ಹೊರ ಹಾಕಿದ್ದಾರೆ.
Related Articles
Advertisement
ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ರೂರಿ ಎಂದ ಇಂದ್ರೇಶ್, ‘ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲಲ್ಲು ಸಿಂಗ್ , ರಾಮನನ್ನು ಪೂಜಿಸಿ ನಂತರ ಅಹಂಕಾರ ತೋರಿದರು.ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದಾಗ, ರಾಮ ಐದು ವರ್ಷ ವಿಶ್ರಾಂತಿ ತೆಗೆದುಕೊಳ್ಳಿ, ಮುಂದಿನ ಬಾರಿ ನೋಡೋಣ ಎಂದು ಹೇಳಿದ್ದಾನೆ. ರಾಮನನ್ನು ವಿರೋಧಿಸುವವನ ಕಲ್ಯಾಣವು ಸ್ವಯಂ ಹಾಳಾಗುತ್ತದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಕ್ರಿಯೆ
ಇಂದ್ರೇಶ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ‘ಪ್ರಧಾನಿ ನರೇಂದ್ರ ಮೋದಿ ಕೂಡ ಆರ್‌ಎಸ್‌ಎಸ್ ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾತನಾಡಬೇಕಾದ ಸಮಯದಲ್ಲಿ ಇಂದ್ರೇಶ್ ಕುಮಾರ್ ಮಾತನಾಡಿದ್ದರೆ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಅವರು ಮೌನವಾಗಿದ್ದರು. ಅವರೂ ಅಧಿಕಾರ ಅನುಭವಿಸಿದ್ದಾರೆ’ ಎಂದರು.
ವೈಯಕ್ತಿಕ ಹೇಳಿಕೆಇಂದ್ರೇಶ್ ಕುಮಾರ್ ನೀಡಿರುವ ಹೇಳಿಕೆ ಸಂಘದ ಹೇಳಿಕೆಯಲ್ಲ ಇದು ಅವರ ವೈಯಕ್ತಿಕ ಹೇಳಿಕೆ ಎಂದು ಆರ್ ಎಸ್ ಎಸ್ ಪ್ರತಿಕ್ರಿಯೆ ನೀಡಿದೆ. ಯೂ ಟರ್ನ್ ಶುಕ್ರವಾರ ಇಂದ್ರೇಶ್ ಕುಮಾರ್ ಬಿಜೆಪಿಯನ್ನು ಹೊಗಳಿ ಮತ್ತೊಂದು ಹೇಳಿಕೆ ನೀಡಿದ್ದಾರೆ. ರಾಮನನ್ನು ವಿರೋಧಿಸಿದವರೆಲ್ಲರೂ ಅಧಿಕಾರದಿಂದ ಹೊರಗುಳಿದಿದ್ದಾರೆ, ಆದರೆ ರಾಮನ ಸಂಕಲ್ಪವನ್ನು ತೆಗೆದುಕೊಂಡವರು ಈಗ ಅಧಿಕಾರದಲ್ಲಿದ್ದಾರೆ ಎಂದು ವಿವಾದಕ್ಕೆ ಸಿಲಿಕಿದ ಹೇಳಿಕೆಗೆ ತೇಪೆ ಹಚ್ಚಲು ಯತ್ನಿಸಿದ್ದಾರೆ. ” ನರೇಂದ್ರ ಮೋದಿಜಿಯವರ ನೇತೃತ್ವದ ಸರ್ಕಾರವು ಮೂರನೇ ಬಾರಿಗೆ ರಚನೆಯಾಗಿದೆ. ಅವರ ನೇತೃತ್ವದಲ್ಲಿ ದೇಶವು ಹಗಲಿರುಳು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ವ್ಯಾಪಕ ನಂಬಿಕೆ ಜನರಲ್ಲಿದೆ. ಈ ನಂಬಿಕೆಯು ಪ್ರವರ್ಧಮಾನಕ್ಕೆ ಬರಲಿ ಎಂದು ನಾವು ಹಾರೈಸುತ್ತೇವೆ ಮತ್ತು ಹಾರೈಸುತ್ತೇವೆ. ಫಲ ನೀಡುತ್ತದೆ,” ಎಂದಿದ್ದಾರೆ.