Advertisement
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಟಿಪ್ಪು ಜಯಂತಿ ಆಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯಾರು ಏನೇ ಹೇಳಿದರೂ ಟಿಪ್ಪು ಜಯಂತಿ ನಡೆದೇ ನಡೆಯುತ್ತದೆ. ಇಷ್ಟ ಇದ್ದವರು ಭಾಗವಹಿಸಲಿ ಎಂದರು.
ಚಿತ್ರದುರ್ಗ: “ಬಹುಸಂಖ್ಯಾತ ಜನರ ತೀವ್ರ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಯೋತ್ಪಾದಕ ಸಿದ್ದರಾಮಯ್ಯ ಆಗುತ್ತಿದ್ದಾರೆ’ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ
ಸಮಿತಿ ಸಂಚಾಲಕ ತೇಜಸ್ವಿ ಸೂರ್ಯ ಟೀಕಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತಾಂಧ ಟಿಪ್ಪು ಬಿನ್ ಲಾಡೆನ್ ಸಾಲಿನಲ್ಲಿ ನಿಲ್ಲುತ್ತಾನೆಯೇ ವಿನಃ ಗಾಂಧಿ , ಅಂಬೇಡ್ಕರ್ ಸ್ಥಾನದಲ್ಲಿ ಅಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದು ಕೊನೆಯ ಟಿಪ್ಪು ಜಯಂತಿ. ಟಿಪ್ಪುವಿನ ಸಹವಾಸ ಮಾಡಿದವರ್ಯಾರೂ ಉದ್ಧಾರವಾಗಿಲ್ಲ. ಅದೇ ರೀತಿ ಕಾಂಗ್ರೆಸ್ ಸರ್ಕಾರ ಭಸ್ಮವಾಗಲಿದೆ. ಆದರೂ ಜಯಂತಿ ಆಚರಣೆಗೆ ನಾವು ಅವಕಾಶ ನೀಡುವುದಿಲ್ಲ ಎಂದರು.