ತೆಲಸಂಗ: ಗ್ರಾಮದ ಗ್ರಾಮ ಪಂಚಾಯತಿ ಚುನಾವಣೆ ಮತದಾನಕ್ಕೆಕ್ಷಣಗಣನೆ ಆರಂಭವಾಗುತ್ತಿದೆ ಆದರೆಮತಪಟ್ಟಿಯಲ್ಲಿನ ಹೆಸರುಗಳು ವಾರ್ಡ್‌ಬಿಟ್ಟು ಇನ್ನೊಂದು ವಾರ್ಡ್‌ಪಟ್ಟಿಯಲ್ಲಿಕಾಣಿಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
7ನೇ ವಾರ್ಡ್‌ನ ಮಾದಿಗರ ಓಣಿಯಲ್ಲಿನ 70 ಜನರ ಹೆಸರುಗಳನ್ನು6ನೇ ವಾರ್ಡ್ ಮತಪಟ್ಟಿಗೆ ಸೇರಿಸಿದ್ದು,7ನೇ ವಾರ್ಡ್ ಜನರಿಗೆ ತಮ್ಮಅಭ್ಯರ್ಥಿ ಆಯ್ಕೆ ಕಠಿಣ ಆಗಲಿಎನ್ನುವ ಕಾರಣಕ್ಕೆ ಕಾಣದ ಕೈಗಳುತಮ್ಮ ಪ್ರಭಾವ ಉಪಯೋಗಿಸಿ ಹೀಗೆಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಒಂದು ಓಣಿಯಲ್ಲಿನ ಜನ ಒಟ್ಟುಗೂಡಿಕೊಂಡು ಸದಸ್ಯನನ್ನು ಆಯ್ಕೆಮಾಡುವ ಹಕ್ಕು ಕಿತ್ತುಕೊಂಡಿದ್ದಕ್ಕೆ ಮತಪಟ್ಟಿ ಸಿದ್ಧಪಡಿಸಿದ ಅಧಿ ಕಾರಿ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ವಾರ್ಡ್‌ನಂಬರ್ 7ರಲ್ಲಿ 15 ವರ್ಷಗಳಿಂದವಾಶಿಸುತ್ತಿದ್ದರೂ ವಾರ್ಡ್ ನಂಬರ್ 1,5, 6ರ ಮತಪಟ್ಟಿಗಳಲ್ಲಿ ಹೆಸರುಗಳು ಸೇರ್ಪಡೆಯಾಗಿದ್ದು ಮಾತ್ರವಲ್ಲದೆ,ಒಂದೇ ಮನೆಯಲ್ಲಿ ವಾಸಿಸುವಕುಟುಂಬದ ಸದಸ್ಯರ ಹೆಸರುಗಳು ಬೇರೆಬೇರೆ ವಾರ್ಡ್‌ಗಳ ಮತಪಟ್ಟಿಗೆ ಸೇರಿದ್ದುಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.ವಾರ್ಡ್ ನಂಬರ್ 1, 5, 6ರಲ್ಲಿಸ್ಪರ್ಧಿಸಿರುವ ಅಭ್ಯರ್ಥಿಗಳು ದೂರದವಾರ್ಡ್ ನಂ.7 ರಲ್ಲಿ ವಾಸಿಸುವ, ತಮ್ಮಮತಪಟ್ಟಿಯಲ್ಲಿ ಹೆಸರು ಇರುವವರನ್ನುಹುಡುಕೊಂಡು ಮತಯಾಚನೆ ಮಾಡಲು ಅಲೆಯುತ್ತಿದ್ದಾರೆ.
ಮತಪಟ್ಟಿಯಲ್ಲಿ ಹೆಸರಿನ ಸಮಸ್ಯೆ ಆಗಿದ್ದುನಮ್ಮ ಗಮನಕ್ಕೆ ಈಗ ಬಂದಿದೆ. ಚುನಾವಣೆಘೋಷಣೆಗೂ ಮುಂಚೆಯೇ ಗೊತ್ತಾಗಿದ್ದರೆ ಸರಿಪಡಿಸಬಹುದಿತ್ತು. ಸದ್ಯಕ್ಕೆ ವಾರ್ಡ್ ವಿಂಗಡಣೆಸೇರಿದಂತೆ ಹೆಸರು ಹಂಚಿ ಹೋಗಿದ್ದರ ಲಿಸ್ಟ್‌ತಯಾರಿ ಮಾಡಿಕೊಂಡಿದ್ದು, ಚುನಾವಣೆಮುಗಿಯುತ್ತಿದ್ದಂತೆ ಯಾವ ಮನೆ ಎಲ್ಲಿ ಇದೆ ಎಂದು ಗುರುತಿಸಿ ಸರಿಪಡಿಸುತ್ತೇವೆ.
-ಬಿ.ಜಿ.ಇರ್ಕಾರ, ಗ್ರಾಮಲೆಕ್ಕಾಧಿಕಾರಿ, ತೆಲಸಂಗ.
ನಮ್ಮ ಮನೆಯಲ್ಲಿಯೇ 7 ಜನ ವಾಸಿಸುತ್ತಿದ್ದು, 4ಜನರದ್ದು 7ನೇ ವಾರ್ಡ್, 3 ಜನರದ್ದು 6ನೇ ವಾರ್ಡ್ ಮತಪಟ್ಟಿಯಲ್ಲಿ ಹೆಸರು ಬಂದಿದೆ. ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಇಡಿ ಊರಿನ ಎಲ್ಲ ವಾರ್ಡ್ ಮತಪಟ್ಟಿಗಳಲ್ಲಿ ಈ ಗೊಂದಲ ಕಾಣಿಸಿಕೊಂಡಿದೆ.
-ರಾಜು ಸಾಗರ, 7ನೇ ವಾರ್ಡ್ ಯುವಕ, ತೆಲಸಂಗ