Advertisement

“ಮುಂಬಯಿಯಿಂದ ಬಂದವರೇ ವೆಚ್ಚ ಭರಿಸಬೇಕು’

09:00 AM Apr 15, 2020 | mahesh |

ಉಡುಪಿ: ಮಹಾರಾಷ್ಟ್ರದಿಂದ ಬಂದ ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೊಂದಿಗೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಮಹಾರಾಷ್ಟ್ರ ನೋಂದಣಿಯ ಆ್ಯಂಬುಲೆನ್ಸ್‌ನಲ್ಲಿ ಅನಾರೋಗ್ಯ ಪೀಡಿತರೊಬ್ಬರ ಜತೆಗೆ ಇಬ್ಬರು ಸಂಗಡಿಗರು, ಚಾಲಕ ಮತ್ತು ಸಹಾಯಕರನ್ನು ಒಳಗೊಂಡಂತೆ ಒಟ್ಟು ಆರು ಮಂದಿ ಎ. 13ರ ಸಂಜೆ ಮುಂಬೈಯಿಂದ ಹೊರಟು ಮಣಿಪಾಲ ಆಸ್ಪತ್ರೆಯ ಚಿಕಿತ್ಸೆಗಾಗಿ ಎ. 14ರಂದು ಬಂದರು. ಸಂಶಯಾಸ್ಪದವಾಗಿ ಕಂಡದ್ದರಿಂದ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಮುಂಬಯಿಯಿಂದ ಬರಲು ಸರಕಾರ ಅಥವಾ ಅಧಿಕೃತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ ಮತ್ತು ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದಿರುವುದು ಕಂಡುಬಂದಿಲ್ಲ. ಹೀಗಾಗಿ, ರೋಗಿಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐವರನ್ನು ಉದ್ಯಾವರ ಎಸ್‌ಡಿಎಂ ಕಾಲೇಜು ಆಸ್ಪತ್ರೆಯಲ್ಲಿ 28 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇದರ ವೆಚ್ಚವನ್ನು ಸಂಬಂಧಿಸಿದವರೇ ಭರಿಸಬೇಕು.  ಆ್ಯಂಬುಲೆನ್ಸನ್ನು ಪೊಲೀಸ್‌ ಸುಪರ್ದಿಗೆ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next