Advertisement

ಹೋರಾಟ ಮಾಡಿದವರಿಗೆ ಧನ್ಯವಾದ: ಡಿ.ಕೆ.ಶಿವಕುಮಾರ್‌

11:16 PM Oct 23, 2019 | Lakshmi GovindaRaju |

ಬೆಂಗಳೂರು: ದೆಹಲಿ ಹೈಕೋರ್ಟ್‌ನಿಂದ ನನಗೆ ಜಾಮೀನು ಪಡೆಯಲು ಸಹಕರಿಸಿದವರಿಗೆ ನನ್ನ ನಮಸ್ಕಾರ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ತಿಹಾರ್‌ ಜೈಲ್‌ನಿಂದ ಹೊರ ಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಯಾರು ನನಗೋಸ್ಕರ ರಸ್ತೆಗಿಳಿದು ಹೋರಾಟ ಮಾಡಿದ್ದಾರೆಯೋ ಅವರಿಗೆ ನನ್ನ ಧನ್ಯವಾದಗಳು.

Advertisement

ನನ್ನ ಪಕ್ಷ, ಕಾರ್ಯಕರ್ತರು, ನಾಯಕರು, ವಿರೋಧ ಪಕ್ಷದ ಧುರೀಣರು ನನಗೋಸ್ಕರ ಹೋರಾಟ ಮಾಡಿದ್ದಾರೆ. ನನ್ನ ಪರವಾಗಿ ಬೆಂಗಳೂರು, ದೆಹಲಿಯಲ್ಲಿ ವಾದ ಮಾಡಿರುವ ವಕೀಲರಿಗೂ ಧನ್ಯವಾದ. ನನ್ನ ಬಂಧನದಿಂದ ಕೆಲವರು ಸಂತೋಷ ಪಟ್ಟಿದ್ದಾರೆ. ಕೆಲವರು ದುಃಖ ಪಟ್ಟಿದ್ದಾರೆ. ಗುರುವಾರ ವಕೀಲರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಎಲ್ಲ ವಿಷಯ ಮಾತನಾಡುತ್ತೇನೆ’ ಎಂದು ಹೇಳಿದರು.

ದೆಹಲಿ ಹೈಕೋರ್ಟ್‌ ಡಿ.ಕೆ.ಶಿವಕುಮಾರ್‌ಗೆ ನೀಡಿರುವ ಜಾಮೀನು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

ಡಿ.ಕೆ.ಶಿವಕುಮಾರ್‌ ಅವರಿಗೆ ದೆಹಲಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದು ಸಂತೋಷದ ವಿಚಾರ. ಸೋಮವಾರ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿ ಜಾಮೀನು ಸಿಗುವ ಆಶಯ ವ್ಯಕ್ತಪಡಿಸಿದ್ದೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next