Advertisement

ಅನುಭವ ಬಿಚ್ಚಿಡುವ “ಗೂಢಚರ್ಯೆಯ ಆ ದಿನಗಳು’

09:25 PM Jun 25, 2019 | mahesh |

ಗೂಢಚರ್ಯೆಯ ಆ ದಿನಗಳು ಡಾ| ಡಿ.ವಿ. ಗುರುಪ್ರಸಾದ್‌ ಅವರ ಅನುಭವ ಕಥನ. ಇದರ ಇಂಗ್ಲಿಷ್‌ ಅವತರಣಿಕೆ ದಿ ಕಾರಿಡಾರ್ ಆಫ್ ಇಂಟೆಲಿಜೆನ್ಸ್‌ ಪ್ರಕಟಗೊಂಡಿದೆ. ಲೇಖಕರು ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥನಾಗಿ ನೇಮಕವಾದಾಗಿನಿಂದ ವಿದಾಯ ಹೇಳುವವರೆಗಿನ ಅನುಭವಗಳನ್ನು ಚಿತ್ರಿಸುತ್ತಾ ಹೋಗುತ್ತಾರೆ. ಇದರಲ್ಲಿ ಒಟ್ಟು 17 ಅಧ್ಯಾಯಗಳಿದ್ದು, ತಮ್ಮ 3 ವರ್ಷದ ಅನುಭವಗಳ ಕುರಿತು ಬಿಡಿಬಿಡಿಯಾಗಿ ವಿವರಿಸುತ್ತಾರೆ.

Advertisement

ಘಟನೆ: 1
ಇವರು ಎಸ್‌.ಎಂ.ಕೃಷ್ಣ ಅವರ ಕುರಿತು ಒಂದು ಕಡೆಯಲ್ಲಿ ಅನಿರೀಕ್ಷಿತ ಕೆಲಸ ಕಾರ್ಯಗಳನ್ನು ಮಾಡುವುದರಲ್ಲಿ ಕೃಷ್ಣಾಜೀ ಸಿದ್ಧ‌ ಹಸ್ತರೆಂದು ಬಣ್ಣಿಸುತ್ತಾ ಹೇಗೆ ರಾಜ್ಯವಿಧಾನ ಸಭೆಯನ್ನು ವಿಸರ್ಜಿಸುವ ತೀರ್ಮಾನ ಕೈಗೊಂಡರು ಎಂಬ ತಮ್ಮ ಪ್ರತ್ಯಕ್ಷ ಅನುಭವವನ್ನು ತಿಳಿಸುತ್ತಾರೆ.

ಘಟನೆ: 2
3 ಮುಖ್ಯಮಂತ್ರಿಗಳ ಅಧೀನದಲ್ಲಿ ಕೆಲಸ ಮತ್ತು ರಾಜಕೀಯವನ್ನು ಅತ್ಯಂತ ಹತ್ತಿರದಿಂದ ಕಂಡ ಲೇಖಕರು ತಮ್ಮ ವಿಶಿಷ್ಟ ಅನುಭವಗಳ ಕುರಿತು ಹೆಮ್ಮೆಯಿಂದ ಬರೆಯುತ್ತಾರೆ. ರಾಜ್‌ಕುಮಾರ್‌ ಅಪಹರಣ ಸಂದರ್ಭ, ಖೊಟ್ಟಿ ಛಾಪಾಕಾಗದ ಹಗರಣದ ಸ್ಫೋಟ, ನಕ್ಸಲ್‌ ನಾಯಕ ಸಾಕೇತ್‌ರಾಜನ್‌ ಎನ್‌ಕೌಂಟರ್‌, ವೆಂಕಟಮ್ಮಹಳ್ಳಿಯಲ್ಲಿ ನಡೆದ ಪೊಲೀಸರ ಮಾರಣಹೋಮ ಸಂದರ್ಭದಲ್ಲಿ ಆಡಳಿತಗಾರರು, ಮಂತ್ರಿಗಳು ಸ್ಪಂದಿಸಿದ ರೀತಿಯ ಕುರಿತು ವಿವರಿಸುತ್ತಾರೆ.

ಘಟನೆ: 3
ಲೇಖಕರು ತಾವು ಹತ್ತಿರದಿಂದ ಕಂಡ ವಿ.ಐ.ಪಿ.ಗಳ ಕುರಿತು ವಿವರಿಸುತ್ತಾ ಹೋಗುತ್ತಾರೆ. ತಮ್ಮ ಸೇವಾವಧಿಯ ಸಂದರ್ಭದಲ್ಲಿ ಭೇಟಿಯಾದ ಇಂದಿರಾ ಗಾಂಧಿ, ಕತಾರ್‌ ದೇಶದ ದೊರೆ, ರಾಜೀವ್‌ ಗಾಂಧಿ, ಪ್ರದಾನಿ ಚಂದ್ರಶೇಖರ್‌ ಮೊದಲಾದವರ ಜತೆಗಿದ್ದ ಅನುಭವಗಳ ಕುರಿತು 14ನೇ ಅಧ್ಯಾಯದಲ್ಲಿ ವಿವರಿಸುತ್ತಾರೆ.

ಗೂಢಚಾರಿಕೆ ಎಂದರೇನು? ಅವರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ, ಅವರಿಗೆ ಉಂಟಾಗುವ ತೊಂದರೆಗಳೇನು ಎನ್ನುವುದನ್ನು ತಿಳಿಸುವುದಕ್ಕೋಸ್ಕರ ಲೇಖಕರು ತಮ್ಮ ಅನುಭವಗಳನ್ನು ಪುಸ್ತಕ ರೂಪಕ್ಕೆ ತರುತ್ತಾರೆ. ಪೊಲೀಸ್‌ ಮಹಾನಿದೇರ್ಶಕರಾಗಿ 2011ರಲ್ಲಿ ನಿವೃತ್ತಿ ಹೊಂದಿದ ನಂತರ ಲೇಖಕರು ತಮ್ಮ ಸಮಯವನ್ನು ಬರವಣಿಗೆಗೆ ಮೀಸಲಿಡುತ್ತಾರೆ. ಇವರು ಸುಮಾರು 60 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.

Advertisement

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next