ಬಸವಕಲ್ಯಾಣ: ಹುಲಸೂರನಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದೇಶ್ವರ ಸ್ವಾಮೀಜಿ ಅವರು ಒಂದು ತಿಂಗಳ ಕಾಲ ಪ್ರವಚನ ನಡೆಸಿಕೊಡಲು ಸಮ್ಮತಿಸಿದ್ದು, ಕಾರ್ಯಕ್ರಮಕ್ಕೆ ಬೇಕಾಗುವ ವ್ಯವಸ್ಥೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ಹುಲಸೂರನ ಡಾ| ಶಿವಾನಂದ ಸ್ವಾಮೀಜಿ ಹೇಳಿದರು.
ಹುಲಸೂರ ಸಮೀಪದ ತೋರಿ ಬಸವಣ್ಣ ದೇವಸ್ಥಾನದ ಜಾತ್ರಾಮಹೋತ್ಸವ ನಿಮಿತ್ತ ಆಯೋಜಿಸಿದ್ದ ಧರ್ಮ ಚಿಂತನ ಕಾರ್ಯಕ್ರಮದ ನೇತೃತ್ವ ವಹಿಸಿ ಆಶಿರ್ವಚನ ನೀಡಿದ ಶ್ರೀಗಳು, ಮಕರ ಸಂಕ್ರಾತಿಯ ಶುಭ ಸಂದರ್ಭದಲ್ಲಿ ನಂದಿ ಬಸವಣ್ಣನ ಜಾತ್ರೆ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಸುಧಿಧೀರ ಕಾಡಾದಿ ಮಾತನಾಡಿ, ತೋರಿ ಬಸವಣ್ಣ ದೇವಸ್ಥಾನ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರ ಹಾಗೂ ಜನ ಪ್ರತಿನಿ ಧಿಗಳು ಗಮನ ಹರಿಸಬೇಕಾದ ಅಗತ್ಯವಿದೆ ಎಂದರು.
ಸಾಯಗಾಂವ ಶ್ರೀ ಶಿವಾನಂದ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ, ಮುಖಂಡ ರಾಜಕುಮಾರ ನಿಡೋದೆ ಮಾತನಾಡಿದರು. ಶ್ರೀ ಶಂಕರಲಿಂಗ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭುಸಾರೆ, ಗ್ರಾಪಂ ಅಧ್ಯಕ್ಷೆ ಮಂಗಲಾ ಡೋಣಗಾಂವಕರ್, ಉಪಾಧ್ಯಕ್ಷ ಮಲ್ಲಾರಿ ವಾಗಮಾರೆ, ಪ್ರಮುಖರಾದ ಚಂದ್ರಕಾಂತ ದೇಟೆ°, ಮಲ್ಲಪ್ಪಾ ಕಾಮಶೆಟ್ಟೆ, ದೇವಿಂದ್ರ ಭೋಪಳೆ, ಬಸವರಾಜ ಡೊಣಗಾಂವಕರ್, ಪಂಡಿತ ಜಮಾದಾರ, ಸಿದ್ರಾಮ ಬೀರಗೆ, ರಮೇಶ, ರುದ್ರಪ್ಪ ಕುಡಂಬ್ಲೆ, ವಿಶ್ವನಾಥ ಶೀಲವಂತ, ಮಾದಪ್ಪಾ ಕಾಕನಾಳೆ ಇದ್ದರು. ಗದಗಯ್ನಾ ಮಠಪತಿ ಸ್ವಾಗತಿಸಿ, ನಿರೂಪಿಸುದರು.
ಎರಡು ದಿನ ನಡೆಯುವ ತೋರಿ ಬಸವಣ್ಣನ ಜಾತ್ರೆಗೆ ರಾಜ್ಯ ಹಾಗೂ ಆಂಧ್ರ, ಮಹಾರಾಷ್ಟ್ರ ಹಾಗೂ ನಾನಾ ಭಾಗದ ಭಕ್ತರು ಆಗಮಿಸಿ, ನದಿಯಲ್ಲಿ ಪುಣ್ಯ ಸ್ನಾನ ಗೈದು, ದೇವರ ದರ್ಶನ ಪಡೆದರು.