Advertisement
ತಾಪಂ ಮಾಜಿ ಉಪಾಧ್ಯಕ್ಷ ಟಿ.ಎಂ. ಅಶೋಕ್‌ಕುಮಾರ್ ಗ್ರಾಮದ ಜನತೆ, ಶಾಲಾಭಿವೃದ್ಧಿ ಸಮಿತಿ, ಗ್ರಾಪಂ ಸದಸ್ಯರ ಸಹಕಾರದಿಂದ ಶಾಲಾ ಮಕ್ಕಳಿಗೆ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಸಿಗುತ್ತಿದೆ. ಮಕ್ಕಳಿಗೆ ಅನುಭವಿ ಶಿಕ್ಷಕರಿಂದ ತರಗತಿ, ಗುಂಪು ಅಧ್ಯಯನ, ರಾತ್ರಿ ಓದು ಮುಂತಾದ ಅಧ್ಯಯನ ಮಾಡಿಸಲಾಗುತ್ತಿತ್ತು. ಪರೀಕ್ಷ ಅವಧಿವರೆಗೆ ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ, ರಾತ್ರಿ ಪಾಳಿಯಲ್ಲಿ ಪೋಷಕರ ಮನೆಗೆ ಭೇಟಿ,ಆಪ್ತಸಮಾಲೋಚನೆ ಮಾಡಲಾಗುತ್ತಿತ್ತು ಎಂದು ಶಿಕ್ಷಣಾಧಿಕಾರಿ ನಂಜುಂಡೇಗೌಡ ತಿಳಿದರು.2013-14ರಲ್ಲಿ ಪ್ರಾರಂಭಗೊಂಡ ಪ್ರೌಢಶಾಲೆ ಆರಂಭದಿಂದಲೂ ಒಂದು ಕೊಠಡಿ ನಿರ್ಮಾಣವಾಗಿರಲಿಲ್ಲ. ಪ್ರಸ್ತುತ ನೂತನ ಕಟ್ಟಡವಾಗುತ್ತಿದ್ದು, ಆದರೂ ಶೇ.100 ಫಲಿತಾಂಶ ಪಡೆಯುತ್ತಿದೆ. ಉತ್ತಮ ಫಲಿತಾಂಶಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಭಿನಂದನಾ ಪತ್ರವು ದಕ್ಕಿದೆ.
ರವಿಶಂಕರ್ ತಿಳಿಸಿದ್ದಾರೆ.