Advertisement

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

10:55 PM May 05, 2024 | Team Udayavani |

ಉಳ್ಳಾಲ: ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ವೈದ್ಯವಿದ್ಯಾರ್ಥಿಗಳು ಪವಾಡಸದೃಶ ಪಾರಾಗಿದ್ದಾರೆ. ಅಪಘಾತದಿಂದ ಎಚ್‌.ಟಿ. ಲೈನ್‌ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಪರಿಸರದ ಜನರಿಗೆ ರವಿವಾರ ಮಧ್ಯಾಹ್ನದವರೆಗೆ ವಿದ್ಯುತ್‌ ಕಡಿತವಾಗಿತ್ತು.

Advertisement

ದೇರಳಕಟ್ಟೆಯ ವೈದ್ಯಕೀಯ ಕಾಲಜಿನ ವಿದ್ಯಾರ್ಥಿಗಳು ತಡರಾತ್ರಿ ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆಗೆ ಸಾಗುತ್ತಿದ್ದಾಗ ಟಿಪ್ಪರ್‌ ಒಂದನ್ನು ಓವರ್‌ಟೇಕ್‌ ಮಾಡುವ ಸಂದರ್ಭದಲ್ಲಿ ಟಿಪ್ಪರ್‌ ಚಾಲಕ ಲಾರಿಯನ್ನು ಬಲಕ್ಕೆ ತಿರುಗಿಸಿದ್ದು, ಅಪಘಾತದಿಂದ ತಪ್ಪಿಸಲು ಕಾರಿನ ಚಾಲಕ ಎಡಕ್ಕೆ ತಿರುಗಿಸಿದನು.

ನಿಯಂತ್ರಣ ತಪ್ಪಿದ ಕಾರು ವಿದ್ಯುತ್‌ ಕಂಬಕ್ಕೆ ಬಡಿದು ರಸ್ತೆ ಬದಿಯಲ್ಲಿ ಹಾಕಿದ್ದ ಕಬ್ಬಿಣ ತಡೆಬೇಲಿಗೆ ಸಿಲುಕಿ ತಲೆಕೆಳಗಾಗಿ ನಿಂತಿತ್ತು.

ಇತರ ವಾಹನ ಸವಾರರು ಕಾರಿನೊಳಗಿದ್ದವರನ್ನು ಹೊರಗೆಳೆದು ರಕ್ಷಿಸಿದರು. ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿಯ ಇಳಿಜಾರಿನಲ್ಲಿ ಸಿಲುಕಿದ್ದ ಕಾರನ್ನು ರವಿವಾರ ಮಧ್ಯಾಹ್ನದ ವೇಳೆಗೆ ತೆಗೆದಿದ್ದು ಬಳಿಕ ವಿದ್ಯುತ್‌ ಕಂಬ ಹಾಕಿ ವಿದ್ಯುತ್‌ ವ್ಯವಸ್ಥೆ ಮಾಡಲಾಯಿತು.
ಮಂಗಳೂರು ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next