Advertisement

ತೊಡಿಕಾನ: ಹಿಂದೂ ಧರ್ಮಜಾಗೃತಿ ಸಭೆ 

03:39 PM Dec 11, 2017 | Team Udayavani |

ಬೆಳ್ಳಾರೆ: ಆಧುನಿಕ ಯುಗದಲ್ಲಿ ಜನರು ಮನಃಶಾಂತಿ ಕಡಿಮೆಯಾಗಿ ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಧರ್ಮಾಚರಣೆಯಿಂದ ಮಾತ್ರ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿದೆ. ಹಿಂದೂ ಧರ್ಮದ ಶ್ರೇಷ್ಠತೆ ಧರ್ಮಾಚರಣೆಯಲ್ಲಿ ಅಡಗಿದೆಯೆಂದು ಸನಾತನ ಸಂಸ್ಥೆಯ ವಕ್ತಾರರಾದ ಆನಂದ ಗೌಡ ಇವರು ಹೇಳಿದರು.

Advertisement

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಅಕ್ಷಯ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಆಯೋಜಿಸಿದ್ದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಅವರು ಮಾರ್ಗದರ್ಶನ ಮಾಡಿದರು.

ವಿಚಾರವಾದಿಗಳು ಎಂದುಕೊಂಡಿರುವ ವಿಚಾರಶೂನ್ಯ ಹಿಂದೂ ವಿರೋಧಿಗಳಿಂದಾಗಿ ಹಿಂದೂ ಧರ್ಮದ ಅವನತಿಯಾಗುತ್ತಿದೆ. ‘ಸುಖಸ್ಯ ಮೂಲಂ ಧರ್ಮಃ’ ಅಂದರೆ ಧರ್ಮಾಚರಣೆಯಿಂದಲೇ ಸುಖ ಸಿಗಲು ಸಾಧ್ಯವಿದೆ. ನಾವೆಲ್ಲರೂ ಸ್ವತಃ ಧರ್ಮಾಚರಣೆಯನ್ನು ಮಾಡಿ ಅದರ ಮಹತ್ವವನ್ನು ತಿಳಿಸುವುದು ಆವಶ್ಯಕತೆ ಇದೆ ಎಂದು ಅವರು ಹೇಳಿದರು.

ಹಿಂದೂ ರಾಷ್ಟ್ರದ ಸ್ಥಾಪನೆಯೇ ಗುರಿ
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ವಿವೇಕ್‌ ಪೈ ಮಾತನಾಡಿ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಕೇವಲ ವಾನರರ ಮಾಧ್ಯಮದಿಂದ ಧರ್ಮದ ರಕ್ಷಣೆಯನ್ನು ಮಾಡಿ. ದ್ವಾಪರಯುಗದಲ್ಲಿ ಭಗವಾನ್‌ ಶ್ರೀ ಕೃಷ್ಣನು ಪಾಂಡವರ ಮಾಧ್ಯಮದಿಂದ ಧರ್ಮಸಂಸ್ಥಾಪನೆಯನ್ನು ಮಾಡಿದ. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಗುರುಗಳಾದ ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾವಳೆಯರ ಮಾಧ್ಯಮದಿಂದ ಹಿಂದೂ ಸ್ವರಾಜ್ಯದ ಸ್ಥಾಪನೆಯನ್ನು ಮಾಡಿದರು. ಅದೇ ರೀತಿ ನಾವು ಗುರುಗಳ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು
ಸಿದ್ಧರಾಗಬೇಕಾಗಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಮೋಕ್ಷದ ತನಕದ ಉಲ್ಲೇಖ ಇದೆ. ಆದ್ದರಿಂದ ಅತ್ಯಂತ ಶ್ರೇಷ್ಠವಾದ ಹಿಂದೂ ಧರ್ಮದ ಮಾರ್ಗದರ್ಶನಕ್ಕನುಸಾರವಾಗಿ ಸಾಧನೆ ಮಾಡಬೇಕಿದೆ.

ದುಷ್ಟಪ್ರವೃತ್ತಿಗಳ ವಿರುದ್ಧ ಹೋರಾಡಿ
ಇಡೀ ವಿಶ್ವದಲ್ಲಿ ದೇವರಕೋಣೆ, ಮಾತೆ, ಪುಣ್ಯಭೂಮಿ, ವಿಶ್ವಗುರು ಎಂದು ಕರೆಸಿಕೊಳ್ಳುವಂತಹ ಅರ್ಹತೆಯಿರುವ ದೇಶ ನಮ್ಮ ಭಾರತ ಮಾತ್ರ. ಆದರೆ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಧರ್ಮದ್ರೋಹಿಗಳಿಂದ ಆಘಾತಗಳಾಗುತ್ತಿವೆ. ಸೆಕ್ಯುಲರ್‌ ವ್ಯವಸ್ಥೆಯಿಂದಾಗಿ ಹಿಂದೂಗಳಿಗೆ ಆಡಳಿತ ವ್ಯವಸ್ಥೆಯಲ್ಲಿ ವಂಚನೆಯಾಗುತ್ತಿದೆ. ದೇಶದ ಕಾನೂನು, ರಕ್ಷಣಾ, ಶಿಕ್ಷಣ ಕ್ಷೇತ್ರ ಹೀಗೆ ಎಲ್ಲೆಡೆ ಭ್ರಷ್ಟಾಚಾರ ಮಿತಿಮೀರಿದೆ. ನಾವು ಈ ಸಾಮಾಜಿಕ ದುಷ್ಟಪ್ರವೃತ್ತಿಗಳ ವಿರುದ್ಧ ಕಾನೂನು ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

Advertisement

ಬೆಳ್ತಂಗಡಿಯ ಜಯರಾಜ್‌ ಸಾಲ್ಯಾನ್‌ ಸಭೆಯನ್ನು ಉದ್ಘಾಟಿಸಿದರು. ಈ ವೇಳೆ ವೇ| ಮೂ| ಪ್ರಕಾಶ್‌ ಡಿ. ಸುಬ್ರಹ್ಮಣ್ಯ ಅವರು ವೇದಮಂತ್ರ ಪಠಿಸಿದರು. ಹಿಂದೂ ಜನಜಾಗೃತಿ ಸಮಿತಿಯ ನಂದಕುಮಾರ್‌ ಪ್ರಭು ಶಂಖನಾದ ಮೊಳಗಿಸಿದರು. ಬೆಳ್ತಂಗಡಿ ತಾಲೂಕಿನ ಕಾನರ್ಪ ಚಿರಂಜೀವಿ ಯುವಕ ಮಂಡಲದ ಸಂಸ್ಥಾಪಕಾಧ್ಯಕ್ಷ ಜಯರಾಜ್‌ ಸಾಲ್ಯಾನ್‌ ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಧರ್ಮಪಾಲ ಗೌಡ ಸಮಿತಿಯ ಪರಿಚಯ ಮಾಡಿದರು. ಸಭೆಯ ಸೂತ್ರಸಂಚಾಲನೆಯನ್ನು ಚೇತನಾ ನಿರ್ವಹಿಸಿದರು.

ಸಭಾಗೃಹದಲ್ಲಿ ಧಾರ್ಮಿಕ ಆಚರಣೆಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿಕೊಡುವ ಸನಾತನದ ಗ್ರಂಥಗಳ ಮಾರಾಟ ಮತ್ತು ಪ್ರದರ್ಶನ, ಧರ್ಮಶಿಕ್ಷಣವನ್ನು ತಿಳಿಸಿಕೊಡುವ ಫ್ಲೆಕ್ಸ್‌ ಪ್ರದರ್ಶನ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next