Advertisement

ಪೆರೇರಾ ಪ್ರಚಂಡ ಶತಕ

10:44 AM Jan 05, 2019 | |

ಬೇ ಓವಲ್ (ನ್ಯೂಜಿಲ್ಯಾಂಡ್): ರನ್ ಹೊಳೆಯೇ ಹರಿದ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯ ಕೊನೆಗೆ ಶ್ರೀಲಂಕಾ 21 ರನ್ ಗಳಿಂದ ಸೋಲುವುದರ ಮೂಲಕ ಅಂತ್ಯವಾಯಿತು. ಲಂಕಾ  ಅಲ್ ರೌಂಡರ್ ತಿಸ್ಸರ ಪೆರೇರಾ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. 

Advertisement

ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಜಿಲ್ಯಾಂಡ್, ರಾಸ್ ಟೈಲರ್ (90), ಕಾಲಿನ್ ಮನ್ರೋ (87), ಜಿಮ್ಮಿ ನಿಶಮ್ (64)ರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 319ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ವಿಶೇಷವೆಂದರೆ ನ್ಯೂಜಿಲ್ಯಾಂಡ್ ಸರದಿಯ 4 ಬ್ಯಾಟ್ಸಮನ್ ಗಳು ರೌನ್ ಔಟ್ ಗೆ ಬಲಿಯಾದರು. 

ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾಗೆ ಧನುಷ್ಕಾ ಗುಣತಿಲಕ ಆಸರೆಯಾದರು. 71 ರನ್ ಗಳಿಸಿದ ಗುಣತಿಲಕ ನೀಶಮ್ ಗೆ ವಿಕೆಟ್ ಒಪ್ಪಿಸುವದರೊಂದಿಗೆ ಲಂಕನ್ ಆಟಗಾರರ ಪೆವಿಲಿಯನ್ ಪರೇಡ್ ಆರಂಭವಾಗಿತ್ತು. ಒಂದು ಹಂತದಲ್ಲಿ 128 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡ ಪಂದ್ಯ ಗೆಲ್ಲುವ ಆಸೆಗೆ ಎಳ್ಳುನೀರು
ಬಿಟ್ಟಾಗಿತ್ತು. ಆದರೆ ನಂತರ ನಡೆದಿದ್ದು ಪೆರೇರಾ ಒನ್ ಮ್ಯಾನ್ ಶೋ.


ತಿರುಗಿ ಬಿದ್ದ ತಿಸ್ಸರ:
ಒಂದು ಕಡೆ ಬ್ಯಾಟ್ಸಮನ್ ಗಳು ಕಿವೀಸ್ ದಾಳಿಗೆ ರನ್ ಗಳಿಸಲು ಪರದಾಡುತ್ತಿದ್ದರೆ ಕ್ರೀಸ್ ಆಕ್ರಮಿಸಿಕೊಂಡ ಅಲ್ ರೌಂಡರ್ ತಿಸ್ಸರ ಪೆರೇರಾ ಹೊಡಿಬಡಿ ಆಟಕ್ಕೆ ಮುಂದಾದರು. ಸಿಕ್ಸ್ , ಫೋರ್ ಗಳಿಂದ ನ್ಯೂಜಿಲ್ಯಾಂಡ್ ಬೌಲರ್ ಗಳ ಬೆವರಿಳಿಸಿದ ಪೆರೇರಾ ಕೇವಲ 74 ಎಸೆತಗಳಿಂದ 140 ರನ್ ಬಾರಿಸಿದರು. ಕೇವಲ 57 ಎಸೆತಗಳಿಂದ ತನ್ನ ಚೊಚ್ಚಲ ಏಕದಿನ ಅಂತರಾಷ್ತ್ರೀಯ  ಶತಕ ಗಳಿಸಿದ ದ್ವೀಪ ರಾಷ್ಟ್ರದ ಆಟಗಾರ 8 ಫೋರ್ ಮತ್ತು 13 ಭರ್ಜರಿ ಸಿಕ್ಸರ್ ಸಿಡಿಸಿದರು. 


46.2 ಓವರ್ ನಲ್ಲಿ ತಂಡದ ಮೊತ್ತ 298 ರನ್ ಗಳಿಸಿದ್ದಾಗ ಪೆರೇರಾ, ಮ್ಯಾಟ್ ಹೆನ್ರಿ ಎಸೆತದಲ್ಲಿ ಬೌಲ್ಟ್ ಗೆ ಕ್ಯಾಚ್ ನೀಡಿ ಔಟ್ ಆಗುವುದರ ಮೂಲಕ ಶ್ರೀಲಂಕಾ ತಂಡ 21 ರನ್ ಗಳಿಂದ ಸೋಲನುಭವಿಸಿತು. ತಿಸ್ಸರ ಪೆರೇರಾ ಈ ಸಾಹಸಕ್ಕಾಗಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next