Advertisement

ಈ ವಾರ ಮಕ್ಕಳ ಬೈಸಿಕಲ್‌ ಬರ್ತಿದೆ

11:05 AM Jun 01, 2018 | Team Udayavani |

ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದವು. “ಸೆಕೆಂಡ್‌ಹಾಫ್’, “ವೆನಿಲ್ಲಾ’, “ಆದರ್ಶ’ ಹಾಗೂ “ಪರಿಧಿ’ ಚಿತ್ರಗಳು ಈ ವಾರ ತೆರೆಕಾಣುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಮತ್ತೂಂದು ಚಿತ್ರ ಸದ್ದಿಲ್ಲದೇ ಈ ವಾರ ಬಿಡುಗಡೆಯಾಗುತ್ತಿದೆ.

Advertisement

ಅದು “ಬೈಸಿಕಲ್‌’. ಇದು ಮಕ್ಕಳ ಚಿತ್ರ. ನವೀನ್‌ ಕುಮಾರ್‌ ಈ ಸಿನಿಮಾ ನಿರ್ದೇಶಕರು. ವೆಂಕಟೇಶ್‌ ಆಚಾರ್ಯ ನಿರ್ಮಾಪಕರು. ಹಳ್ಳಿ ಮಕ್ಕಳು ಸಿಟಿ ಬೈಸಿಕಲ್‌ ತೆಗೆದುಕೊಳ್ಳಲು ಆಸೆ ಪಡುತ್ತಾರೆ. ಆದರೆ, ಒಮ್ಮೆಲೇ ಅಷ್ಟೊಂದು ಹಣ ಕೊಟ್ಟು ಸೈಕಲ್‌ ಖರೀದಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

ಆಗ ಮಕ್ಕಳೆಲ್ಲಾ ಸೇರಿ ಸೈಕಲ್‌ನ ಒಂದೊಂದೇ ಬಿಡಿ ಭಾಗಗಳನ್ನು ಖರೀದಿಸಿ, ತಾವೇ ಸೈಕಲ್‌ ನಿರ್ಮಿಸುತ್ತಾರೆ. ಆ ಬಿಡಿ ಭಾಗಗಳನ್ನು ಖರೀದಿಸಲು ಮಕ್ಕಳು ಹೇಗೆ ಹಣ ಸಂಪಾದಿಸುತ್ತಾರೆಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. 

ಚಿತ್ರದಲ್ಲಿ ಅಭಿಷೇಕ್‌ ಆಚಾರ್ಯ, ವರ್ಣಶ್ರೀ, ನಾಗೇಂದ್ರ, ಯಶವಂತ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಪಳನಿ ಡಿ ಸೇನಾಪತಿ ಸಂಗೀತವಿದ್ದು, ಚಿತ್ರದ ಒಂದು ಹಾಡನ್ನು ಶ್ರೀಮುರುಳಿ ಹಾಡಿದ್ದಾರೆ. ಮನು ಅವರ ಛಾಯಾಗ್ರಹಣ ಚಿತ್ರಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next