Advertisement

ಈ ರೈಲಿರುವುದು ಬರೀ ಪ್ರಯಾಣಕ್ಕಲ್ಲ ; ಸಂಗಾತಿ ಆಯ್ಕೆಗಾಗಿ “ಲವ್ ಟ್ರೈನ್”!

09:59 AM Sep 01, 2019 | Suhan S |

ಈಗಿನ ಕಾಲದಲ್ಲಿ ಪ್ರೀತಿ ಆಗೋದು ಸುಲಭ. ಆದರೆ ಪ್ರೀತಿಸಿದವರು ಸಿಗೋದು ಕಷ್ಟ. ಜೀವನದ ಸಂಗಾತಿಯನ್ನು ಹುಡುಕಲು ಚೀನದಲ್ಲೊಂದು ವಿಶೇಷವಾದ ರೈಲು ಸೇವೆ ಆರಂಭವಾಗಿದೆ..!

Advertisement

ಚೀನ ದೇಶದಲ್ಲಿ ಹೆಚ್ಚು ಅವಿವಾಹಿತ ಯುವ ಜನಾಂಗ ಇದ್ದು, ಪರಸ್ಪರ ಅರ್ಥೈಸಿಕೊಂಡುಬಾಳ್ವೆ ಸಾಗಿಸುವ ಸಂಗಾತಿಯನ್ನು ಹುಡುಕಲು ಅನುಕೂಲವಾಗುವ ಸುಲಭ ಮಾರ್ಗವೊಂದನ್ನು ಚೀನದ ಆಡಳಿತ ಪಕ್ಷ “  ಲವ್-ಪರ್ಸ್ಯೂಟ್ ಟ್ರೈನ್ ” ಅನ್ನುವ ವಿಶೇಷವಾದ ರೈಲು ಸೇವೆಯ ಆರಂಭ ಮಾಡಿದೆ. “ವೈ 999” ಎನ್ನುವ ರೈಲನ್ನು “ಲವ್ ಟ್ರೈನ್” ಎಂದು ಕೆರೆಯುತ್ತಾರೆ. ಇದರಲ್ಲಿ ವಿಶೇಷವಾಗಿ ಯುವ ಮನಸ್ಸನ್ನು ಸೆಳೆಯುವ ವಸ್ತುಗಳಿದ್ದು,ಇದರ ಸೇವೆ ಆರಂಭವಾಗಿ ಮೂರು ವರ್ಷ ಕಳೆದಿದ್ದು, ಇದುವರೆಗೆ ಮೂರು ಬಾರಿ ಸಂಚರಿಸಿದೆ. ಪ್ರತಿಬಾರಿ ಲವ್ ಟ್ರೈನ್ ಪಯಣಕ್ಕಾಗಿ ಸಾವಿರಾರು ಮಂದಿ ಕಾಯುತ್ತಾರೆ.

ಇತ್ತೀಚಿಗೆಷ್ಟೇ ಈ ವರ್ಷದ ಲವ್ ಟ್ರೈನ್ ಸಂಚಾರ ಮಾಡಿದ್ದು ಸಾವಿರ ಮಂದಿ ಯುವಕ-ಯುವತಿಯರು ಇದರಲ್ಲಿ ಪಯಣ ಮಾಡಿ ತಮ್ಮ ಜೀವನ ಸಂಗಾತಿಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಎರಡು ದಿನ ಸಂಚರಿಸುವ ಲವ್ ಟ್ರೈನ್  ನಲ್ಲಿ ಪರಸ್ಪರ ಭಾವನೆಯ ಬೆಸುಗೆ ಒಂದಾಗುತ್ತವೆ. ಕೆಲವರು ಲವ್ ಟ್ರೈನ್ ನಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಿ ಮದುವೆ ಆಗಿದ್ದಾರೆ. ಚೀನ ದೇಶದ ಈ ಹೊಸ ತಂತ್ರ ಈಗ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next