Advertisement

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

03:05 PM Jun 18, 2024 | Team Udayavani |

ಬಜಪೆ: ಬಜಪೆ ಸಮೀಪದ ಕಂದಾವರ ಗ್ರಾಮ ಪಂಚಾಯತ್‌ನ ಗ್ರಾಮಗಳು ಜಗದ್ವ ಖ್ಯಾತ. ಆದರೆ, ಸ್ಥಳೀಯವಾಗಿ ಇದನ್ನು ಅಂಡ ಮಾನ್‌ ಎಂದೂ ಹೇಳು ತ್ತಾರೆ. ಯಾಕೆಂದರೆ ಇಲ್ಲಿಗೆ ಸರಿಯಾದ ಸಂಚಾರ ವ್ಯವ ಸ್ಥೆಯೇ ಇಲ್ಲ. ಈ ಊರಿನ ಪಕ್ಕಕ್ಕೇ ದಿನಕ್ಕೆ ಏಳು ವಿಮಾನಗಳು ಬರುತ್ತವೆ. ಆದರೆ, ಈ ಊರಿಗೆಬಸ್‌ ಬರುವುದು ಮಾತ್ರ ಎರಡೇ ಎರಡು! ಇದು ಮಂಗಳೂರು ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವ ಆದ್ಯ ಪಾಡಿ ಮತ್ತು ಕೊಳಂಬೆ ಎಂಬ ಊರಿನ ಕಥೆ. ನಮಗೆ ದುಬೈಗೆ ಹೋಗುವುದಾದರೂ
ಸುಲಭ, ಮಂಗಳೂರಿಗೆ ಹೋಗುವುದೇ ಕಷ್ಟ ಎಂದು ಇಲ್ಲಿನ ಜನರು ತಮಾಷೆ ಮಾಡಿಕೊಳ್ಳುವುದು ಉಂಟು!

Advertisement

2011ರ ಜನಗಣತಿಯಂತೆ ಕೊಳಂಬೆಯಲ್ಲಿ 1239 ಕುಟುಂಬಗಳಿದ್ದು, ಜನಸಂಖ್ಯೆ 5,592. ಅದ್ಯಪಾಡಿ ಗ್ರಾಮದಲ್ಲಿ 1148 ಕುಟುಂಬಗಳಿದ್ದು ಜನ ಸಂಖ್ಯೆ 2089! ವಿಮಾನ ನಿಲ್ದಾಣದ ಪಕ್ಕದಲ್ಲೇ ಇದ್ದರೂ ಅದ್ಯಪಾಡಿ, ಕೊಳಂಬೆ ಗ್ರಾಮಕ್ಕೆ ಯಾವುದೇ ಪೇಟೆ ಹತ್ತಿರವಿಲ್ಲ. ಪೇಟೆಗೆ ಬರಲು ಸುಮಾರು 6 ಕಿ.ಮೀ,ಸಂಚಾರ ಮಾಡಲೇ ಬೇಕು. ಅದ್ಯಪಾಡಿ, ಕೊಳಂಬೆಗೆ ಸಮೀಪದ
ಪೇಟೆಗಳು ಎಂದರೆ ಬಜಪೆ (ಉಣಿಲೆ ಮಾರ್ಗವಾಗಿ 7 ಕಿ.ಮೀ ) ಅದ್ಯಪಾಡಿಯಿಂದ ಕೈಕಂಬ ಪೇಟೆಗೆ ಸುಮಾರು 5.50 ಕಿ.ಮೀ.
ದೂರ, ಕೆಂಜಾರಿನ ಮೂಲಕ ಕಾವೂರು ಪೇಟೆಗೆ ಸುಮಾರು 6.50 ಕಿ.ಮೀ. ಆದರೆ, ಸರಿಯಾದ ಬಸ್‌ ಸಂಪರ್ಕ ಮಾತ್ರ ಇಲ್ಲ.

ಬಜಪೆ ಪೇಟೆ ಜತೆಗೆ ವ್ಯವಹಾರ ಸಂಬಂಧ
ಕೊಳಂಬೆ, ಅದ್ಯಪಾಡಿ ಗ್ರಾಮದ ಜನರು ಹೆಚ್ಚು ಬಜಪೆ ಪೇಟೆಯನ್ನೇ ಹಿಂದಿನಿಂದ ಆವಲಂಬಿಸಿ ದ್ದಾರೆ. ಇದಕ್ಕೆ ಮುಖ್ಯ ಕಾರಣ ಬಸ್‌ ಹಾಗೂ ರಸ್ತೆ ಸಂಪರ್ಕ ಇರುವುದು. ಮಂಗಳೂರು ವಿಮಾನ ನಿಲ್ದಾಣದ ಹೊಸ ರನ್‌ ವೇಗೆ ಭೂಸ್ವಾಧೀನ ಮಾಡಿದ ಬಳಿಕ ಅದ್ಯಪಾಡಿ ಬಜಪೆಗೆ ಹೆಚ್ಚು ದೂರದ ಹಾದಿಯಾಗಿ ಪರಿಣಮಿಸಿದೆ. ಬಜಪೆ-ಆದ್ಯಪಾಡಿಯ ರಸ್ತೆಯ ಮಧ್ಯದಲ್ಲಿಯೇ ವಿಮಾನ ನಿಲ್ದಾಣದ ಹೊಸರನ್‌ವೇ ಬಂದಿ ದೆ.ಬಜಪೆ ಪೇಟೆ ಜತೆಗೆ ವ್ಯವ ಹಾರ ಸಂಬಂಧ ಕೊಳಂಬೆ, ಅದ್ಯಪಾಡಿ ಗ್ರಾಮದ ಜನರು ಹೆಚ್ಚು ಬಜಪೆ ಪೇಟೆಯನ್ನೇ ಹಿಂದಿನಿಂದ ಆವಲಂಬಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಸ್‌ ಹಾಗೂ ರಸ್ತೆ ಸಂಪರ್ಕ ಇರುವುದು. ಮಂಗಳೂರು ವಿಮಾನ ನಿಲ್ದಾಣದ ಹೊಸ ರನ್‌ ವೇಗೆ ಭೂಸ್ವಾಧೀನ ಮಾಡಿದ ಬಳಿಕ ಅದ್ಯಪಾಡಿ ಬಜಪೆಗೆ ಹೆಚ್ಚು ದೂರದ ಹಾದಿಯಾಗಿ ಪರಿಣಮಿಸಿದೆ. ಬಜಪೆ-ಆದ್ಯಪಾಡಿಯ ರಸ್ತೆಯ ಮಧ್ಯದಲ್ಲಿಯೇ ವಿಮಾನ ನಿಲ್ದಾಣದ ಹೊಸ ರನ್‌ವೇ ಬಂದಿದೆ.

ಅದ್ಯಪಾಡಿಗೆ ಎಷ್ಟು ಬಸ್ಸಿದೆ ?
ಅದ್ಯಪಾಡಿಯಿಂದ ಬಜಪೆಗೆ ಬಸ್‌ಗಳು ಬೆಳಗ್ಗೆ 7.30ಕ್ಕೆ ಆರಂಭವಾಗುತ್ತವೆ. ಬಜಪೆಯಿಂದ 7.50ಕ್ಕೆ, 10.50ಕ್ಕೆ, 12.55ಕ್ಕೆ, 2.00ಕ್ಕೆ, 3.00ಕ್ಕೆ, ಸಂಜೆ 4.10ಕ್ಕೆ, 6 ಗಂಟೆಗೆ, ಸಂಜೆ 6.45ಕ್ಕೆ ಪ್ರಯಾಣ ಬೆಳೆಸುತ್ತದೆ. ಮಧ್ಯಾಹ್ನದ 2 ಗಂಟೆಯ ಒಂದು ಟ್ರಿಪ್‌ ಬಜಪೆಯಿಂದ ಆದ್ಯಪಾಡಿಯಾಗಿ ಕೆಂಜಾರಿನ ಮೂಲಕ ಮಂಗಳೂರಿಗೆ ಸಂಚಾರ ಮಾಡುತ್ತದೆ. ಬೆಳಗ್ಗೆ 7.30ಕ್ಕೆ ಬಜಪೆ ಬರುವ ಬಸ್ಸಿನಲ್ಲಿ ಕಾರ್ಮಿಕರೇ ತುಂಬಿದ್ದರೆ 8.15ಕ್ಕೆ ಬರುವ ಬಸ್ಸಿನಲ್ಲಿ ವಿದ್ಯಾರ್ಥಿಗಳೇ ಇರುವುದು.

ಶಿಕ್ಷಣಕ್ಕಾಗಿ ದೂರದ ಊರಿಗೆ ಹೋಗಲೇ ಬೇಕು… ಆದರೆ… ಅದ್ಯಪಾಡಿ, ಕೊಳಂಬೆಯ ವಿದ್ಯಾರ್ಥಿ ಗಳು ಪದವಿ ಮತ್ತು ಉನ್ನತ ಶಿಕ್ಷಣಕ್ಕಾಗಿ ಮಂಗಳೂರು, ಕಟೀಲು, ವಾಮಂಜೂರು, ಮೂಡುಬಿದಿರೆ ಹೋಗುತ್ತಾ ರೆ. ಪದವಿ ಪೂರ್ವ ಶಿಕ್ಷಣ, ಪ್ರೌಢ ಶಿಕ್ಷಣಕ್ಕಾಗಿ ಬಜಪೆ, ಕಟೀಲು, ಗುರುಪುರ, ಕೈಕಂಬ, ಕಾವೂರು, ವಾಮಂಜೂರಿಗೆ ಹೋಗುತ್ತಿದ್ದಾರೆ. ಅದ್ಯಪಾಡಿಯಿಂದ ಬಜ ಪೆಗೆ ಬಸ್‌ ಸಿಕ್ಕಿ ದರೆ ಬಚಾವ್‌. ಒಂದು ವೇಳೆ ಸಿಗದೆ ಇದ್ದರೆ ಕೆಲ ವರು ಅಲ್ಲಿಂದ ಕೆಂಜಾರಿನ ಕಡೆ ಗೆ ನಡೆದುಕೊಂಡು ಇಲ್ಲವೇ ಯಾರಲ್ಲಾದರೂ ಡ್ರಾಪ್‌ ಕೇಳಿ ಪ್ರಧಾನ ರಸ್ತೆಗೆ ಬರುತ್ತಾರೆ. ಅದೇ ರೀತಿ ಬಜಪೆಯಲ್ಲಿ ಬಸ್‌ ತಪ್ಪಿದರೆ ನೇರವಾಗಿ ಕೆಂಜಾರಿಗೆ ಹೋಗುವುದು,

Advertisement

ಆಲ್ಲಿ ಅದ್ಯಪಾಡಿಗೆ ಹೋಗುವ ಯಾವುದೇ ವಾಹನದ ಡ್ರಾಪ್‌ ಕೇಳಿ ಮನೆ ತಲುಪುವುದು. ಪರೀಕ್ಷೆ ಸಮಯದಲ್ಲಿ ಬಸ್‌ ಮಿಸ್‌ ಆದರೆ ಎಕ್ಸಾಮೇ ಮಿಸ್‌ ಆಗು ತ್ತದೆ ಎಂದು ಬೇಸ ರಿ ಸು ತ್ತಾರೆ ವಿದ್ಯಾರ್ಥಿ ಸುಪ್ರೀತ್‌ ಅದ್ಯಪಾಡಿ ಹೇಳಿದ್ದಾರೆ. ಈ ಬಹುತೇಕ ಎಲ್ಲ ಬಸ್‌ ಗಳು ಆದ್ಯಪಾಡಿಯಿಂದ ಬಜಪೆ ವರೆಗೆ ಮಾತ್ರ ಹೋಗುತ್ತವೆ. ಅಲ್ಲಿಂದ ಬೇರೆ ಬಸ್‌ ಹಿಡಿದು ಹೋಗ ಬೇಕು. ಹೀಗಾಗಿ ಅದ್ಯಪಾಡಿ -ಕೆಂಜಾರು- ಕಾವೂರು, ಅದ್ಯಪಾಡಿ -ಕೊಳಂಬೆ- ಗುರುಪುರ-ಕೈಕಂಬ ಮಾರ್ಗವಾಗಿ ಸಂಚರಿಸುವ ಬಸ್‌ ಅಗತ್ಯ ಇದೆ. ಅದರಲ್ಲೂ ಮುಖ್ಯವಾಗಿ ಅದ್ಯಪಾಡಿಯಿಂದ ಮಂಗಳೂರಿಗೆ ನೇರ ಬಸ್‌ ಬೇಕು ಎಂಬ ಬೇಡಿಕೆ ಜೋರಾಗಿದೆ. ಬಜಪೆಗೆ ಬಂದ ಬಸ್‌ ನೇರವಾಗಿ ಹೋದರೆ ಮಾತ್ರ ಅನುಕೂಲ. ಇಲ್ಲವಾದರೆ ಬಸ್ಸಿಗೆ ಕಾಯುವುದು, ಕಾಯುತ್ತಾ ಬಸ್ಸಿನಲ್ಲಿ ಕೂರುವುದು ತಾಳ್ಮೆ ಪರೀಕ್ಷೆ ಮಾಡುತ್ತದೆ. ಸಮಯವೂ ಇರುವುದಿಲ್ಲ.

ಬಸ್‌ ಗಳಿಗೆ ರವಿವಾರ ರಜೆಯಂತೆ!
ರವಿವಾರದ ಅದ್ಯಪಾಡಿಗೆ ಯಾವುದೇ ಬಸ್‌ ಸಂಚಾರ ಇಲ್ಲ. ಹೀಗಾಗಿ ನಾವು ಪೇಟೆಗೆ ಬರುವಂತಿಲ್ಲ. ಮನೆಯೊಳಗೆ ಕೂತು
ಜೈಲ್‌ನಂತೆ ಇರಬೇಕಾಗುತ್ತದೆ ಎನ್ನುತ್ತಾರೆ ಅದ್ಯಪಾಡಿ ಪದವು ಸೈಟ್‌ ನ ಲೀಲಕ್ಕ. ನಮ್ಮಲ್ಲಿ ಸ್ವಂತ ವಾಹನ ಇಲ್ಲ. ಬಸ್‌ ಒಂದೇ ಗತಿ. ಬಸ್ಸಿನಲ್ಲಿ ಬಜಪೆಗೆ ಬರಲು 18 ರೂಪಾಯಿ. ಬಸ್‌ ಇಲ್ಲದಿದ್ದರೆ ರಿಕ್ಷಾದಲ್ಲಿ ತೆರಳಲು 200 ರೂಪಾಯಿ! ಮದುವೆ ಮತ್ತಿತರ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಖರ್ಚು ಮಾಡಲೇಬೇಕು. ಮಳೆಗಾಲದಲ್ಲಿ ಗುಡ್ಡದ ಮಣ್ಣು ಕುಸಿದು ರಸ್ತೆ ಸಂಪರ್ಕ ಕಡಿದರೆ
ಕೊಳಂಬೆ ದ್ವೀಪವಾಗುತ್ತದೆ.

ಜನರು  ಹೇಳುವುದೇನು?
*ಅದ್ಯಪಾಡಿಯಿಂದ ಬರುವ ಬಸ್‌ನ್ನು ಬಜಪೆಗೆ ಸೀಮಿತಗೊಳಿಸದೆ ಕೆಂಜಾರು, ಗುರುಪುರ, ಕೈಕಂಬದ ಕಡೆಗೆ ಸಂಪರ್ಕ ಕಲ್ಪಿಸ ಬೇಕು.

*ಬಜಪೆಗೆ ಬೇರೆ ಭಾಗದಿಂದ ಬಂದು ನಿಲ್ಲುವ ಸರಕಾರಿ ಬಸ್ಸನ್ನು ಅದ್ಯಪಾಡಿಗೂ ವಿಸ್ತರಣೆ ಮಾಡಬಹುದು. ಅದ್ಯಪಾಡಿಗೆ ಹೋಗುವ ಬಸ್ಸಿಗೆ ಹತ್ತಲು ಧಾವಂತ. ಬಸ್‌ ಹತ್ತಲು ಆತುರ. ಗಂಡು ಮಕ್ಕಳು ತಡವಾದರೆ ಹೇಗೋ ಲಿಫ್ಟ್ ಕೇಳಿಕೊಂಡು ಬರುತ್ತಾರೆ. ಆದರೆ ಹೆಣ್ಮಕ್ಕಳಿಗೆ ಇದೂ ಕಷ್ಟ. ಹೀಗಾಗಿ ಈ ಭಾಗದ ಕೆಲವರು ಹೆಣ್ಣು ಮಕ್ಳಳನ್ನು ಬಜಪೆಗೆ ಇಲ್ಲವೇ
ಕಾಲೇಜಿನವರೆಗೆ ಬಿಟ್ಟು ಬರಲು ಸಾಲ ಮಾಡಿ ವಾಹನ ಖರೀದಿ ಮಾಡಿದ್ದೂ ಇದೆ.

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next