Advertisement

ಈ ಬಾರಿ ವೈ. ಸತೀಶ್ ಗೆಲುವು ನಿಶ್ಚಿತ: ಸಚಿವ ಆನಂದ್ ಸಿಂಗ್

03:28 PM Nov 25, 2021 | Team Udayavani |

ಕುರುಗೋಡು: ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ. ಸತೀಶ್ ಗೆಲುವುದು ನಿಶ್ಚಿತ ಎಂದು ಗುರುವಾರ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸಹಸ್ರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳೊಂದಿಗೆ ಕುರುಗೋಡಿನ ಎಸ್. ಎಲ್. ವಿ. ಪಂಕ್ಷನ್ ಹಾಲ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿ ಕೆ. ಸಿ. ಕೊಂಡಯ್ಯ ಅವರು ಬರೇ ಜಿಂದಾಲ್, ಕಾರ್ಖಾನೆಗಳು ಅಂತ ಬಿಸಿ ಆಗಿದ್ದಾರೆ ಹೊರತು ಯಾವುದೇ ಗ್ರಾಪಂ ಸದಸ್ಯರಿಗೆ ಅಧಿಕಾರಿಗಳ ಕುಂದು ಕೊರೆತೆಗಳನ್ನು ಆಲಿಸುವಲ್ಲಿ ಮುಂದಾಗಿಲ್ಲ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳು ವೈ. ಸತೀಶ್ ಅವರ ಮೇಲೆ ವಿಶ್ವಾಸವಿಟ್ಟು ಈ ಬಾರಿಯೂ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಗ್ರಾಮ ಪಂಚಾಯಿತಿಗೆ ಅನೇಕ ಯೋಜನೆಗಳು ನೇರವಾಗಿ ತಲುಪಲಿವೆ. ಆರು ವರ್ಷಗಳಿಂದಲೂ ಬಳ್ಳಾರಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸುತ್ತಾಡಿ ಸದಸ್ಯರುಗಳ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಹತ್ತಿರದಿಂದ ಕಂಡಿದ್ದೇವೆ ನಮ್ಮ ಪಕ್ಷದ ಕಾರ್ಯಕರ್ತರೆ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಹೆಚ್ಚಾಗಿರುವುದರಿಂದ ನಮ್ಮ ಬಗ್ಗೆ ಉತ್ತಮ ಒಲವು ಕಂಡು ಬರುತ್ತಿದೆ. ನಾಮನಿರ್ದೇಶನ ಸದಸ್ಯರುಗಳು ಕೂಡ ನಮಗೆ ಬೆಂಬಲವಾಗಿದ್ದಾರೆ ಎಂದರು.

ಇದನ್ನೂ ಓದಿ:ಸೈಕ್ಲೋನ್: ನ 26ರಿಂದ ಮತ್ತೆ ಮಳೆ ; ಸಚಿವ ಆರ್.ಅಶೋಕ್ ಎಚ್ಚರಿಕೆ

ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ. ಸತೀಶ್ ಅವರನ್ನು ಆಶೀರ್ವದಿಸಿ ಗೆಲ್ಲಿಸಿದರೆ ಗ್ರಾಮ ಪಂಚಾಯಿತಿಗಳ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುವುದರ ಜೊತೆಗೆ ದಿನದ 24 ಗಂಟೆಯೂ ಎಲ್ಲರ ಕೈಗೆ ಸುಲಭವಾಗಿ ಸಿಗುವ ವ್ಯಕ್ತಿ ಅವರು ಆದ್ದರಿಂದ ಅವರನ್ನು ಗೆಲ್ಲಿಸಿ ಎಂದು ವಿನಂತಿಸಿದರು.

Advertisement

ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಗ್ರಾಪಂ ಗಳು ಸೇರಿದಂತೆ ಇತರೆ ಇಲಾಖೆ ಯಾವುದು ಅಭಿವೃದ್ಧಿ ಕಂಡಿಲ್ಲ, ಜೊತೆಗೆ ರೈತಪರ ಅಧಿಕಾರ ನಡೆಸಿಲ್ಲ ಆದ್ದರಿಂದ ಸದ್ಯ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ರೈತರಪ, ಕಾರ್ಮಿಕರ ಪರ ಅಧಿಕಾರ ನಡೆಸುವುದರ ಜೊತೆಗೆ ಗ್ರಾಪಂ ಸೇರಿದಂತೆ ಇತರೆ ಇಲಾಖೆಗಳ ಸೌಲಭ್ಯ ಪಡಿಸುವಲ್ಲಿ ಯಶಸ್ವಿಯಾಗಿದೆ ಆದ್ದರಿಂದ ಈ ಬಾರಿ ವಿಧನಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ವೈ. ಸತೀಶ್, ಜಿಲ್ಲಾ ಅಧ್ಯಕ್ಷ ಚನ್ನಬಸವನ ಗೌಡ, ಎಪಿಎಂಸಿ ಸದಸ್ಯ ಸೋಮಶೇಖರ್ ಗೌಡ, ಗುತ್ತಿಗನೂರು ವಿರೂಪಾಕ್ಷ ಗೌಡ, ರಾಮಲಿಂಗಪ್ಪ, ತಿಮ್ಮಾರೆಡ್ಡಿ, ಕೃಷ್ಣ ಮೂರ್ತಿ, ಎಮ್ಮಿಗನೂರು ಮಹೇಶ್ ಗೌಡ,ಆರಳಿ ವಿರೇಶ್, ಅನಿಲ್ ಲಾಡ್, ಎರಿಸ್ವಾಮಿ, ಚಾನಳ್ ಆನಂದ್, ಎಸ್. ಕೆ. ಸುನಿಲ್, ಕೋಮಾರಿ, ನಟರಾಜ್ ಗೌಡ ಸೇರಿದಂತೆ ಪಟ್ಟಣದ ಸುತ್ತ ಮುತ್ತಲಿನ ಗ್ರಾಪಂ ಸದಸ್ಯರು ಹಾಗೂ ಅಧ್ಯಕ್ಷರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next