Advertisement

ಈ ಬಾರಿಯೂ ಸರಳವಾಗಿ ದಸರಾ ಆಚರಣೆ: ಎಸ್‌ಟಿಎಸ್‌

09:07 PM Aug 07, 2021 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯೂ ಸರಳವಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

Advertisement

ಎಚ್‌.ಡಿ.ಕೋಟೆ ತಾಲೂಕಿನ ಬಾವಲಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯಂತೆಯೇ ಈ ಸಲವೂ ಸರಳ ದಸರಾ ಆಚರಿಸಲಾಗುವುದು. ಈ ಸಂಬಂಧ ಮೈಸೂರು ಜಿಲ್ಲಾಡಳಿತ ಸಿದ್ಧಪಡಿಸುವ ರೂಪುರೇಷೆಗಳನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ನೀರಜ್ ಚೋಪ್ರಾ ‘ಚಿನ್ನ’ದ ಸಾಧನೆಗೆ ಅಪ್ಪಟ‌ ಕನ್ನಡಿಗನ ಕೊಡುಗೆ ಕೂಡ ಇದೆ

ಕಳೆದ ಬಾರಿ ದಸರಾ ಉತ್ಸವಕ್ಕೆ ಸರ್ಕಾರ ನೀಡಿದ್ದ 10 ಕೋಟಿ ರೂ. ಪೈಕಿ 7 ಕೋಟಿ ರೂ. ಉಳಿತಾಯ ಮಾಡಲಾಗಿತ್ತು. ಈ ಬಾರಿ ಆ ಹಣವನ್ನೇ ಬಳಸಿಕೊಂಡು ದಸರಾ ಮಹೋತ್ಸವವನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದರು.

ಮುನಿರತ್ನ ಜತೆಗಿನ ಮುನಿಸು ಒಪ್ಪಿಕೊಂಡ ಸಚಿವ
ಕಾಂಗ್ರೆಸ್‌ನಲ್ಲಿದ್ದಾಗ ಎಸ್‌ಬಿಎಂ (ಎಸ್‌.ಟಿ ಸೋಮಶೇಖರ್‌, ಭೈರತಿ ಬಸವರಾಜು ಮತ್ತು ಮುನಿರತ್ನ) ಟೀಂ ಇತ್ತು. ಈಗ ಆ ಟೀಂ ಬಿಜೆಪಿಯಲ್ಲಿಲ್ಲ ಎಂದು ಹೇಳುವ ಮೂಲಕ ಸಚಿವ ಮುನಿರತ್ನ ಜತೆಗಿನ ಸ್ನೇಹ ಮುರಿದಿರುವ ಬಗ್ಗೆ ಬಹಿರಂಗ ಹೇಳಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next