Advertisement

ಈ ಬಾರಿ ಶ್ರೀರಂಗನ ದೊಡ್ಡ ಜಾತ್ರೆ ಅನುಮಾನ

03:17 PM Feb 01, 2018 | Team Udayavani |

ಯಳಂದೂರು: ಪ್ರಪಂಚದಲ್ಲಿಯೇ 6 ವರ್ಗದ ಸಸ್ಯ ವರ್ಗಗಳನ್ನೊಳಗೊಂಡ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ
ತಾಣ ಹಾಗೂ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ಕೆಲ ತಿಂಗಳಲ್ಲೇ ಪೂರ್ಣಗೊಳ್ಳಲಿದೆ.

Advertisement

 ನೂರಾರು ವರ್ಷಗಳ ಹಳೆಯದಾದ ದೇವಾಲಯಗಳು ಶಿಥಿಲಗೊಂಡಿತ್ತು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲು 2.5 ಕೋಟಿ ರೂ ಹಣ ಬಿಡುಗಡೆ ಮಾಡಿತ್ತು.

ಕಳೆದ ಏಪ್ರಿಲ್‌ 2017ರಂದು ಜೀರ್ಣೋದ್ದಾರ ಪ್ರಕ್ರಿಯೆ ಆರಂಭಿಸಲಾಗಿತ್ತು. ಕಳೆದ ವರ್ಷದ ಕೊನೆಯಲ್ಲಿ ಸುರಿಯುತ್ತಿದ್ದ ಮಳೆಯಿಂದ ಸ್ವಲ್ಪ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದನ್ನು ಹೊರತು ಪಡಿಸಿದರೆ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಈಗಾಗಲೇ ಬಿಚ್ಚಿಡಲಾಗಿದ್ದ ಕಲ್ಲಿನ ಕಂಬಗಳು, ಚಪ್ಪಡಿಗಳನ್ನು ಜೋಡಿಸಲಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ.

ಜಾತ್ರೆ ನಡೆಯದೆ ಭಕ್ತರಲ್ಲಿ ನಿರಾಸೆ: ಮೂಡಿಸಿದ್ದ ಜಾತ್ರೆ ಈ ಬಾರಿ ಚಿಕ್ಕ ಜಾತ್ರೆಯಂತೆಯೇ ದೊಡ್ಡ ಜಾತ್ರೆ ನಡೆಯುವುದು ಅನುಮಾನ ದೇವಸ್ಥಾನದ ಜೀರ್ಣೋದ್ಧಾರದಿಂದಾಗಿ ಕಳೆದ ವರ್ಷ ಮೇನಲ್ಲಿ ನಡೆಯಬೇಕಿದ್ದ ದೊಡ್ಡ ಜಾತ್ರೆ ಹಾಗೂ ಈ ವರ್ಷದ ಜನವರಿ ತಿಂಗಳಲ್ಲಿ ನಡೆಯಬೇಕಿದ್ದ ಚಿಕ್ಕಜಾತ್ರೆ ನಿಲ್ಲಿಸಲಾಗಿತ್ತು.

ಇದು ಭಕ್ತರಲ್ಲಿ ನಿರಾಸೆ ಮೂಡಿಸಿತ್ತು. ಈಗ ಮತ್ತೂಮ್ಮೆ ಮುಂದಿನ ಏಪ್ರಿಲ್‌ ಅಥವಾ ಮೇನಲ್ಲಿ ದೊಡ್ಡಜಾತ್ರೆ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಭಕ್ತರಿಗೆ ನಿರಾಸೆ ಮೂಡಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಏಪ್ರಿಲ್‌ ವರೆಗೆ ದೇವಸ್ಥಾನದ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಇದರಿಂದ ಮುಂದಿನ ದೊಡ್ಡಜಾತ್ರೆ ನಡೆಯುವುದೂ ಅನುಮಾನ.

Advertisement

ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿತ್ಯ ಜಿಲ್ಲೆ ಸೇರಿ ಹೊರ ಜಿಲ್ಲೆಗಳು, ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಜೀರ್ಣೋದ್ದಾರ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮೂಲ ದೇವರ ವಿಗ್ರಹಗಳನ್ನು ಸ್ಥಾಪಿಸಿ ದೇವಸ್ಥಾನದ ಹೊರ ಭಾಗದ ಕೊಠಡಿಯಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಬೆಟ್ಟಕ್ಕೆ ಬರುವ ಭಕ್ತರು ಇಲ್ಲೇ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಹೋಗುತ್ತಾರೆ. ಆದರೆ, ಮೂಲ ದೇವರ ದರ್ಶನ, ಪೂಜೆ ಭಾಗ್ಯ ಮಾತ್ರ ಭಕ್ತರಿಗೆ ದೊರೆಯದೇ ನಿರಾಸೆ ಮೂಡಿಸಿದೆ.

ಮುಂದಿನ 2019ರ ವೇಳೆಗೆ ಜೀಣೋದ್ದಾರ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ನಂತರ ದೇವಸ್ಥಾನದಲ್ಲಿ ಚಿಕ್ಕಜಾತ್ರೆ ಹಾಗೂ ದೊಡ್ಡಜಾತ್ರೆ ನಡೆಯಲಿದೆ.
 ರವಿ, ದೇವಾಲಯದ ಪ್ರಧಾನ ಅರ್ಚಕ

ದೇವಾಲಯ ಜೀರ್ಣೋದ್ದಾರ ಸಂತಸದ ವಿಚಾರ. ಗುತ್ತಿಗೆ ಕೈಗೆತ್ತಿಕೊಂಡಿರುವ ಸಂಸ್ಥೆ ಗುಣಮಟ್ಟದ ಕಾಮಗಾರಿ ನಡೆಸಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು.
 ದುಗ್ಗಹಟ್ಟಿ ರಾಜೇಶ್‌, ಲಯನ್ಸ್‌ ಕ್ಲಬ್‌ ಮಾಜಿ ಅಧ್ಯಕ್ಷ 

ಗೂಳಿಪುರ ನಂದೀಶ.ಎಂ.

Advertisement

Udayavani is now on Telegram. Click here to join our channel and stay updated with the latest news.

Next