ರಿಯಾಜ್ ಮಾಡೋರಿಗೆ, ಒಳ್ಳೆಯ ಗುರು ಸಿಕ್ಕಬೇಕ್ರಿ. ಶಾಸನಉಕ್ಕನುಗುಣವಾಗಿ ಅಭ್ಯಾಸಮಾಡಿದ ಗುರು ಸಿಕ್ಕರಂತೂ ಅದು, ಶಿಷ್ಯನ ಸೌಭಾಗ್ಯ. ಅಂಥ ಗುರುವಿನಿಂದ ಮಾರ್ಗದರ್ಶನ ಆದರೆ, ರಿಯಾಜ್ ಹೇಗಿರುತ್ತೆ, ಏನು ಮಾಡಬೇಕು ಅನ್ನೋದು ತಿಳಿದಿರ್ತದ. ರಿಯಾಜ್‌ಗೆ ಕುಂತಾಗ, ತಕ್ಷಣ ಮೂಡ್ ಬರೋದಿಲ್ಲ. ತಂಬೂರ ತಗೊಂಡು, ಅದನ್ನ ಹಚ್ಚಿ, ದನಿ ಕೂಡಿಸಾಕ ಟೈಂ ಆಗ್ತದೆ. ಇದಕ್ಕೆ ಏನೂ ಮಾಡಂಗಿಲ್ಲ.
Advertisement
ಯಾವ ದಾರೀನೂ ಇಲ್ರಿ. ಗಟ್ಟಿ ಮನಸ್ಸೊಂದು ಮಾಡಬೇಕು, ಅಷ್ಟ… ಇದಕ್ಕ ನಲವತ್ತು ನಿಮಿಷ ಹಿಡೀತದ. ಆನಂತರ, ನಿಧಾನಕ್ಕ ಮೂಡು ಹತ್ತತದ. ಅಭ್ಯಾಸ ಮಾಡಬೇಕು ಅನ್ನೋ ಮನಸ್ಸಿದ್ದರೆ ಏನೂ ಆಗಲ್ರಿ. ಇಷ್ಟಾದಮೇಲೂ ಮನಸ್ಸು ಗಡಬಡ ಮಾಡ್ತದೆ, ಚಂಚಲ ಆಗ್ತದೆ. ಸಾಕ್ ಬಿಡು ಅನಿಸ್ತದೆ. ಸ್ವರದ್ದು, ಮನಸ್ಸಿನದ್ದು ಓಡಾಟ ಜಾಸ್ತಿ. ಹೀಗಾಗಿ, ರಿಯಾಜಿಗೆ ಕೂತೋನು, ಅದರವಿರುದಟಛಿ ಹೋರಾಡಿ, ಜಯಶಾಲಿ ಆಗಬೇಕಾಗ್ತದೆ.
* ಪಂಡಿತ್ ವೆಂಕಟೇಶ್ ಕುಮಾರ್ ಹಿರಿಯ ಗಾಯಕರು, ಹಿಂದೂಸ್ತಾನಿ
Related Articles
ಸಂಗೀತ ಕಲಿಯೋಕೂ ಮೊದಲು, ಒಂದು ವಿಚಾರ ತಿಳಿಯಬೇಕು. ಏನಾದರೂ ಸಾಧನೆ ಮಾಡಬೇಕಾದರೆ, ಒಂದಷ್ಟು ತ್ಯಾಗ ಮಾಡಬೇಕು. ಅದರಲ್ಲಿ ಟಿ.ವಿ, ಮೊಬೈಲ…, ನಿದ್ದೆ… ಇವೆಲ್ಲ ಇರುತ್ತವೆ. ಒಂದೇ ದಿವಸ, ಒಂದೇ ಸಲಕ್ಕೆ, ಗಂಟೆಗಟ್ಟಲೆ ಕುಳಿತು ಅಭ್ಯಾಸ ಮಾಡೋಕೆ ಆಗಲ್ಲ. ಹಾಗಾಗಿ, ಬೆಳಗ್ಗೆ ಅರ್ಧಗಂಟೆ, ಸಂಜೆ ಅರ್ಧಗಂಟೆ, ರಾತ್ರಿ ಒಂದುಗಂಟೆ, ಹೀಗೆ… ರೂಢಿಯಾದ ಮೇಲೆ ಗಂಟೆಗಟ್ಟಲೆ ಅಭ್ಯಾಸ ಮಾಡಬಹುದು. ಬೇಸಿಕ್ ಅಂತ ಹೇಳ್ತಾರಲ್ಲ: ತಾರಕ ಸ್ಥಾಯಿ, ಮಂದ್ರ ಸ್ಥಾಯಿ, ಜಂಟಿ ವರಸೆ, ಸರಳೆವರಸೆ, ಸ್ವರ ಜತಿ ಇವುಗಳ ಜೊತೆಗೆ, ಎಲ್ಲ ಅಕಾರಗಳನ್ನು ಮೊದಲುಅಭ್ಯಾಸ ಮಾಡಬೇಕು.
Advertisement
ಸಾ ಇಂದ ನೇರವಾಗಿ ಮೇಲಿನ ಸ್ಥಾಯಿಗೆ ಹೋಗೋದು. ಸರಿಗಮಪದನಿಸ ವನ್ನು ಗಂಟಲಿಗೆ ಹೊಂದಿಸಿ ಕೊಳ್ಳೋದು. ಐದೈದು ಪದದಲ್ಲಿ ಅಕಾರ,ಇಕಾರ, ಉಕಾರ ಅಭ್ಯಾಸ ಮಾಡೋದು, ಹಮ್ ಕಾರ… ಇವೆಲ್ಲಾ ಬಹಳ ಮುಖ್ಯ. ಹಮ್ಮಿಂಗ್ ಅಂತಾರಲ್ಲ, ಅದು ಸರಿಯಾಗಬೇಕು ಅಂದರೆ, ಹಮ್ ಅಭ್ಯಾಸ ಮಾಡಲೇಬೇಕು. ಮೂರು ಕಾಲದಲ್ಲಿ ವರ್ಣಗಳನ್ನು ಅಭ್ಯಾಸ ಮಾಡಬೇಕು. ಆದಾದ ಮೇಲೆ ನಿಧಾನಕ್ಕೆ ಕೀರ್ತನೆ, ದೇವರ ನಾಮ, ತಿಲ್ಲಾನ… ಸಂಗೀತ ಕಲಿಕೆ ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಒಂದು ದಿನ ಮೇಳಕರ್ತ ರಾಗ, ಮತ್ತೂಂದು ದಿನ ಶಂಕರಾಭರಣ. ಹೀಗೆ, ದಿನಕ್ಕೊಂದು ರಾಗಗಳನ್ನು ಅಭ್ಯಾಸ ಮಾಡುವುದರಿಂದ, ಗಂಟಲಲ್ಲಿ ಫೊ ಹಾಗೇ ಇರುತ್ತದೆ. “ಏನ್ರೀ, ಎಷ್ಟು ಚೆನ್ನಾಗಿ ಹಾಡ್ತೀರಾ..’ ಅಂತ ಅನ್ನಿಸಿಕೊಳ್ಳೋಕೂ, ಚಪ್ಪಾಳೆ ಗಿಟ್ಟಿಸಿಕೊಳ್ಳೋಕೂ ಈ ಅಭ್ಯಾಸ ಇರಬೇಕು.* ಪಲ್ಲವಿ ಗುರುಪ್ರಸನ್ನ, ಶಾಸ್ತ್ರೀಯ ಸಂಗೀತಗಾರ್ತಿ ಅಭ್ಯಾಸ ಯೋಗದಂತೆ…
ಸಂಗೀತ ಅನ್ನೋದು ಮಲ್ಟಿ ಟಾಸ್ಕಿಂಗ್ ಇದ್ದಂತೆ. ತಾಳ, ಶೃತಿ, ಸಾಹಿತ್ಯ… ಹೀಗೆ ಒಂದು ಸಲ ಹಾಡಲು ಅಥವಾ ಅಭ್ಯಾಸಮಾಡಲು ಕುಳಿತರೆ, ಇಷ್ಟೂ ಕಡೆ ಗಮನ ಹರಿಸಬೇಕು. ಸಂಗೀತ ಪ್ರಾಣಾಯಾಮ ಇದ್ದಂತೆ. ಮೊದಲು ಓಂಕಾರದಿಂದ ಶುರು ಮಾಡಿ, ವರ್ಣಗಳನ್ನು ಅಭ್ಯಾಸ ಮಾಡಬೇಕು. ಇದರಿಂದ,ಉಸಿರಾಟದ ಮೇಲೆ ನಿಯಂತ್ರಣ ಸಿಗುತ್ತದೆ. ಪ್ರತಿಯೊಬ್ಬರ ಶೃತಿ ಬೇರೆ ಬೇರೆ ಇರುತ್ತೆ. ನಮ್ಮ ಶೃತಿ, ನಮಗೆ ಕಂಫರ್ಟ್ ಜೋನ್ ಯಾವುದು ಅಂತ ಮೊದಲು ತಿಳಿದುಕೊಳ್ಳಬೇಕು. ತುಂಬಾ ಜನ, ಹೈ ಪಿಚ್‌ನಲ್ಲಿ ಹಾಡಿ, ಗಂಟಲು ಕೆಡಿಸಿಕೊಳ್ತಾರೆ. ಒಂದು ರಾಗ ಇಟ್ಕೊಂಡು, ನಮಗೆ ಹೊಂದುವಸ್ಪೀಡ್‌ಗೆ ತಕ್ಕಂತೆ, ಸ್ವರಗಳನ್ನು ಹೇಳಿಕೊಂಡು ಅಭ್ಯಾಸ ಮಾಡುವುದು ಒಳಿತು. ಇದರ ಜೊತೆ, ಅ ಕಾರಗಳನ್ನು ಹೇಳಿಕೊಳ್ಳಬೇಕು.ಚೀಜ್‌ಗಳನ್ನು ಹಾಡ್ಕೊತಾ ಹಾಡ್ಕೊತಾ, ಸ್ಪೀಡ್ ಜಾಸ್ತಿ ಮಾಡ್ತಾ ಮಾಡ್ತಾ ಹೋಗಿ, ಮತ್ತೆ ಓಂಕಾರದಜೊತೆಗೆ ಅಭ್ಯಾಸ ಮುಗಿಸಬೇಕು. ಯೋಗಾಸನದ ಮುಕ್ತಾಯದಲ್ಲಿ ಶವಾಸನ ಹಾಕಿಸ್ತಾರಲ್ಲ. ಹಾಗೇ.
* ಅರ್ಚನಾ ಉಡುಪ, ಹಿರಿಯ ಗಾಯಕಿ