Advertisement
-ಜಿಮ್, ಜಾಗಿಂಗ್, ವ್ಯಾಯಾಮಜಿಮ್, ವ್ಯಾಯಾಮಕ್ಕೆ ಹೋಗುವಾಗ ಮುಖಕ್ಕೆ ಮೇಕಪ್ ಮಾಡದಿದ್ದರೇ ಒಳ್ಳೆಯದು. ಯಾಕಂದ್ರೆ, ವರ್ಕ್‌ಔಟ್ ಮಾಡುವಾಗ ಮುಖ ಬೆವರುತ್ತದೆ. ಮೇಕಪ್ ಮಾಡಿದಾಗ (ಫೌಂಡೇಷನ್ ಕ್ರೀಂ) ಚರ್ಮದ ರಂಧ್ರಗಳು ಮುಚ್ಚಿ ಹೋಗಿ, ಬೆವರು ಸರಾಗವಾಗಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಹಾಗಾದಾಗ, ಮೊಡವೆಗಳು ಏಳುವ ಸಂಭವ ಹೆಚ್ಚು. ಬೇಕಿದ್ದರೆ, ಮಾಯಿಶ್ಚರೈಸರ್ ಕ್ರೀಮ್ ಅನ್ನು ತೆಳುವಾಗಿ ಹಚ್ಚಬಹುದು.
ಈಜುಕೊಳದಲ್ಲಿ ಇಳಿಯುವಾಗ, ಮೇಕಪ್ ಮಾಡಿದರೂ ತೊಂದರೆಯಿಲ್ಲ. ಆದರೆ, ನೀರಿನಿಂದ ಹೊರಗೆ ಬಂದ ತಕ್ಷಣ ಮೇಕಪ್ ಮಾಡಿಕೊಳ್ಳುವುದು ಚರ್ಮಕ್ಕೆ ಹಾನಿಕಾರಕ ಅಂತಾರೆ ಚರ್ಮ ವೈದ್ಯರು. ಕ್ಲೋರಿನ್‌ಯುಕ್ತ ನೀರಿನಲ್ಲಿ ಈಜಾಡಿ ಬಂದ ನಂತರ, ಸ್ವತ್ಛವಾದ ನೀರಿನಿಂದ ಚೆನ್ನಾಗಿ ಮುಖ ತೊಳೆದುಕೊಂಡು, ಅರ್ಧ ಗಂಟೆಯ ನಂತರವೇ ಮೇಕಪ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಕ್ಲೋರಿನ್ ಅಂಶ ಚರ್ಮದಿಂದ ಪೂರ್ತಿಯಾಗಿ ಹೊರ ಹೋಗದಿರಬಹುದು. -ಮೊಡವೆ ಎದ್ದಾಗ
ಮುಖದ ಮೇಲೆ ಮೊಡವೆ ಎದ್ದಾಗ ಮೊದಲು ಮಾಡುವ ಕೆಲಸ, ಮೇಕಪ್‌ನಿಂದ ಅದನ್ನು ಮುಚ್ಚಿ ಹಾಕುವುದು. ಅದು, ತಾತ್ಕಾಲಿಕವಾಗಿ ಸಮಸ್ಯೆಯನ್ನು ಮಟ್ಟ ಹಾಕಿದರೂ, ಚರ್ಮದ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ವೈದ್ಯರ ಪ್ರಕಾರ, ಪದೇ ಪದೆ ಮೊಡವೆ ಮೂಡುತ್ತಿದ್ದರೆ ಮೇಕಪ್‌ನಿಂದ ದೂರ ಉಳಿಯುವುದೇ ಒಳ್ಳೆಯದಂತೆ. ಅದು ಸಾಧ್ಯವಾಗದಿದ್ದರೆ, ಮೊಡವೆ ಎದ್ದಾಗಲಾದರೂ ಕ್ರೀಮು, ಪೌಡರಿಗೆ ನೋ ಅನ್ನಿ.
Related Articles
ಮುಖದ ಮೇಲಿನ ಕೂದಲಿನ ನಿವಾರಣೆಗಾಗಿ ಲೇಸರ್ ಚಿಕಿತ್ಸೆ ಮಾಡಿಸಿದ್ದರೆ ಅಥವಾ ಮಾಡಿಸುವ ಉದ್ದೇಶವಿದ್ದರೆ, ಚಿಕಿತ್ಸೆಗೂ ಮೊದಲು ಮತ್ತು ನಂತರ ಸ್ವಲ್ಪ ದಿನಗಳ ಕಾಲ ಮೇಕಪ್ ಮಾಡಬೇಡಿ. ಲೇಸರ್ ಚಿಕಿತ್ಸೆ ಪರಿಣಾಮಕಾರಿಯಾಗಲು, ಚರ್ಮದ ರಂಧ್ರಗಳೆಲ್ಲ ತೆರೆದುಕೊಂಡಿರಬೇಕು. ಹಾಗಾಗಿ, ಫೌಂಡೇಷನ್‌ನಿಂದ ರಂಧ್ರಗಳನ್ನು ಮುಚ್ಚುವುದು ಸಲ್ಲ. ಹಾಗೆಯೇ, ಚಿಕಿತ್ಸೆಯ ನಂತರ ಚರ್ಮವು ಸೂಕ್ಷ್ಮವಾಗುವುದರಿಂದ ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸಬೇಡಿ.
Advertisement