Advertisement
ತಮ್ಮ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛ ಮೇವ ಜಯತೇ ಹಾಗೂಸ್ವಚ್ಛತಾ ಸೇವಾ ಕಾರ್ಯಕ್ರಮಗಳಿಗೆ ಅರ್ಥ ಬರಬೇಕೆಂದರೆ ಸ್ವತ್ಛತಾ ಕಾರ್ಯ ನಮ್ಮಿಂದಲೇಆರಂಭವಾಗಬೇಕು.
Related Articles
Advertisement
ಪ್ರಭಾರ ಅಪರ ಜಿಲ್ಲಾ ಧಿಕಾರಿ ನಜ್ಮಾ.ಜಿ ಮಾತನಾಡಿ, ಅಕ್ಟೋಬರ್ 2ರಂದು ಬೆಳಿಗ್ಗೆ 9 ಗಂಟೆಗೆ ಮಹಾನಗರ ಪಾಲಿಕೆ ಆವರಣದಲ್ಲಿ ಆರಂಭವಾಗಲಿರುವ ವೇದಿಕೆ ಕಾರ್ಯಕ್ರಮದ ಉಸ್ತುವಾರಿಯನ್ನು ಮಹಾನಗರ ಪಾಲಿಕೆ ಮತ್ತು ವಾರ್ತಾ ಇಲಾಖೆಯವರಿಗೆ ವಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಜಯಂತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಲಾಗುವುದು. ಶಾಮಿಯಾನ, ಕುರ್ಚಿ, ವಿದ್ಯುದೀಪಾಲಂಕಾರ, ಮಹನೀಯರ ಭಾವಚಿತ್ರಗಳಿಗೆ ಹೂವು ಅಲಂಕಾರದ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯವರಿಗೆ ವಹಿಸಿಕೊಡಲಾಗಿದೆ. ನಿರೂಪಣೆ, ಭಜನಾ ಗೀತೆ, ಸರ್ವ ಧರ್ಮ ಪ್ರಾರ್ಥನೆ ಮತ್ತು ಗಾಂಧೀಜಿ ಪ್ರಿಯ ಗೀತೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಜಿಪಂ ಸಿಇಓ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಕುಂಬಾರ್, ಡಿ.ಡಿ.ಪಿ.ಐ ಪರಮೇಶ್ವರಪ್ಪ, ಡಿ.ಎಚ್ .ಓ. ಡಾ| ರಾಘವೇಂದ್ರಸ್ವಾಮಿ, ಇತರರು ಸಭೆಯಲ್ಲಿದ್ದರು.
ಪ್ಲಾಸ್ಟಿಕ್ ಫ್ಲೆಕ್ಸ್ ಹಾಕಿದಲ್ಲಿ ನಿರ್ದಾಕ್ಷಿಣ್ಯ ಕ್ರಮ: ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಿದ್ದು ನಗರದ ತುಂಬೆಲ್ಲಾ ಫ್ಲೆಕ್ಸ್ ಜಾಹೀರಾತುಗಳು ಗೋಚರಿಸುತ್ತಿವೆ. ನಗರಪಾಲಿಕೆಯವರು ಈ ಕುರಿತು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಬ್ಯಾನರ್‌ಗಳನ್ನು ಬಟ್ಟೆಯಲ್ಲಿಯೇ ಮುದ್ರಿಸಬೇಕು. ಮುಂದಿನ ದಿನಗಳಲ್ಲಿ ಈ ಪ್ಲೆಕ್ ಗಳು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಪ್ಲಾಸ್ಟಿಕ್ ಬಳಕೆಗೆ ಅನುವು ಮಾಡಿಕೊಟ್ಟಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾ ಧೀಕರಣದ ಆದೇಶ ಉಲ್ಲಂಘಿ ಸಿದಂತಾಗಲಿದೆ. ಹಾಗಾಗಿ ಪ್ಲಾಸ್ಟಿಕ್‌ನಿಂದ ಮುದ್ರಿಸಿರುವ ಫ್ಲೆಕ್ಸ್ ಹಾಕುವುದು ಬೇಡ. -ಮಹಾಂತೇಶ ಜಿ. ಬೀಳಗಿ, ಜಿಲ್ಲಾಧಿಕಾರಿ