Advertisement

ದಸರಾ ಮೆರವಣಿಗೆಯಲ್ಲಿ ಈ ಬಾರಿ 42 ಸ್ತಬ್ಧಚಿತ್ರಗಳು

07:40 AM Sep 07, 2017 | Team Udayavani |

ಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ 42 ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ ಎಂದು ದಸರಾ ಉಪ ವಿಶೇಷಾಧಿಕಾರಿ ಜಿಪಂ ಸಿಇಒ ಪಿ.ಶಿವಶಂಕರ್‌ ತಿಳಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಸ್ತಬ್ಧಚಿತ್ರ ಉಪ ಸಮಿತಿಯ ರಾಜ್ಯಮಟ್ಟದ ನೋಡಲ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 35 ಸ್ತಬ್ಧ ಚಿತ್ರ ಗಳನ್ನು ಅಂತಿಮಗೊಳಿಸಲಾಗಿದ್ದು, 30 ಜಿಲ್ಲಾ ಪಂಚಾಯ್ತಿಗಳಿಂದ ತಲಾ ಒಂದೊಂದು ಸ್ತಬ್ಧ ಚಿತ್ರಗಳು, ರಾಜ್ಯ ವಲಯದಿಂದ ಕೌಶಲ್ಯ ಕರ್ನಾಟಕ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಿಂದ ತಲಾ ಒಂದೊಂದು ಸ್ತಬ್ಧ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು. 

ದಸರೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳು ಕಲೆ, ವಾಸ್ತುಶಿಲ್ಪ, ಸಂಸ್ಕೃತಿ,ಪರಿಸರ, ಅರಣ್ಯೀಕರಣ, ಅಂತರ್ಜಲ, ಪರಿಸರ ಸ್ನೇಹಿ ಸ್ತಬ್ಧಚಿತ್ರಗಳಾಗಿದ್ದು ಪ್ರವಾಸೋದ್ಯಮ ಹಾಗೂ ಸರ್ಕಾರದ ಕಾರ್ಯಕ್ರಮಗಳು ವಿಶೇಷ ಸಾಧನೆ ಕುರಿತ ಸ್ತಬ್ಧಚಿತ್ರಗಳು, ಸಂವಿಧಾನ, ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತ ಸ್ತಬಟಛಿಚಿತ್ರಗಳು ಮೂಡಿ ಬರಲಿವೆ ಎಂದ ಅವರು ಸೆ.11 ರಿಂದ ಬಂಡೀಪಾಳ್ಯದ ಎಪಿಎಂಸಿ ಆವರಣದಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕೆಲಸ ಪ್ರಾರಂಭಿಸಲಾಗುತ್ತಿದೆ. ಸೆ.25 ರಂದು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಸ್ತಬ್ಧಚಿತ್ರಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಗುವುದು. 28 ರಂದು ಸ್ತಬ್ಧಚಿತ್ರಗಳ ಪೂರ್ವ ಮೆರವಣಿಗೆ ನಡೆಸಲಾಗುವುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next