Advertisement
ಪ್ರಧಾನಿ ಮೋದಿ ಅವರು ಬೆಳಗಾವಿ ನಗರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಸಿ ಮಾತನಾಡಿದರು.
Related Articles
Advertisement
”ಕೃಷಿಯೇ ಇರಲಿ, ಕೈಗಾರಿಕೆಯೇ ಇರಲಿ, ಪ್ರವಾಸೋದ್ಯಮವೇ ಇರಲಿ, ಉತ್ತಮ ಶಿಕ್ಷಣವಿರಲಿ ಅಥವಾ ಉತ್ತಮ ಆರೋಗ್ಯವಾಗಿರಲಿ… ಇವೆಲ್ಲವೂ ಉತ್ತಮ ಸಂಪರ್ಕದಿಂದ ಮತ್ತಷ್ಟು ಸಶಕ್ತವಾಗಿವೆ. ಅದಕ್ಕಾಗಿಯೇ ಕಳೆದ ವರ್ಷಗಳಿಂದ ನಾವು ಕರ್ನಾಟಕದ ಸಂಪರ್ಕದ ಬಗ್ಗೆ ಹೆಚ್ಚು ಗಮನಹರಿಸಿದ್ದೇವೆ. ಪ್ರಸ್ತುತ ಕರ್ನಾಟಕದಲ್ಲಿ 45 ಸಾವಿರ ಕೋಟಿ ರೂ.ಗಳ ರೈಲ್ವೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ” ಎಂದರು.
”ಕರ್ನಾಟಕ ಯಾವಾಗಲೂ ಸಿರಿ ಧಾನ್ಯದ ಕೇಂದ್ರವಾಗಿದ್ದು, ಈ ವರ್ಷದ ಬಜೆಟ್‌ನಲ್ಲಿ ಅದಕ್ಕೆ ಹೊಸ ಗುರುತನ್ನು ನೀಡಿದ್ದೇವೆ. ಸಿರಿ ಧಾನ್ಯ ಬೆಳೆಯಲು ತಗಲುವ ವೆಚ್ಚ ಕಡಿಮೆ, ನೀರಾವರಿಗೆ ಬೇಕಾಗುವ ನೀರು ಕೂಡ ಕಡಿಮೆಯಾಗಿದ್ದು ಸಣ್ಣ ರೈತರಿಗೆ ಅನುಕೂಲವಾಗಲಿದೆ. ಸಿರಿ ಧಾನ್ಯಪ್ರತಿ ಋತುವಿನಲ್ಲಿ, ಪ್ರತಿ ಸ್ಥಿತಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಹೆಚ್ಚು ಪೌಷ್ಟಿಕವಾಗಿದೆ.ಅದಕ್ಕಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಸಿರಿ ಧಾನ್ಯಗಳಿಗೆ ಶ್ರೀ-ಅನ್ನ ಎಂದು ಹೊಸ ಗುರುತನ್ನು ನೀಡಿದ್ದೇವೆ.ದೇಶದ ಕೃಷಿಯಲ್ಲಿ ಭವಿಷ್ಯದ ಸವಾಲುಗಳನ್ನು ನೋಡಿದಾಗ, ನಾವು ಅದಕ್ಕೆ ಜೀವ ತುಂಬಲು ನಿರ್ಧರಿಸಿದ್ದೇವೆ” ಎಂದರು. ”2014 ರಲ್ಲಿ, ಕೃಷಿಗಾಗಿ ಭಾರತದ ಬಜೆಟ್ 25,000 ಕೋಟಿ ರೂ. ಈ ವರ್ಷದ ಬಜೆಟ್‌ನಲ್ಲಿ 1.25 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದೇವೆ” ಎಂದರು. ”ನಾವು ಮಧ್ಯವರ್ತಿಗಳಿಲ್ಲದೆ ನೇರವಾಗಿ ಇಲ್ಲಿಂದ ದೇಶಾದ್ಯಂತ ರೈತರಿಗೆ 16,000 ಕೋಟಿ ರೂ.ಖಾತೆಗಳಿಗೆ ಹಾಕಿದ್ದೇವೆ. ಇಷ್ಟು ದೊಡ್ಡ ಮೊತ್ತವನ್ನು ಕ್ಷಣಾರ್ಧದಲ್ಲಿ ವರ್ಗಾವಣೆ ಮಾಡಿದ್ದು, ಮಧ್ಯವರ್ತಿ ಇಲ್ಲ, ಕಮಿಷನ್ ಇಲ್ಲ, ಭ್ರಷ್ಟಾಚಾರ ಇಲ್ಲ… ಕಾಂಗ್ರೆಸ್ ಆಳ್ವಿಕೆ ಇದ್ದಿದ್ದರೆ 16,000 ಕೋಟಿ.ರೂ.ಗಳಲ್ಲಿ 12-13 ಸಾವಿರ ಕೋಟಿ ರೂಪಾಯಿ ಎಲ್ಲೋ ಮಾಯವಾಗುತ್ತಿತ್ತು… ಆದರೆ ನಮ್ಮ ಸರಕಾರ ಕೊಡುವ ಪ್ರತಿ ಪೈಸೆಯೂ ನಿಮ್ಮದೇ… ಅದು ನಿಮಗಾಗಿ” ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ನರೇಂದ್ರಸಿಂಗ್ ಥೋಮರ್, ಶೋಭಾ ಕರಂದ್ಲಾಜೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ.