Advertisement

ಬಟ್ಟೆ ಮಡಚಿಡುತ್ತೆ ಈ ರೋಬೊ

11:13 AM Jan 14, 2018 | Team Udayavani |

ಕ್ಯಾಲಿಫೋರ್ನಿಯಾ: ಬಟ್ಟೆ ಮಡಚಿ ಅದರ ಜಾಗದಲ್ಲಿ ಇರಿಸುವುದು ಬಹುತೇಕರಿಗೆ ತೀರಾ ಕಿರಿಕಿರಿಯೆನಿಸುವ ಕೆಲಸ. ಒಗೆದ ಬಟ್ಟೆಗಳನ್ನು ಹಾಗೇ ಒಂದು ಕಡೆ ಗುಡ್ಡೆ ಹಾಕಿ ಬಿಡುವವರೇ ಹೆಚ್ಚು. ಜನರ ಈ ಸಂಕಷ್ಟವನ್ನು ಅರಿತ ಕ್ಯಾಲಿಫೋರ್ನಿಯಾ ಮೂಲದ ರೊಬೋ ತಯಾರಿಸುವ ಸ್ಟಾರ್ಟ್‌ ಅಪ್‌ ಸಂಸ್ಥೆಯೊಂದು ಇದೀಗ ಫೋಲ್ಡಿಮೇಟ್‌ ಎಂಬ  ರೋಬೊವನ್ನು ಅಭಿವೃದ್ಧಿಪಡಿಸಿದೆ. ಈ ರೋಬೊ ನಿಮ್ಮ ಬಟ್ಟೆಗಳನ್ನು ನಿಮಗಿಂತ ನೀಟಾಗಿ ಮತ್ತು ವೇಗವಾಗಿ ಮಡಚಲಿದೆಯಂತೆ. ಇದರ ಬೆಲೆ 1000 ಡಾಲರ್‌ (63,613 ರೂ.) ಇರಲಿದೆ ಎಂದು ಕಂಪೆನಿ ಹೇಳಿದೆ. 

Advertisement

ಈ ರೋಬೋ 2019ರಲ್ಲಿ ಮಾರುಕಟ್ಟೆಗೆ ಬರಲಿದೆ. ಇದರ ಪ್ರಾಯೋಗಿಕ ಪ್ರದರ್ಶ ನವನ್ನು ಕಳೆದ ವಾರ ಲಾಸ್‌ ವೇಗಾಸ್‌ನಲ್ಲಿ ನಡೆಸಲಾಗಿತ್ತು. ಫೋಲ್ಡಿಮೇಟ್‌ ರೋಬೋ ಶರ್ಟ್‌, ರವಿಕೆ, ಪ್ಯಾಂಟ್‌, ಮಕ್ಕಳ ಬಟ್ಟೆಗಳು, ಟವೆಲ್‌, ದಿಂಬಿನ ಕವರ್‌ಗಳು, ಬೆಡ್‌ಶೀಟ್‌ನಿಂದ ಹಿಡಿದು ವಯಸ್ಕರ ಡಬಲ್‌ ಎಕ್ಸ್‌ಎಲ್‌ ಅಳತೆಯ ಬಟ್ಟೆಗಳವರೆಗೆ ಎಲ್ಲ ಬಟ್ಟೆಗಳನ್ನು ಮಡಚುವ ಸಾಮರ್ಥ್ಯ ಹೊಂದಿದೆ. 2ರಿಂದ 3 ನಿಮಿಷಗಳ ಅವಧಿಯಲ್ಲಿ ಇದು 20ರಿಂದ 40 ಬಟ್ಟೆಗಳನ್ನು ಒಪ್ಪವಾಗಿ ಮಡಚಲಿದೆ. ಆದರೆ ಒಳಉಡುಪಿ ನಂಥ ತೀರಾ ಚಿಕ್ಕ ಬಟ್ಟೆಯನ್ನು ಇದು ಮಡಚಲ್ಲ ಎಂದು ಕಂಪೆನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next