Advertisement

ನನ್ನ ರಾಜಕೀಯ ಜೀವನ ಮುಗಿಯಿತು ಎಂದವರಿಗೆ ಈ ಫಲಿತಾಂಶ ಪಾಠ ಕಲಿಸಿದೆ: ಶರದ್ ಪವಾರ್

09:46 AM Oct 26, 2019 | Team Udayavani |

ಮುಂಬೈ: ಗುರುವಾರ ಹೊರಬಿದ್ದ ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ. ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ( ಎನ್ ಸಿಪಿ) 62 ಸ್ಥಾನಗಳನ್ನು ಗೆದ್ದುಕೊಂಡಿದೆ. 220 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದ್ದ ಬಿಜೆಪಿ ಶಿವಸೇನೆ ಮೈತ್ರಿ 162 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಅಚ್ಚರಿ ಎಂಬಂತೆ ಶರದ್ ಪವಾರ್ ಮತ್ತೆ ರಾಜಕೀಯ ಲಯಕ್ಕೆ ಬಂದಿದ್ದು, ಮುಂದಿನ ರಾಜಕೀಯ ಚಟುವಟಿಕೆಗಳ ಕುತೂಹಲ ಹೆಚ್ಚಿಸಿದೆ.

Advertisement

ಫಲಿತಾಂಶದ ನಂತರ ಮಾತನಾಡಿದ ಶರದ್ ಪವಾರ್, ನನ್ನ ರಾಜಕೀಯ ಜೀವನ ಮುಗಿಯಿತು ಎಂದುಕೊಂಡವರಿಗೆ ಈ ಚುನಾವಣಾ ಫಲಿತಾಂಶ ಸರಿಯಾದ ಪಾಠ ಕಲಿಸಿದೆ ಎಂದು ಹೇಳಿದ್ದಾರೆ.

ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಿದವರಿಗೆ ಜನರೆ ಸರಿಯಾದ ಉತ್ತರ ನೀಡಿದ್ದಾರೆ. ಈ ಚುನಾವಣೆಯೊಂದಿಗೆ ನನ್ನ ರಾಜಕೀಯ ಜೀವನ ಅಂತ್ಯವಾಯಿತು ಎಂದವರಿಗೆ ಜನರೆ ಬುದ್ದಿ ಕಲಿಸಿದ್ದಾರೆ ಎಂದು ಎನ್ ಸಿಪಿ ಮುಖಂಡ ಹೇಳಿದ್ದಾರೆ.

ಜನರು ಬಿಜೆಪಿ- ಶಿವಸೇನೆಯ 220 ಸೀಟ್ ಗೆಲ್ಲುವ ಕನಸಿಗೆ ತಣ್ಣೀರು ಎರಚಿದ್ದಾರೆ. ಅಧಿಕಾರದ ದುರಹಂಕಾರ ಜನರಿಗೆ ಇಷ್ಟವಾಗಿಲ್ಲ ಎಂದು ಕೇಸರಿ ಮೈತ್ರಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ- ಶಿವಸೇನೆ ಮೈತ್ರಿ 162 ಸ್ಥಾನ ಗೆದ್ದು ಬಹುಮತ ಪಡೆದಿದ್ದರೆ, ಕಾಂಗ್ರೆಸ್ -ಎನ್ ಸಿಪಿ ಮೈತ್ರಿ 104 ಸ್ಥಾನ ಗೆದ್ದುಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next