Advertisement

ಪೌರತ್ವ ತಿದ್ದುಪಡಿ ಕಾಯ್ದೆ ಬೇಡ: ವೈರಲ್ ಆಯ್ತು ಯುವಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್

10:02 AM Dec 23, 2019 | Team Udayavani |

ಕೇರಳ: ಇತ್ತೀಚಿಗೆ ಕೆಸರಲ್ಲಿ, ಮರದಲ್ಲಿ ವಿಭಿನ್ನ ಮಾದರಿಯ ಪ್ರಿ-ವೆಡ್ಡಿಂಗ್ ಶೂಟ್ ಮಾಡಿರುವುದನ್ನು ಕೇಳಿರುತ್ತೀರಾ ಮತ್ತು ನೋಡಿರುತ್ತೀರಿ ! ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ಯನ್ನು ವಿರೋಧಿಸಿ ಕೇರಳದ ಯುವ ಜೋಡಿಯೊಂದು ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Advertisement

ಹೌದು. ಪೌರತ್ವ ತಿದ್ದುಪಡಿ ಕಾಯ್ದೆ ಬೇಡ ಮತ್ತು ಎನ್ ಆರ್ ಸಿ ಬೇಡ ಎಂಬ ಫಲಕಗಳನ್ನು ಹಿಡಿದು ಫೋಟೋಶೂಟ್ ಮಾಡಿಸಿ ವಿಭಿನ್ನವಾಗಿ ಮತ್ತು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಡಿಸೆಂರ್ 18 ರಂದು ಅರುಣ್ ಗೋಪಿ ಮತ್ತು ಆಶಾ ಶೇಖರ್ ಎಂಬ ಯುವಜೋಡಿ  ತಮ್ಮ ಫೆಸ್ ಬುಕ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೋಂಡಿದ್ದರು. ಕೂಡಲೇ ಇದು  ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಕರಾತ್ಮಕ ಮತ್ತು ನಕರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದೆ.

ಈ ಚಿತ್ರಗಳನ್ನು ಪೊನ್ನುಮುಡಿ ಬೆಟ್ಟದಲ್ಲಿ ತೆಗೆಯಲಾಗಿದೆ.

ತಿರುವನಂತಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಮಂಡಳಿಯ ಖಜಾಂಚಿಯಾಗಿರುವ ಅರುಣ್ , ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಅಧೀನದಲ್ಲಿರುವ ಮಕ್ಕಳ ಸಂಸ್ಥೆ ಬಾಲಸಂಘಂನ ರಾಜ್ಯಾಧ್ಯಕ್ಷರಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next