Advertisement

ಇದೊಂದು “ವಿನ್ನರ್‌’ಅಧಿವೇಶನ: ಪ್ರಧಾನಿ

06:32 AM Apr 12, 2017 | Team Udayavani |

ಹೊಸದಿಲ್ಲಿ: ಹಲವು ವಿಷಯಗಳಿಗೆ ಸಂಬಂಧಿಸಿ ಸಂಸತ್ತಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಗಣನೆಗೆ ತೆಗೆದು ಕೊಳ್ಳದೆ ಪ್ರಧಾನಿ ಮೋದಿ, “ಜಿಎಸ್‌ಟಿ ಸೇರಿ ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿ ರುವ ಈ ಬಾರಿಯ ಬಜೆಟ್‌ ಅಧಿವೇಶನ, ಸರಕಾರದ ಪಾಲಿನ “ವಿನ್ನರ್‌’ ಅಧಿವೇಶನ,’ ಎಂದು ವ್ಯಾಖ್ಯಾನಿಸಿದ್ದಾರೆ. 

Advertisement

ಸಂಸತ್‌ ಅಧಿವೇಶನ ಕೊನೆಗೊಳ್ಳುವ ಮುನ್ನಾದಿನವಾದ ಮಂಗಳವಾರ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿನ ಬಿಜೆಪಿ ಗೆಲುವನ್ನು, “ಬಡವರ ಪರ ಯೋಜನೆಗಳ ಕುರಿತು ಸರಕಾರ ತೋರಿದ ಬದ್ಧತೆಗೆ ಸಿಕ್ಕಿದ ಜನಮನ್ನಣೆ,’ ಎಂದು ಬಣ್ಣಿಸಿದ್ದಾರೆ. “ಬರುವ ತಿಂಗಳು ಸರಕಾರ 3 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ದೇಶದ ಜನರಿಂದ ದೊರೆತಿರುವ ಈ ಸಕಾರಾತ್ಮಕ ಸ್ಪಂದನೆ, ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನಕಾರಿಯಾಗಿದೆ. ಎಲ್ಲ ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯವನ್ನು ಸಚಿವರು ಮಾಡಬೇಕು. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next