Advertisement

ದೇವಿ ದರ್ಶನ ಪಡೆದ ಯದುವೀರ್‌, ಈಶರಪ್ಪ.

12:28 PM Nov 01, 2021 | Team Udayavani |

ಹಾಸನ: ಮೈಸೂರು ರಾಜ ವಂಶಸ್ಥ ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರು ಭಾನುವಾರ ಹಾಸನಾಂಬೆಯ ದರ್ಶನ ಪಡೆದರು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜವಂಶಸ್ಥರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಯದುವೀರ್‌ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರು ಹಾಸನಾಂಬೆ ದರ್ಶನಕ್ಕೆ ಬರುವ ಮಾಹಿತಿ ಇರಲಿಲ್ಲ.

Advertisement

ದೇವಾಲಯದ ದರ್ಶನಕ್ಕೆ ಬಂದು ದೇವಿಯ ದರ್ಶನ ಪಡೆದು ವಾಪಸಾಗುವ ವೇಳೆಗೆ ಒಡೆಯರ್‌ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಎದುರಾಗಿ ಮಾತನಾಡಿದರು. ರಾಜ್ಯದ ಪ್ರಸಿದ್ಧ ಹಾಗೂ ಶಕ್ತಿ ದೇವತೆಗಳ ಪೈಕಿ ಹಾಸನಾಂಬೆಯೂ ಒಂದು. ದೇವಿಯ ದರ್ಶನ ಪಡೆದದ್ದು ಸಂತಸ ತಂದಿದೆ. ದೇವಿಯ ಆಶೀರ್ವಾದ ನಾಡಿನ ಜನರ ಮೇಲಿರಲಿ. ಮೈಸೂರು ರಾಜವಂಶಸ್ಥರಿಗೂ ದೇವಿಯ ಆಶೀರ್ವಾದ ಇರಲಿ.

ಇದನ್ನೂ ಓದಿ:- ಭಾರತ ತಂಡದ ಸೆಮಿ ಪ್ರವೇಶ ಪವಾಡವಲ್ಲದೆ ಬೇರೇನೂ ಅಲ್ಲ:ಟ್ರೋಲ್ ಮಾಡಿದ ಅಫ್ರಿದಿ

ಕೊರೊನಾ ನಿರ್ಮೂಲನೆಯಾಗಿ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೂ ಭಾನುವಾರ ಸಂಜೆ ಹಾಸನಾಂಬೆಯ ದರ್ಶನ ಪಡೆದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಹಾಸನ ಮಾರ್ಗವಾಗಿ ಸಾಗುತ್ತಿದ್ದ ಗೃಹ ಸಚಿವರು ಹಾಸನಾಂಬೆಯ ದೇಗುಲಕ್ಕೆ ಭೇಟಿ ನೀಡಿದ ನಂತರ ಚಿಕ್ಕಮಗಳೂರಿನತ್ತ ಪಯಣ ಬೆಳೆಸಿದರು.

Advertisement

ಬಿಜೆಪಿ ಪರ ಫ‌ಲಿತಾಂಶ..

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಭಾನುವಾರ ಹಾಸನಾಂಬೆಯ ದರ್ಶನ ಪಡೆದರು. ಹಾಸನಾಂಬೆಯ ದರ್ಶನ ಪಡೆದ ನಂತರ ಮಾತನಾಡಿದ ಈಶ್ವರಪ್ಪ ಅವರು, ಉಪಚುನಾವಣೆಗಳ ಫ‌ಲಿತಾಂಶ ಬಿಜೆಪಿ ಪರವಾಗಿರಲಿದೆ. ಮೂರು ಅಂಶಗಳ ಮೂಲಕ ಚುನಾವಣೆ ಮಾಡಿದ್ದೇವೆ. ಬೂತ್‌ ಮಟ್ಟದಿಂದ ಕಾರ್ಯಕರ್ತರ ಸಂಘಟನೆ ಬಲವಾಗಿದೆ.

ಎರಡನೆಯದು ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಬಸವರಾಜ ಬೊಮ್ಮಯಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ಮೂರನೆಯದು ನಾಯಕತ್ವ ಕಾಂಗ್ರೆಸ್‌ ನಲ್ಲಿ ನಾಯಕ ಯಾರ್ಯಾರು ಅಂಥಾ ಕೇಳುವ ಸ್ಥಿತಿ ಎದುರಾಗಿದೆ, ಅವರಲ್ಲೆ ಗೊಂದಲಗಳಿವೆ. ಇಡೀ ವಿಶ್ವವೇ ಮೆಚ್ಚಿರುವ ಮೋದಿಯವರ ನಾಯಕತ್ವ ಈ ಮೂರು ಅಂಶಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಿವೆ ಎಂದರು. ಬಿಜೆಪಿಯಲ್ಲಿ ಗುಂಪುಗಾರಿಕೆಯ ಪ್ರಶ್ನೆಯೇ ಇಲ್ಲ . ಅದರಿಂದ ಎಲ್ಲಾ ಚುನಾವಣೆಯನ್ನು ಬಿಜೆಪಿ ಗೆಲ್ಲುತ್ತಾ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next