Advertisement
ಕ್ರಿಪ್ಟೋ ಕರೆನ್ಸಿ ಎಂದರೇನು?– ಅತ್ಯಂತ ಸರಳವಾಗಿ ಹೇಳುವುದಿದ್ದರೆ ಇದೊಂದು ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾದದ್ದು. ವಿನಿಮಯಕ್ಕಾಗಿ ಬಳಕೆ ಮಾಡುತ್ತಾರೆ.
– ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ವಹಿವಾಟನ್ನು ಕ್ರಿಪ್ಟೋಗ್ರಫಿ ಮೂಲಕ ರಕ್ಷಿಸಲಾಗುತ್ತದೆ. ಹೀಗೆಂದರೆ ಸಂಕೇತಗಳ ಮೂಲಕ ಮಾಹಿತಿ ಮತ್ತು ವ್ಯವಹಾರದ ವಿವರಗಳನ್ನು ರಕ್ಷಿಸಿ ಇರಿಸಿಕೊಳ್ಳುವುದು.
– ಹೀಗಾಗಿ ಕ್ರಿಪ್ಟ್ (Crypt) ಎಂದರೆ ಅಡಗಿಸಿದ, ಗ್ರಫಿ (Graphy)ಎಂದರೆ ಬರೆಯುವುದು ಎಂಬ ಅರ್ಥ.
ಬಿಟ್ ಕಾಯಿನ್ ಅಥವಾ ವರ್ಚುವಲ್ ಕರೆನ್ಸಿಯಿಂದ ಹಾಲಿ ಬ್ಯಾಂಕಿಂಗ್ ವ್ಯವಸ್ಥೆಗೆ ಧಕ್ಕೆಯಾದ ಉದಾಹರಣೆ ಇಲ್ಲ
ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಣ ವ್ಯವಸೆœ ಹೊಂದಿದೆ. ಆದರೆ ಅದು ಪರಮಾಧಿಕಾರವಲ್ಲ.
ಆರ್‌ಬಿಐ ತನ್ನ ಸುತ್ತೋಲೆಯಲ್ಲಿ ವರ್ಚುವಲ್ ಕರೆನ್ಸಿಗಳನ್ನು ನಿಷೇಧ ಮಾಡುವ ಬಗ್ಗೆ ಉÇÉೇಖ ಮಾಡಿಲ್ಲ
ಕೇಂದ್ರ ಸರ್ಕಾರ ಕೂಡ ವಿಧೇಯಕ ರಚನೆ, ಹಲವು ಸಮಿತಿಗಳ ಶಿಫಾರಸಿನ ಬಳಿಕವೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಸೂಕ್ತ ನಿಲುವು ಪ್ರಕಟಿಸಲು ಸಾಧ್ಯವಾಗಿಲ್ಲ.
ಸುತ್ತೋಲೆಯಿಂದಾಗಿ ವರ್ಚುವಲ್ ಕರೆನ್ಸಿ ಎಕ್ಸ್‌ಚೇಂಜ್‌ಗಳನ್ನು ಕೋಮಾ ಸ್ಥಿತಿಗೆ ತಳ್ಳಿದಂತಾಗಿದೆ. ತೀರ್ಪಿನ ನಂತರ ಮುಂದೆ ಏನಾಗಬಹುದು?
ಆರ್‌ಬಿಐ ಸುತ್ತೋಲೆ ಬಳಿಕ ಸ್ಥಗಿತಗೊಂಡಿದ್ದ ಬಿಟ್ ಕಾಯಿನ್ ಅಥವಾ ವರ್ಚುವಲ್ ಕರೆನ್ಸಿಗಳ ವಹಿವಾಟು ಪುಟಿದೇಳಬಹುದು
ಆದರೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಇಲ್ಲದೇ ಹೋದಲ್ಲಿ ನಿರೀಕ್ಷಿತ ಮಟ್ಟದ ಚೇತರಿಕೆ ಕಷ್ಟ
ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ¨ªಾಗಲೂ, ಈ ಹಿಂದೆ ಪ್ರೋತ್ಸಾಹದಾಯಕ ವಾತಾವರಣ ಇರಲಿಲ್ಲ
ಸರ್ಕಾರದಿಂದ ನಿರೀಕ್ಷಿತ ಬೆಂಬಲ ಸಿಗದೇ ಇದ್ದರೆ, ಬ್ಯಾಂಕ್‌ಗಳು ಮತ್ತು ಇತರ ವಿತ್ತೀಯ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಹೂಡಿಕೆಗೆ ಮನಸ್ಸು ಮಾಡಲಾರವು.
2018ರ ಸುತ್ತೋಲೆ ಆಂಶಿಕವಾಗಿದೆ.
Related Articles
ಬಿಟ್ ಕಾಯಿನ್ 6,74, 539
ಈಥ್ರಿಯಂ 17, 419
ಎಕ್ಸ್ ಆರ್ ಪಿ 17.86
ಬಿಟ್ ಕಾಯಿನ್ ಕ್ಯಾಶ್ 25, 691
ಬಿಟ್ ಕಾಯಿನ್ ಎಸ್.ವಿ. 18, 200
ಟೆದರ್ 74.20
Advertisement
1,600 ಇಷ್ಟಕ್ಕೂ ಅಧಿಕ ಕರೆನ್ಸಿಗಳು10 ಸಾವಿರ ಅಮೆರಿಕನ್ ಡಾಲರ್- 2019ರ ಅಕ್ಟೋಬರ್‌ನಲ್ಲಿ ಕಾಯಿನ್ ತಲುಪಿದ್ದ ಗರಿಷ್ಠ ಮೌಲ್ಯ.
ಬಿಟ್ ಕಾಯಿನ್‌ಗೆ ಜಪಾನ್ ಅನುಮತಿ ನೀಡಿದೆ. ಅಲ್ಲಿ ಬಿಟ್ ಕಾಯಿನ್
ಎಕ್ಸ್ ಚೇಂಜ್‌ಗಳು ಇವೆ. ವಿರುದ್ಧ ವಾದವೇನು?
ಭಾರತದ ಅಂತರ್ಜಾಲ ಮತ್ತು ಮೊಬೈಲ್ ಸಂಸ್ಥೆ (ಐಎಎಂಎಐ) 2018ರ ಸುತ್ತೋಲೆ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿತ್ತು. ಅದು ಮುಂದಿಟ್ಟಿದ್ದ ಅಂಶಗಳು
ಕ್ರಿಪ್ಟೋ ಕರೆನ್ಸಿ ಎನ್ನುವುದು ನೇರವಾದ ಕರೆನ್ಸಿ ಅಲ್ಲ. ಅದೊಂದು ವಸ್ತುವಿನ ರೀತಿಯಲ್ಲಿರುವ ವ್ಯವಸ್ಥೆ. ಬ್ಲಾಕ್ ಚೈನ್ ಎಂದರೇನು?
ಇದೊಂದು ರೀತಿಯಲ್ಲಿ ಓಪನ್ ಲೆಡ್ಜರ್ ಇದ್ದಂತೆ. ವಹಿವಾಟು ನಡೆಯುತ್ತಿರುವಂತೆಯೇ ಮಾಹಿತಿ ಅಪ್‌ಡೇಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಹಾಕಿದ ಮಾಹಿತಿಯನ್ನು ಮತ್ತೆ ಬದಲು ಮಾಡಲು ಸಾಧ್ಯವಾಗದು. ಪ್ರತಿ ಬಾರಿಯೂ ಹೊಸ ವಹಿವಾಟು ಮಾಡಿದ ನಂತರ ಹೊಸ ಬ್ಲಾಕ್‌ಗಳು ಸೇರ್ಪಡೆಯಾಗುತ್ತವೆ. ಪ್ರತಿಯೊಂದು ಕಂಪ್ಯೂಟರ್ ಅಥವಾ ವಹಿವಾಟು ನಡೆಸಿದ ಡಿವೈಸ್ ಈ ವ್ಯವಸ್ಥೆಯನ್ನು ಕಾಪಾಡಲು ನೆರವಾಗುತ್ತದೆ. ಉದಾಹರಣೆಗೆ ಹೇಳುವುದಿದ್ದರೆ 2009ರ ನಂತರ ನಡೆಸಿದ ಎಲ್ಲಾ ವಹಿವಾಟುಗಳೂ ಬ್ಲಾಕ್‌ಚೈನ್‌ನ ಭಾಗವೇ ಆಗಿದೆ. ಅಪಾಯಗಳೇನು?
ಆರ್ಥಿಕ ಅಪರಾಧಗಳಿಗೆ ರಹದಾರಿ ಮಾಡಿಕೊಟ್ಟಂತಾಗುತ್ತದೆ.
ಮಾದಕ ದ್ರವ್ಯ ಮತ್ತು ಭೂಗತ ದೊರೆಗಳಿಗೆ ಸುಲಭ ಪಾವತಿಗೆ ಅವಕಾಶ.
ಪದೇ ಪದೆ ಮೌಲ್ಯಗಳು ಬದಲಾಗುವುದರಿಂದ ಹೂಡಿಕೆದಾರರಿಗೆ ನಷ್ಟ ಸಾಧ್ಯತೆ. ಬೆಂಗಳೂರಿಗೆ ಮೊದಲ ಸ್ಥಾನ
ಆರ್‌ಬಿಐ ಸುತ್ತೋಲೆ ಜಾರಿಯಲ್ಲಿದ್ದರೂ ಕ್ರಿಪ್ಟೋ ಕರೆನ್ಸಿ ಮೂಲಕ ಪರ್ಯಾಯ ಉದ್ಯೋಗ ಸೃಷ್ಟಿಯ ಕೆಲಸಗಳು ನಡೆದೇ ಇದ್ದವು ಎನ್ನುವುದು ಗಮನಾರ್ಹ. ದೇಶದಲ್ಲಿ ಹತ್ತು ನಗರಗಳಲ್ಲಿ ಇಂಥ ಕೆಲಸಗಳು ನಡೆಯು ತ್ತಿದ್ದವು. ಅದರಲ್ಲಿ ಬೆಂಗಳೂರಿಗೆ ಅಗ್ರಸ್ಥಾನ.
ಸಂಸ್ಥೆಯ ನಿಯಂತ್ರಣಕ್ಕೆ ಒಳಪಟ್ಟ ಎಲ್ಲಾ ವಿತ್ತೀಯ ಸಂಸ್ಥೆಗಳೆಲ್ಲವೂ ಮೂರು ತಿಂಗಳ ಒಳಗಾಗಿ ವಿ.ಸಿ. ವ್ಯವಹಾರದಿಂದ ದೂರ ಸರಿಯಬೇಕು. ಇಲೆಕ್ಟ್ರಾನಿಕ್ ವ್ಯವಸ್ಥೆಯ ಕರೆನ್ಸಿ ಇದು ಮತ್ತು ಸಾಂಪ್ರದಾಯಿಕ ಕರೆನ್ಸಿ ಜತೆಗೆ ಸಂಬಂಧವನ್ನೇ ಹೊಂದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆಗಿರುವ ಕರೆನ್ಸಿಯನ್ನು ರಚಿಸಬ ಹುದು. ಹಣವನ್ನು ನಗದು ಮಾಡಲು, ಬಳಕೆಗೆ, ವಿನಿಮಯಕ್ಕೆ ವಿಶೇಷ ವ್ಯವಸ್ಥೆ ಇದೆ. ಆರ್‌ಬಿಐ ವರ್ಚುವಲ್ ಕರೆನ್ಸಿ (ವಿ.ಸಿ.) ಮೂಲಕ ವಹಿವಾಟು ನಡೆಸುವುದಿಲ್ಲ. ಇದರ ಜತೆಗೆ ಇತರ ಸಂಸ್ಥೆಗಳು, ವ್ಯಕ್ತಿಗಳು ಸೇವೆ ನೀಡುವ ಅಗತ್ಯವಿಲ್ಲ. ಅದನ್ನು ಪಡೆದುಕೊಳ್ಳಲು ವ್ಯಾಲೆಟ್ (wallet) ಎಂಬ ಆ್ಯಪ್ ಇದೆ. ಇದರ ಜತೆಗೆ ಡಿಜಿಟಲ್ ಕರೆನ್ಸಿ ಎಕ್ಸ್‌ಚೇಂಜ್‌ಗಳ ಮೂಲಕವೂ ಸಾಧ್ಯ.
ಆರ್‌ಬಿಐ ಸುತ್ತೋಲೆಯಲ್ಲಿ ಏನಿತ್ತು? ಹಾಲಿ ಇರುವ ಕರೆನ್ಸಿ ಗಳಿಗೆ ಇರುವ ಅಪ ಮೌಲ್ಯ ಭೀತಿ ಇಲ್ಲ. ಅದನ್ನು ಎಲ್ಲಿ ಪಡೆದುಕೊಳ್ಳ ಬಹುದು? ಅದರಲ್ಲಿನ ಖಾತೆಗಳ ನಿರ್ವಹಣೆ, ನೋಂದಣಿ, ಟ್ರೇಡಿಂಗ್, ವ್ಯವಹಾರ ಇತ್ಯರ್ಥ ಪಡಿಸುವುದು, ವರ್ಚುವಲ್ ಟೋಕನ್‌ಗಳ ಆಧಾರದಲ್ಲಿ ಸಾಲ ನೀಡಿಕೆ, ಟೋಕನ್‌ಗಳನ್ನು ಭದ್ರತೆಯನ್ನಾಗಿ ಪಡೆದು ಕೊಳ್ಳುವುದು, ಖಾತೆಗಳನ್ನು ತೆರೆಯುವುದು ಬೇಡ. ಸದಾಶಿವ ಕೆ.