ದಿನ ಕಳೆದಂತೆ ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನವಾಗುತ್ತಿದೆ. ಆ ಸಾಲಿಗೆ ಈಗ “ಕಾಗೆ ಸಾವು ‘ ಎಂಬ ಚಿತ್ರವೂ ಸೇರಿದೆ. ಈ ಚಿತ್ರದ ಹೆಸರೇ ಒಂದು ರೀತಿಯಲ್ಲಿ ವಿಚಿತ್ರವೆನಿಸಿದೆ. ಹಾಗೆಯೇ, ಕಥೆ, ಚಿತ್ರಕಥೆ, ಸಂಭಾಷಣೆಯಲ್ಲೂ ವಿಭಿನ್ನತೆ ಇದೆ ಎಂಬುದರಲ್ಲಿ ಬೇರೆ ಮಾತಿಲ್ಲ. ಒಂದು ಚಿತ್ರದ ಶೀರ್ಷಿಕೆ ಆ ಚಿತ್ರದೊಳಗಿರುವ ಸಾರ ಎಂಥದ್ದು ಎಂಬುದನ್ನು ಹೇಳುತ್ತದೆ. ಅದೇ ರೀತಿ “ಕಾಗೆ ಸಾವು ‘ ಚಿತ್ರ ಕೂಡ ಹೊಸದೊಂದು ಕುತೂಹಲ ಹುಟ್ಟಿಸಿರುವುದಂತೂ ನಿಜ. ಅಂದಹಾಗೆ, ಈ “ಕಾಗೆ ಸಾವು ‘ ಚಿತ್ರದ ಹಿಂದೆ ಮುಖ್ಯ ಆಕರ್ಷಣೆ ಅಂದರೆ, ಅದು ತಬಲಾನಾಣಿ.
ಹೌದು, ಈಗಾಗಲೇ ತಬಲಾನಾಣಿ ಸಾಕಷ್ಟು ಬಿಝಿಯಾಗಿದ್ದಾರೆ. ಅವರು ಹಿಂದೆ ಮಾಡಿದ್ದ ಹಲವು ಸೂಪರ್ ಹಿಟ್ ಚಿತ್ರಗಳು ಕಣ್ಣ ಮುಂದೆಯೇ ಇವೆ. ಅವರ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಸಾಕಷ್ಟು ಚರ್ಚೆಗೆ ಒಳಗಾಗಿದ್ದು ಎಲ್ಲರಿಗೂ ಗೊತ್ತಿದೆ. ಅದೊಂದು ರೀತಿಯ ಮನರಂಜನೆಯ ಜೊತೆಗೆ ಸಣ್ಣದ್ದೊಂದು ಸಂದೇಶ ಸಾರಿದ ಚಿತ್ರವಾಗಿ ಹೊರಹೊಮ್ಮಿತು. ನಂತರ ಅವರು “ಕೆಇಬಿ ಕೆಂಪಣ್ಣ’ ಎಂಬ ಹೆಸರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಆರು ದಿನಗಳ ಕಾಲ ಚಿತ್ರೀಕರಣ ನಡೆದರೆ, ಆ ಚಿತ್ರ ಮುಗಿಯಲಿದೆ. ಈಗ ಅವರು “ಕಾಗೆ ಸಾವು ‘ ಚಿತ್ರದ ಆಕರ್ಷಣೆ.
ಇನ್ನು, ಈ ಚಿತ್ರಕ್ಕೆ ತಬಲಾನಾಣಿ ಅವರು, ಕಥೆ ಕೇಳಿದೊಡನೆ ಈ ಶೀರ್ಷಿಕೆಯನೇ° ಸೂಚಿಸಿದ್ದಾರೆ. ಅದು ಎಲ್ಲರಿಗೂ ಇಷ್ಟವಾಗಿ ಕೊನೆಗೆ ಅದೇ ಫಿಕ್ಸ್ ಆಗಿದೆ. ಚಿತ್ರವನ್ನು ಪೃಥ್ವಿ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದ್ದು, ಅವರ ಕಥೆ ಕೇಳಿದ ಮಧು ದೀಕ್ಷಿತ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಿಂದೆ ಮಧು ದೀಕ್ಷಿತ್ ಅವರು “ಡಿಂಗ’ ಚಿತ್ರ ಮಾಡಿದ್ದರು. ಈಗ “ಕಾಗೆ ಸಾವು’ ಹಿಂದೆ ಇದ್ದಾರೆ. ತಬಲಾನಾಣಿ ಅವರು ಸದ್ಯಕ್ಕೆ 2 ಸ್ಕ್ರಿಪ್ಟ್ಗಳ ಕೆಲಸದಲ್ಲಿ ತೊಡಗಿದ್ದಾರೆ. ಅವರು “ಕಾಗೆ ಸಾವು’ ಚಿತ್ರದಲ್ಲಿ ನಾಣಿ ಅವರದು ಒಂದು ರೀತಿಯ ಉಡಾ ಫೆ ಯಿಂದ ಇರುವ ಪಾತ್ರ ನಿರ್ವಹಿಸುತ್ತಿದ್ದಾರೆ.
ಅಲ್ಪಸ್ವಲ್ಪ ಓದಿ ಕೊಂಡಿ ರುವ ಆ ಪಾತ್ರ, ಊರಿನ ಜನರ ಮುಂದೆ ಬಿಲ್ಡಪ್ ಕೊಡುತ್ತಿರುತ್ತೆ. ನನಗೆ ಪ್ರಧಾನಿ ಗೊತ್ತು, ನಿನ್ನೆಯಷ್ಟೇ ನಾನು ಸಿಎಂ ಮನೆಗೆ ಹೋಗಿಬಂದೆ. ಈ ರೀತಿಯ ಮಾತುಗಳ ಮೂಲಕವೇ ಒಂದಷ್ಟು ಮನರಂಜನೆ ಕೊಡುವ ಪಾತ್ರ ಮಾಡುತ್ತಿದ್ದಾರಂತೆ. ಇನ್ನಷ್ಟು ಹೊಸ ಪಾತ್ರಗಳೂ ಚಿತ್ರದಲ್ಲಿರಲಿವೆ. ಸದ್ಯಕ್ಕೆ ಲಾಕ್‌ಡೌನ್ ಸಡಿಲಗೊಂಡು, ಚಿತ್ರೀಕರಣಕ್ಕೆ ಅನುಮತಿ ಕೊಟ್ಟರೆ ಶೂಟಿಂಗ್ ಹೋಗಲು ಚಿತ್ರತಂಡ ಅಣಿಯಾಗುತ್ತಿದೆ ಎಂಬುದು ನಾಣಿ ಅವರ ಮಾತು.