ಗಂಗಾವತಿ: ದೇಶದ ದೆಸೆ, ದಿಕ್ಕು ಬದಲಿಸುವ ಲೋಕಸಭಾ ಚುನಾವಣೆ ವಿಶ್ವದಲ್ಲೇ ಮಹತ್ವ ಪಡೆದಿದೆ. ಆದರೆ ಬಿಜೆಪಿ ಹಾಗೂ ಪ್ರಧಾನಿ ಚುನಾವಣಾ ಭಾಷಣಗಳಲ್ಲಿ ಪದೇ ಪದೇ ಮಟನ್, ಮಚಲಿ, ಮುಸ್ಲಿಂ ಮತ್ತು ಮಂಗಳಸೂತ್ರದ ಬಗ್ಗೆ ಚರ್ಚೆ ಮಾಡಿ ಜನರನ್ನು ಭಾವನಾತ್ಮಕ ಹಾಗೂ ಕ್ಷುಲ್ಲಕ ರಾಜಕಾರಣ ಮಾಡುತ್ತ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಕಾಂಗ್ರೆಸ್ ಹಿರಿಯ ಮುಖಂಡ ಎಂಎಲ್ಸಿ ಬಿ.ಕೆ.ಹರಿಪ್ರಸಾದ ಹೇಳಿದರು.
ಅವರು ನಗರದ ಮಾಜಿ ಸಂಸದ ಎಚ್.ಜಿ.ರಾಮುಲು ಅವರ ನಿವಾಸಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 54 ವರ್ಷ ಕಾಂಗ್ರೆಸ್ ಆಳ್ವಿಕೆಯಲ್ಲಿ ದೇಶ ಆಹಾರ, ಕೈಗಾರಿಕಾ, ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಸ್ವಾವಲಂಭನೆ ಜತೆಗೆ ಬ್ಯಾಂಕ್ ಗಳ ರಾಷ್ಟ್ರೀಕರಣ, 7,000 ಡ್ಯಾಮ್ ಗಳ ನಿರ್ಮಾಣ, ವಿಶ್ವವಿದ್ಯಾಲಯಗಳ ನಿರ್ಮಾಣ, ಏಮ್ಸ್ ಗಳ ನಿರ್ಮಾಣ ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಣೆ ಮಾಡುವ ಮೂಲಕ ಭಾರತ ಸ್ವಾತಂತ್ರ್ಯದ ಹೋರಾಟಗಾರರ ಕನಸನ್ನು ಕಾಂಗ್ರೆಸ್ ನನಸು ಮಾಡಿದೆ ಎಂದು ಹೇಳಿದರು.
ಸಂಸದ ಅನಂತ್ ಕುಮಾರ್ ಹೆಗಡೆ, ರಾಜಸ್ಥಾನದ ನಾಗಪೂರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು ಸಂವಿಧಾನ ಬದಲಾಯಿಸಲು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುತ್ತಿದ್ದಾರೆ. ಈ ಬಾರಿ 400 ಸೀಟುಗಳು ಬಂದರೆ ಖಚಿತವಾಗಿ ಸಂವಿಧಾನವನ್ನು ಬದಲಿಸುವ ಷಡ್ಯಂತ್ರ ಇವರದ್ದಾಗಿದೆ. ಆದ್ದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಗಾಗಿ ಈ ಬಾರಿ ದೇಶದಲ್ಲಿ ಎನ್ ಡಿ ಎ ಒಕ್ಕೂಟವನ್ನು ಸೋಲಿಸಿ ಕಾಂಗ್ರೆಸ್ ಒಕ್ಕೂಟವನ್ನು ಗೆಲ್ಲಿಸಬೇಕಿದೆ ಎಂದರು.
ಹತ್ತು ವರ್ಷ ದೇಶದಲ್ಲಿ ಅಧಿಕಾರ ಮಾಡಿದ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ಮೋದಿ ಈ ದೇಶದ ಪ್ರಗತಿ ಹಾಗೂ ಭವಿಷ್ಯದ ದೃಷ್ಟಿಯಿಂದ ಬಿಜೆಪಿಯ ಪ್ರಣಾಳಿಕೆ ತಯಾರಿಕೆ ಮಾಡಿಲ್ಲ. ದೇಶದ ಸಂವಿಧಾನಕ್ಕೆ ವಿಷಯಗಳು ಸ್ಪಷ್ಟವಾಗಿಲ್ಲ. ಪ್ರಧಾನಮಂತ್ರಿಗಳು ಜಾತಿ, ಧರ್ಮದ ಮತ್ತು ಪ್ರಾಂತವಾರು ವಿಷ ಬೀಜ ಬಿತ್ತುವ ಭಾಷಣವನ್ನು ಮಾಡುವ ಮೂಲಕ ಜನರನ್ನು ಭಾವನಾತ್ಮಕ ಮತ್ತು ಧರ್ಮ, ಜಾತಿ ಆಧಾರದಲ್ಲಿ ಹೊಡೆದು ಮತವಾಗಿ ಪರಿವರ್ತಿಸಲು ಷಡ್ಯಂತ್ರರ ನಡೆಸುತ್ತಿದ್ದಾರೆ ಎಂದು ಹೇಳಿದರು.
ದೇಶದ ಚುಕ್ಕಾಣಿ ಹಿಡಿದಿರುವ ಮೋದಿಯವರು ಸರ್ವ ರಾಜ್ಯಗಳನ್ನು ಸರ್ವ ಜನರನ್ನು ಸಮನಾಗಿ ಕಾಣಬೇಕಿದೆ. ದಕ್ಷಿಣ ಭಾರತವನ್ನು ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬರ ಪರಿಹಾರದ 18 ಸಾವಿರ ಕೋಟಿ ಸೇರಿದಂತೆ ಕೋಟ್ಯಾಂತರ ರೂ.ಗಳ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದರು.
ಆದ್ದರಿಂದ ದೇಶದ ಸಮಗ್ರ ಚಿಂತನೆ ಮಾಡುವ ಕಾಂಗ್ರೆಸ್ ಪಕ್ಷದ ಒಕ್ಕೂಟಕ್ಕೆ ಜನರು ಬೆಂಬಲಿಸಲು ನಿರ್ಧರಿಸಿದ್ದು, ಬಿಜೆಪಿಯ ಅಜೆಂಡವನ್ನು ಸಿದ್ದರಾಮಯ್ಯ ಮಾಡಲು ಲೋಕಸಭಾ ಚುನಾವಣೆ ವೇದಿಕೆಯಾಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಕುರಿತು ಪಕ್ಷ ಬಿಜೆಪಿ ಮತ್ತು ಕೆಲ ಮಾಧ್ಯಮ ಚುನಾವಣೆ ಗೊಂದಲ ಸೂಚಿಸುತ್ತಿದ್ದು, ಇದು ದೇಶದ ಚುನಾವಣೆ ದೇಶದ ವಿಷಯಗಳು ಮಾತ್ರ ಪರಿಗಣಿಗೆ ಬರುತ್ತವೆ. ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಎಂ ಸರ್ವೇಶ್ ಸೇರಿದಂತೆ ಅನೇಕರಿದ್ದರು.