Advertisement

Tricolour Painted; ತ್ರಿವರ್ಣ ಧ್ವಜ ಬಣ್ಣ ಹೊಂದಿದ್ದ ಯುವತಿಗೆ ಪ್ರವೇಶ ನಿರಾಕರಣೆ

01:25 AM Apr 18, 2023 | Team Udayavani |

ಚಂಡೀಗಢ: ಮುಖದ ಮೇಲೆ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡಿದ್ದ ಯುವತಿಗೆ ಪಂಜಾಬ್‌ನ ಅಮೃತಸರ ದಲ್ಲಿರುವ ಗೋಲ್ಡನ್‌ ಟೆಂಪಲ್‌ (ಸ್ವರ್ಣ ಮಂದಿರ)ಗೆ ಪ್ರವೇಶ ನಿರಾಕರಿಸಲಾಗಿದೆ. ಜತೆಗೆ ಯುವತಿಯನ್ನು ಉದ್ದೇಶಿಸಿ “ಇದು ಪಂಜಾಬ್‌ ಭಾರತ ಅಲ್ಲ’ ಎಂದು ಗದರಿಸಿದ ಪ್ರಕರಣ ಕೂಡ ವಿವಾದಕ್ಕೆ ಕಾರಣವಾಗಿದೆ.

Advertisement

ವಾಘಾ ಬಾರ್ಡರ್‌ನಲ್ಲಿ ಸೇನಾ ಪ್ರದರ್ಶನಕ್ಕೆ ತೆರಳಿದ್ದ ಯುವತಿ ಕೆನ್ನೆ ಮೇಲೆ ತ್ರಿವರ್ಣದ ಬಣ್ಣ ಬಳಿದುಕೊಂಡಿದ್ದರು. ಅದೇ ಬಣ್ಣದಲ್ಲೇ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ್ದರು. ಅಲ್ಲಿ ಸಿಬಂದಿ ತಡೆದಿದ್ದಾರೆ. ಜತೆಗೆ “ಇದು ಭಾರತವಲ್ಲ, ಇದು ಪಂಜಾಬ್‌’ ಎಂದು ಗದರಿಸಿದ್ದಾರೆ. ಒಳ ಪ್ರವೇಶಿಸಲೇ ಬೇಕು ಎಂದಾದರೆ ತ್ರಿವರ್ಣ ಧ್ವಜ ಬಣ್ಣ ತೊಳೆದುಕೊಂಡು ಬರಬೇಕು ಎಂದು ಹೇಳಿದ್ದಾನೆ. ಹಾಗಿದ್ದರೆ ಇದು ಭಾರತ ಅಲ್ಲವೇ ಎಂದು ಕೇಳಿದಾಗ ಅಲ್ಲಿ ಇದ್ದ ಸಿಬಂದಿ ಅಲ್ಲ ಎಂದು ಉದ್ಧಟತನದಿಂದ ಹೇಳಿದ್ದಾನೆ. ಈ ವೀಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದ್ದು, ತೀವ್ರ ಖಂಡನೆಯೂ ವ್ಯಕ್ತವಾಗಿದೆ.

ಕ್ಷಮೆ ಯಾಚನೆ: ಈ ಕುರಿತು ಶಿರೋಮಣಿ ಗುರುದ್ವಾರ ಪರಬಂಧಕ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಚರಣ್‌ ಸಿಂಗ್‌ ಪ್ರತಿಕ್ರಿಯಿಸಿದ್ದು, ಯುವತಿಯ ಕೆನ್ನೆ ಮೇಲೆ ತ್ರಿವರ್ಣವಿತ್ತು ಆದರೆ ಅಶೋಕ ಚಕ್ರವಿರಲಿಲ್ಲ ಹಾಗಾಗಿ ಅದನ್ನು ರಾಷ್ಟ್ರೀಯ ಧ್ವಜ ಸೂಚಕವೆಂದು ಪರಿಗಣಿಸಿಲ್ಲ. ಆದಾಗ್ಯೂ ಸಿಬಂದಿಯಿಂದಾದ ಸಮಸ್ಯೆಗೆ ಕ್ಷಮೆ ಕೋರುತ್ತೇವೆ. ಎಲ್ಲ ಪವಿತ್ರ ಕ್ಷೇತ್ರಗಳಿಗೂ ಒಂದೊಂದು ನಿಯಮವಿದೆ ಅದರಂತೆ ಬಣ್ಣ ಬಳಿದುಕೊಂಡು ಒಳಗೆ ಬರಬಾರದೆಂಬ ಉದ್ದೇಶದಿಂದ ಸಿಬಂದಿ ಆ ರೀತಿ ವರ್ತಿಸಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next