Advertisement
ಮಂಗಳವಾರ ಸಾಂಪ್ರದಾಯಿಕ ಎದುರಾಳಿ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಶರಣಾದ ಬಳಿಕ ಸ್ಟೋಕ್ಸ್ ಈ ಪ್ರತಿಕ್ರಿಯೆ ನೀಡಿದ್ದಾರೆ. 64 ರನ್ ಜಯದೊಂದಿಗೆ ಆಸ್ಟ್ರೇಲಿಯ ಸೆಮಿಫೈನಲ್ ತಲುಪಿದರೆ, ಇಂಗ್ಲೆಂಡ್ ಮೇಲೀಗ ತೀವ್ರ ಒತ್ತಡ ಬಿದ್ದಿದೆ.
Related Articles
Advertisement
ಎಕ್ಸ್‌ಟ್ರಾ ಇನ್ನಿಂಗ್ಸ್– ಇಂಗ್ಲೆಂಡ್ ವಿರುದ್ಧ ಸತತ 6 ಏಕದಿನ ಪಂದ್ಯಗಳ ಸೋಲಿನ ಸರಪಳಿಯನ್ನು ಆಸ್ಟ್ರೇಲಿಯ ಕಡಿದುಕೊಂಡಿತು.
– ಇಂಗ್ಲೆಂಡ್ ವಿರುದ್ಧ ಆಡಿದ ಸತತ 4 ವಿಶ್ವಕಪ್ ಪಂದ್ಯಗಳಲ್ಲಿ ಆಸ್ಟ್ರೇಲಿಯ ಜಯ ಸಾಧಿಸಿತು. ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಕೊನೆಯ ಸಲ ಆಸ್ಟ್ರೇಲಿಯವನ್ನು ಸೋಲಿಸಿದ್ದು 1992ರಲ್ಲಿ.
– ಆರನ್ ಫಿಂಚ್ ಇಂಗ್ಲೆಂಡ್ ವಿರುದ್ಧ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ನಾಯಕ. 2007ರಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅಜೇಯ 89 ರನ್ ಹೊಡೆದದ್ದು ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.
– ಆರನ್ ಫಿಂಚ್ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 2 ಶತಕ ಬಾರಿಸಿದ ಏಕೈಕ ಆಟಗಾರ. ಕಳೆದ ಸಲ ಮೆಲ್ಬರ್ನ್ ಮುಖಾಮುಖೀಯಲ್ಲಿ ಫಿಂಚ್ 135 ರನ್ ಹೊಡೆದಿದ್ದರು.
– ಫಿಂಚ್ ಇಂಗ್ಲೆಂಡ್ ವಿರುದ್ಧ 7 ಶತಕ ಬಾರಿಸಿದರು. ಇದು ಆಸ್ಟ್ರೇಲಿಯದ ಆಟಗಾರನೊಬ್ಬ ನಿರ್ದಿಷ್ಟ ತಂಡದೆದುರು ಬಾರಿಸಿದ ಅತ್ಯಧಿಕ ಶತಕ. ರಿಕಿ ಪಾಂಟಿಂಗ್ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ತಲಾ 6, ಆ್ಯಡಂ ಗಿಲ್‌ಕ್ರಿಸ್ಟ್ ಶ್ರೀಲಂಕಾ ವಿರುದ್ಧ 6 ಶತಕ ಹೊಡೆದದ್ದು ಆಸೀಸ್ ದಾಖಲೆಯಾಗಿತ್ತು.
– ಫಿಂಚ್ ಈ ಪಂದ್ಯಾವಳಿಯ ಸತತ 4 ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್ ಹೊಡೆದರು. ಅವರು ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ 2ನೇ ನಾಯಕ. ಗ್ರೇಮ್ ಸ್ಮಿತ್ ಮೊದಲಿಗ (2007).
– ಜಾಸನ್ ಬೆಹೆÅಂಡಾಫ್ì (44ಕ್ಕೆ 5) ಮತ್ತು ಮಿಚೆಲ್ ಸ್ಟಾರ್ಕ್ (43ಕ್ಕೆ 4) ಒಟ್ಟು 9 ವಿಕೆಟ್‌ಗಳನ್ನು ಹಂಚಿಕೊಂಡರು. ಇದು ಏಕದಿನ ಇತಿಹಾಸದಲ್ಲಿ ಎಡಗೈ ಆರಂಭಿಕ ಬೌಲಿಂಗ್ ಜೋಡಿಯೊಂದು ಉರುಳಿಸಿದ ಅತ್ಯಧಿಕ ಸಂಖ್ಯೆಯ ವಿಕೆಟ್.
– ಮಿಚೆಲ್ ಸ್ಟಾರ್ಕ್ ವಿಶ್ವಕಪ್‌ನಲ್ಲಿ 5 ಸಲ 4 ಪ್ಲಸ್ ವಿಕೆಟ್ ಕಿತ್ತ 2ನೇ ಬೌಲರ್. ಇಮ್ರಾನ್ ತಾಹಿರ್ ಮೊದಲಿಗ. ಕಳೆದ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ತಾಹಿರ್ ಈ ಸಾಧನೆ ಪೂರ್ತಿಗೊಳಿಸಿದ್ದರು.
– ವಾರ್ನರ್-ಫಿಂಚ್ ಈ ವಿಶ್ವಕಪ್‌ನಲ್ಲಿ 3 ಶತಕದ ಜತೆಯಾಟಗಳ ಜಂಟಿ ದಾಖಲೆ ನಿರ್ಮಿಸಿದರು. ಇವರಿಗೂ ಮೊದಲು ಅರವಿಂದ ಡಿ ಸಿಲ್ವ-ಅಸಂಕ ಗುರುಸಿನ್ಹ (1996), ಆ್ಯಡಂ ಗಿಲ್‌ಕ್ರಿಸ್ಟ್-ಮ್ಯಾಥ್ಯೂ ಹೇಡನ್ (2007) ಮತ್ತು ಕುಮಾರ ಸಂಗಕ್ಕರ-ತಿಲಕರತ್ನೆ ದಿಲ್ಶನ್ (2015) ಈ ಸಾಧನೆ ಮಾಡಿದ್ದರು.
– ವಾರ್ನರ್-ಫಿಂಚ್ ಈ ಕೂಟದಲ್ಲಿ 6ನೇ 50 ಪ್ಲಸ್ ರನ್ ಜತೆ ಯಾಟ ನಡೆಸಿದರು.ಇದು ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಜೋಡಿಯೊಂದು ದಾಖಲಿಸಿದ 2ನೇ ಅತ್ಯಧಿಕ 50 ಪ್ಲಸ್ ರನ್ ಜತೆಯಾಟ. 2007ರಲ್ಲಿ ಗಿಲ್‌ಕ್ರಿಸ್ಟ್-ಹೇಡನ್ 7 ಸಲ ಈ ಸಾಧನೆ ಮಾಡಿದ್ದು ದಾಖಲೆ.